For the best experience, open
https://m.hosakannada.com
on your mobile browser.
Advertisement

Ration card: ಹೊಸ ರೇಷನ್ ಕಾರ್ಡ್ ನಿರೀಕ್ಷೆಯಲ್ಲಿದ್ದವರಿಗೆ ಬಿಗ್ ಶಾಕ್ ; ಸರ್ಕಾರದಿಂದ ಬಂತು ಹೊಸ ರೂಲ್ಸ್ !!

06:54 AM Nov 18, 2023 IST | ಹೊಸ ಕನ್ನಡ
UpdateAt: 06:54 AM Nov 18, 2023 IST
ration card  ಹೊಸ ರೇಷನ್ ಕಾರ್ಡ್ ನಿರೀಕ್ಷೆಯಲ್ಲಿದ್ದವರಿಗೆ ಬಿಗ್ ಶಾಕ್   ಸರ್ಕಾರದಿಂದ ಬಂತು ಹೊಸ ರೂಲ್ಸ್

New Ration card: ರಾಜ್ಯದ ಜನರು ಹೊಸ ರೇಷನ್ ಕಾರ್ಡ್ ಪಡೆಯುವ ನಿರೀಕ್ಷೆಯಲ್ಲಿದ್ದರು. ಸರ್ಕಾರವು ಕೂಡ ಈ ಕುರಿತಂತೆ ಅಪ್ಡೇಟ್ ಅನ್ನು ನೀಡಿದ್ದು ಸದ್ಯದಲ್ಲೇ ಹೊಸ ರೇಷನ್ ಕಾರ್ಡ್ ಕೂಡ ವಿತರಣೆ ಮಾಡೋದಾಗಿ ತಿಳಿಸಿತ್ತು. ಆದರೀಗ ಹೊಸ ರೇಷನ್ ಕಾರ್ಡ್ ನಿರೀಕ್ಷೆಯಲ್ಲಿದವರಿಗೆ ಬಿಗ್ ಶಾಕ್ ಎದುರಾಗಿದೆ.

Advertisement

ಹೌದು, ಹೊಸ ಪಡಿತರ ಚೀಟಿಗಳನ್ನು(new Ration card) ವಿತರಿಸುವ ಕುರಿತು ಸರ್ಕಾರ ಹೊಸ ನಿಯಮವನ್ನು ತಂದಿದ್ದು, ಒಟ್ಟಾರೆ ಈಗಿರುವ ಪಡಿತರ ಚೀಟಿಗಳ ಸಂಖ್ಯೆ ಹೆಚ್ಚಿಸುವಂತಿಲ್ಲ ಎಂದು ಹೇಳಿದೆ. ಅಂದರೆ ಈಗ ಹೊಸದಾಗಿ ವಿತರಿಸಿದಷ್ಟೇ ಪ್ರಮಾಣದಲ್ಲಿ ಹಳೆಯ ಪಡಿತರ ಚೀಟಿಗಳನ್ನು ರದ್ದುಪಡಿಸಬೇಕು ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಆದೇಶವವನ್ನು ಹೊರಡಿಸಿದೆ.

ಅಂದಹಾಗೆ ರಾಜ್ಯದಲ್ಲಿ 10.88 ಲಕ್ಷ ಅಂತ್ಯೋದಯ ಮತ್ತು 1.16 ಕೋಟಿ ಬಿಪಿಎಲ್‌ ಕಾರ್ಡ್‌ದಾರರು ಇದ್ದಾರೆ. ಹೊಸ ಬಿಪಿಎಲ್‌ ಪಡಿತರ ಚೀಟಿಗಾಗಿ 2.95 ಲಕ್ಷ ಅರ್ಜಿಗಳು ಸಲ್ಲಿಕೆಯಾಗಿವೆ’ ಎಂದು ಸಚಿವ ಕೆ.ಎಚ್‌. ಮುನಿಯಪ್ಪ ಮಾಹಿತಿ ನೀಡಿದ್ದು ಇದರ ಬೆನ್ನಲ್ಲೇ ಇಲಾಖೆಯ ಆದೇಶ ಹೊರಬಂದಿದೆ.

Advertisement

ಯಾರ ಕಾರ್ಡ್ ರದ್ದಾಗುತ್ತೆ?
ಸರ್ಕಾರ ರೇಷನ್ ಕಾರ್ಡ್ ರದ್ದಾಗುವ ಕುರಿತು ಮೊದಲಿನಿಂದಲೂ ಜನರಿಗೆ ಎಚ್ಚರಿಕೆ ನೀಡುತ್ತಿತ್ತು. ಅಂದರೆ ಸುಮಾರು ಆರು ತಿಂಗಳಿನಿಂದ ಯಾರು ರೇಷನ್ ಪಡೆದಿಲ್ಲವೋ ಅಂತವರ ರೇಷನ್ ಕಾರ್ಡ್ ರದ್ದು ಮಾಡುತ್ತೇವೆ ಎಂದು ಎಚ್ಚರಿಕೆ ನಡೆದಿತ್ತು ಆದರೂ ಕೂಡ ಜನರು ಎಚ್ಚೆತ್ತುಕೊಂಡಿಲ್ಲ. ಈಗ ಅಂತವರ ಕಾರ್ಡ್ ರದ್ಧುಮಾಡಿ ಹೊಸದಾಗಿ ಅರ್ಜಿ ಹಾಕಿದವರಿಗೆ ಅನುವು ಮಾಡಿಕೊಡಲಿದೆ.

ಇದನ್ನೂ ಓದಿ: Opposition leader : ವಿಪಕ್ಷ ನಾಯಕನಾಗಿ ಆರ್ ಅಶೋಕ್ ಆಯ್ಕೆ - ಬಿಜೆಪಿಯಿಂದ ಘೋಷಣೆ !!

Advertisement
Advertisement