ಮುಖಪುಟಸುದ್ದಿರಾಜಕೀಯಅಂಕಣಮನರಂಜನೆಸಿನೆಮಾ-ಕ್ರೀಡೆಲೈಫ್ ಸ್ಟೈಲ್ಕ್ರೀಡೆ
Advertisement

Bank Fraud: ನಕಲಿ ಸಿಬಿಐ ಗ್ಯಾಂಗ್ ನಿಂದ ಹಿರಿಯ ಅಧಿಕಾರಿಗೆ ಮಹಾ ವಂಚನೆ - 15 ನಿಮಿಷದಲ್ಲಿ ಹಿಂದಿರುಗಿಸುವುದಾಗಿ 85 ಲಕ್ಷ ರೂ. ಪಂಗನಾಮ !!

Bank Fraud: ನಕಲಿ ಸಿಬಿಐ ಗ್ಯಾಂಗ್ ನ ಜಾಲವೊಂದು ಬಹುರಾಷ್ಟ್ರೀಯ ಸಂಸ್ಥೆಯೊಂದರ ನಿವೃತ್ತ ಹಿರಿಯ ಅಧಿಕಾರಿಯೊಬ್ಬರಿಗೆ 15 ನಿಮಿಷಗಳಲ್ಲಿ ಹಣವನ್ನು ವಾಪಸ್ ನೀಡುವುದಾಗಿ ಹೇಳಿ 85 ಲಕ್ಷ ರೂಪಾಯಿ ಪಂಗನಾಮ ಹಾಕಿದೆ.
01:16 PM Jun 10, 2024 IST | ಸುದರ್ಶನ್
UpdateAt: 01:16 PM Jun 10, 2024 IST
Advertisement

Bank Fraud: ನಕಲಿ ಸಿಬಿಐ ಗ್ಯಾಂಗ್ ನ ಜಾಲವೊಂದು ಬಹುರಾಷ್ಟ್ರೀಯ ಸಂಸ್ಥೆಯೊಂದರ ನಿವೃತ್ತ ಹಿರಿಯ ಅಧಿಕಾರಿಯೊಬ್ಬರಿಗೆ 15 ನಿಮಿಷಗಳಲ್ಲಿ ಹಣವನ್ನು ವಾಪಸ್ ನೀಡುವುದಾಗಿ ಹೇಳಿ 85 ಲಕ್ಷ ರೂಪಾಯಿ ಪಂಗನಾಮ ಹಾಕಿರುವ ಘಟನೆಯೊಂದು ಬೆಳಕಿಗೆ ಬಂದಿದೆ.

Advertisement

Solar scheme: ಸೂರ್ಯಘರ್ ಉಚಿತ ವಿದ್ಯುತ್ ಯೋಜನೆ: ಪರ್ಯಾಯ ವಿದ್ಯುತ್ ಬಳಕೆಗೆ ಕೇಂದ್ರದಿಂದ ಹೊಸ ಯೋಜನೆ!

ಆಂಧ್ರಪ್ರದೇಶದ ವಿಶಾಖಪಟ್ಟಣಂ(Vishakapattanam) ನಲ್ಲಿ ಸಿಬಿಐ(Facke CBI), ಕಸ್ಟಮ್ಸ್, ನಾರ್ಕೊಟಿಕ್ಸ್ ಹಾಗೂ ಆದಾಯ ತೆರಿಗೆ ಅಧಿಕಾರಿಗಳ ಸೋಗಿನಲ್ಲಿ ವಂಚಕರು ಈ ಕೃತ್ಯ ಎಸಗಿದ್ದು ನಕಲಿ ಅಧಿಕಾರಿಗಳ ಗ್ಯಾಂಗ್ ಚೆಕ್ ಮೂಲಕ ಹಣ ಪಡೆದು, ಅದನ್ನು ರಾಣ ಗಾರ್ಮೆಂಟ್ಸ್(Rana Garments) ಎಂಬ ಕಂಪನಿಗೆ ವರ್ಗಾವಣೆ ಮಾಡಿದ್ದಾರೆ ಎಂದು ತಿಳಿದುಬಂದಿದೆ.

Advertisement

ಪ್ರಕರಣ ದಾಖಲಿಸಿಕೊಂಡ ಪೋಲೀಸರು ತನಿಖೆ ಶುರುಮಾಡಿದ್ದಾರೆ. ಅಲ್ಲದೆ ವಿಶಾಖಪಟ್ಟಣಂ ಕ್ರೈಂ ಬ್ರಾಂಚ್ ಪ್ರಕರಣವನ್ನು ಕೈಗೆತ್ತಿಕೊಂಡಿದೆ. ತನಿಖೆ ವೇಳೆ ಕೆಲವು ಸುಳಿವುಗಳು ಸಿಕ್ಕಿದ್ದು ರಾಣ ಗಾರ್ಮೆಂಟ್ಸ್ ಎಂಬ ಕಂಪನಿಯ ಖಾತೆ ದೆಹಲಿಯ ಉತ್ತಮ್ ನಗರದಲ್ಲಿನ ಹೆಚ್ ಡಿಎಫ್ ಸಿ(HDFC) ಖಾತೆಯಾಗಿತ್ತು. ಈ ಖಾತೆಯಿಂದ ಹಣವನ್ನು ಭಾರತದಾದ್ಯಂತ 105 ವಿವಿಧ ಖಾತೆಗಳಿಗೆ ವರ್ಗಾವಣೆ ಮಾಡಲಾಗಿದೆ ಎಂದು ತಿಳಿದುಬಂದಿದೆ.

ವಂಚನೆಗೆ ಒಳಗಾಗಿರುವ ಹಾಗೂ ಭಾರತದಲ್ಲಿ ವ್ಯಾಪಕ ಕಾರ್ಯಾಚರಣೆಗಳನ್ನು ಹೊಂದಿರುವ ಜರ್ಮನಿಯ ಪ್ರಧಾನ ಕಚೇರಿಯ ಸಂಸ್ಥೆಯೊಂದರ 57 ವರ್ಷದ ನಿವೃತ್ತ ಅಸೋಸಿಯೇಟ್ ಜನರಲ್ ಮ್ಯಾನೇಜರ್ ಮಾತನಾಡಿ 'ನನಗೆ ಮೂರು ವರ್ಷಗಳ ಸೇವಾ ಅವಧಿ ಉಳಿದಿತ್ತು. ಆದರೆ ನನ್ನ ಮಗನನ್ನು ಕಾಲೇಜಿಗೆ ಕಳುಹಿಸಲು ನನಗೆ ಸಮಯ ಬೇಕಾಗಿದ್ದರಿಂದ ಸ್ವಯಂ ನಿವೃತ್ತಿ ತೆಗೆದುಕೊಂಡೆ. ನನಗೆ ಮೇ 2 ರಂದು ನಿವೃತ್ತಿ ಪರಿಹಾರ ಸಿಕ್ಕಿತು. ನನ್ನ ಮಗನ ವೀಸಾ ಸಂಬಂಧಿತ ಪ್ರಕ್ರಿಯೆ ಮೇ 17 ರಂದು ನಡೆಯಬೇಕಿತ್ತು.

ಆದರೆ ಮೇ 14 ರಂದು, ನನ್ನ ದಾಖಲೆಗಳನ್ನು ಪರಿಶೀಲಿಸಿದ ನಂತರ ಹಣ ಹಿಂದಿರುಗಿಸುವುದಾಗಿ ಹೇಳಿ ₹ 85 ಲಕ್ಷವನ್ನು ಕಳುಹಿಸುವಂತೆ ಗ್ಯಾಂಗ್ ನನ್ನನ್ನು ವಂಚಿಸಿದೆ. ವಿಶಾಖಪಟ್ಟಣಂನಲ್ಲಿರುವ ಬ್ಯಾಂಕ್‌ನಲ್ಲಿ ಕೆಲವು ಒಳಗಿನವರು ಭಾಗಿಯಾಗಿರಬಹುದು. ಯಾಕೆಂದರೆ ಗ್ಯಾಂಗ್‌ಗೆ ನಿವೃತ್ತಿಯ ನಂತರ ಅವರು ಪಡೆದ ನಿಖರವಾದ ಮೊತ್ತ ಸೇರಿದಂತೆ ಅವರ ಖಾತೆಯ ಬಗ್ಗೆ ಎಲ್ಲವೂ ತಿಳಿದಿತ್ತು. ಹೀಗಾಗಿ ಹತ್ತಿರದ ಎಚ್‌ಡಿಎಫ್‌ಸಿ ಬ್ಯಾಂಕ್‌ಗೆ ಹೋಗಿ ಚೆಕ್ ಡ್ರಾಪ್ ಮಾಡಲು ಗ್ಯಾಂಗ್ ಹೇಳಿತು" ಎಂದು ಅವರು ತಿಳಿಸಿದ್ದಾರೆ.

Modi Salary: 3ನೇ ಬಾರಿ ಪ್ರಧಾನಿಯಾದ ಮೋದಿಯ ತಿಂಗಳ ಸಂಬಳ ಎಷ್ಟು?!

Advertisement
Advertisement