Bharat Rice: ಭಾರತ್ ಅಕ್ಕಿ ಈಗ ಮಾಲ್‌ಗಳಲ್ಲೂ ಲಭ್ಯ
ಕೇಂದ್ರ ಸರಕಾರ ಎಂದು ನಾಫೆಡ್ ಕರ್ನಾಟಕ ವಿಭಾಗದ ಬಡವರಿಗಾಗಿ ವಿತರಿಸುತ್ತಿರುವ 29 ರೂ. ಮುಖ್ಯಸ್ಥೆ ಜ್ಯೋತಿ ಪಾಟೀಲ್ ತಿಳಿಸಿದರು.
ಇದನ್ನೂ ಓದಿ: Bank Holiday: ಮಾ.31 ರಂದು ಭಾನುವಾರ ಬ್ಯಾಂಕ್ ಗೆ ರಜೆ ಇಲ್ಲ
ಮಾಲ್‌ಗಳಲ್ಲಿ ಮಾರಾಟ ಮಾಡಲು ನ್ಯಾಷನಲ್ ಅಗ್ರಿಕಲ್ಚರ್ ಕೋ ಅಪರೇಟಿವ್ ಮಾರ್ಕೆಟಿಂಗ್ ಆಫ್ ಇಂಡಿಯಾ ಲಿಮಿಟೆಡ್ (ನಾಫೆಡ್) ನಿರ್ಧರಿಸಿದೆ.
"ಈ ಹಿಂದೆ ರಿಲಯನ್ಸ್ ಮಳಿಗೆಗಳಲ್ಲಿ ಮಾತ್ರ ಸಿಗುತ್ತಿದ್ದ ರಿಯಾಯಿತಿ ದರದ ಭಾರತ್ ಅಕ್ಕಿ, ಈಗ ವಿಶಾಲ್ ಮೆಗಾ ಮಾರ್ಟ್, ಸ್ಟಾರ್ ಬಜಾರ್, ಜಿಯೋ ಮಾರ್ಟ್ ಸೇರಿದಂತೆ ಹಲವು ಮಾಲ್ ಗಳಿಗೂ ವಿಸ್ತರಣೆ ಮಾಡಲಾಗಿದ್ದು, ಆನ್ ಲೈನ್ ಮತ್ತು ಆಫ್‌ಲೈನ್‌ನಲ್ಲಿ ಖರೀದಿಸಲು ಗ್ರಾಹಕರಿಗೆ ಅವಕಾಶ ಕಲ್ಪಿಸಲಾಗಿದೆ ಎಂದು ನಾಫೆಡ್ ಕರ್ನಾಟಕ ವಿಭಾಗದ ಮುಖ್ಯಸ್ಥೆ ಜ್ಯೋತಿ ಪಾಟೀಲ್ ತಿಳಿಸಿದರು.
'ಚುನಾವಣೆ ನೀತಿ ಸಂಹಿತೆ ಅಕ್ಕಿ ವಿತರಣೆಗೆ ಯಾವುದೇ ರೀತಿ ಅಡ್ಡಿ ಬರುವುದಿಲ್ಲ. ಕೇಂದ್ರ ಸರಕಾರದ ಯೋಜನೆಯಾಗಿ ದ್ದರೂ ಪ್ರಧಾನ ಮಂತ್ರಿ ಸೇರಿದಂತೆ ಯಾವುದೇ ವ್ಯಕ್ತಿಗಳ ಭಾವಚಿತ್ರ ಅಕ್ಕಿಯ ಬ್ಯಾಗ್ ಮೇಲೆ ಇಲ್ಲ. ಅಲ್ಲದೆ, ಈ ಕುರಿತಾದ ಬ್ಯಾನರ್ ಗಳನ್ನು ಕೂಡ . ತೆಗೆಯಲಾಗಿದೆ. ಬ್ಯಾನರ್ ರಹಿತವಾಗಿ ಅಕ್ಕಿ ವಿತರಣೆ ಮಾಡಲಾಗುತ್ತಿದೆ. ಈಗ ಸಾಕಷ್ಟು ಪ್ರಮಾಣದ ದಿನಸಿ ಕೂಡ ದಾಸ್ತಾನಿದೆ. ಚುನಾವಣಾ ಆಯೋಗದಿಂದ ವಿತರಿಸಬಾರದು ಎಂದು ಯಾವುದೇ ಸೂಚನೆ ಬಂದಿಲ್ಲ," ಎಂದು ಅವರು ತಿಳಿಸಿದರು.