ಮುಖಪುಟಸುದ್ದಿರಾಜಕೀಯಅಂಕಣಮನರಂಜನೆಸಿನೆಮಾ-ಕ್ರೀಡೆಲೈಫ್ ಸ್ಟೈಲ್ಕ್ರೀಡೆ
Advertisement

Bengaluru Police Commissioner: ಪೊಲೀಸರೇ ಸಾಮಾಜಿಕ ಜಾಲತಾಣದಲ್ಲಿ ರೀಲ್ಸ್‌ ಮಾಡುವಿರಾ?- ಸಿಬ್ಬಂದಿಗಳಿಗೆ ಪೊಲೀಸ್‌ ಆಯುಕ್ತರ ಖಡಕ್‌ ವಾರ್ನಿಂಗ್

Bengaluru Police Commissioner:  ಪೊಲೀಸ್ ಸಮವಸ್ತ್ರದಲ್ಲಿ ಸಾಂಗ್ ಹಾಕಿ ರೀಲ್ಸ್ ಮಾಡಿ ಇನ್ಸ್ಟಾಗ್ರಾಮ್ ಫೇಸ್ ಬುಕ್ ಮುಂತಾದ ಜಾಲತಾಣಗಳಲ್ಲಿ ಹಾಕಿ ಫಾಲೋವರ್ಸ್ಗಳನ್ನು ಜಾಸ್ತಿ ಮಾಡುವ ಕ್ರೇಜ್ ಇನ್ನು ಮುಂದೆ ಬಂದ್ ಆಗಲಿದೆ.
08:37 PM Jul 23, 2024 IST | ಸುದರ್ಶನ್
UpdateAt: 08:38 PM Jul 23, 2024 IST
Advertisement

Bengaluru Police Commissioner:  ಇತ್ತೀಚಿನ ದಿನಗಳಲ್ಲಿ ಪೊಲೀಸ್ ಅಧಿಕಾರಿಗಳು ತಮ್ಮ ಕರ್ತವ್ಯವನ್ನು ನಿರ್ವಹಿಸುತ್ತಿರುವಾಗ ಸಮವಸ್ತ್ರದಲ್ಲಿಯೇ ರೀಲ್ಸ್ ಮಾಡಿರುವ ಅನೇಕ ವಿಡಿಯೋಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆದ ನಂತರ ಬೆಂಗಳೂರು ಪೊಲೀಸ್ ಆಯುಕ್ತರು ದಯಾನಂದ ಸರ್ ಅವರು ಈಗ ಕ್ರಮ ತೆಗೆದುಕೊಂಡಿದ್ದಾರೆ. ಇನ್ನು ಮುಂದೆ ಪೊಲೀಸ್ ಸಮವಸ್ತ್ರದಲ್ಲಿ ಸಾಂಗ್ ಹಾಕಿ ರೀಲ್ಸ್ ಮಾಡಿ ಇನ್ಸ್ಟಾಗ್ರಾಮ್ ಫೇಸ್ ಬುಕ್ ಮುಂತಾದ ಜಾಲತಾಣಗಳಲ್ಲಿ ಹಾಕಿ ಫಾಲೋವರ್ಸ್ಗಳನ್ನು ಜಾಸ್ತಿ ಮಾಡುವ ಕ್ರೇಜ್ ಇನ್ನು ಮುಂದೆ ಬಂದ್ ಆಗಲಿದೆ.

Advertisement

NEET UG 2024: ನೀಟ್‌ ಮರು ಪರೀಕ್ಷೆ ಇಲ್ಲ, ಸುಪ್ರೀಂಕೋರ್ಟ್‌ನಿಂದ ಮಹತ್ವದ ತೀರ್ಪು

Advertisement

ಪೊಲೀಸ್ ಸಮವಸ್ತ್ರವು ಸಾರ್ವಜನಿಕ ಬಗ್ಗೆಗಿನ ಬದ್ಧತೆ ಸಮರ್ಪಣೆ ಮತ್ತು ಹೊಣೆಗಾರಿಕೆಯ ಸಂಕೇತವಾಗಿದೆ. ಅದನ್ನು ಧರಿಸುವಾಗ ನಾವು ಅತ್ಯಂತ ಕಾಳಜಿ ವಹಿಸಬೇಕು ಮತ್ತು ಗಂಭೀರವಾಗಿರಬೇಕು. ಪೊಲೀಸ್ ಸಮವಸ್ತ್ರಕ್ಕೆ ಅದರದ್ದೇ ಆದ ನೀತಿ ಇದೆ. ನ್ಯಾಯ ನೀತಿ ಧರ್ಮದ ಪ್ರತೀಕವೇ ಕರ್ನಾಟಕ ಪೊಲೀಸ್. ಹೀಗಿರುವಾಗ ಪೊಲೀಸ್ ಅಧಿಕಾರಿಗಳು ತಮ್ಮ ಸಮವಸ್ತ್ರಕ್ಕೆ ಬೆಲೆ ಕೊಡಬೇಕು.ಪೊಲೀಸ್ ಸಮವಸ್ತ್ರದಲ್ಲಿರುವಾಗ ಬೇಡವಾದ ವಿಷಯಗಳನ್ನು ಪ್ರಸಾರ ಮಾಡುವುದರಿಂದ ಪ್ರತಿಷ್ಠೆಗೆ ಕುಂದು ತರುತ್ತದೆ ಎಂದು ಬೆಂಗಳೂರು ಪೊಲೀಸ್ ಆಯುಕ್ತರು ಹೇಳಿದರು.

ಯಾವುದೇ ಪೊಲೀಸ್ ಸಿಬ್ಬಂದಿಯು ಪೊಲೀಸ್ ಸಮವಸ್ತ್ರದಲ್ಲಿರುವಾಗ ಯಾವುದೇ ರೀತಿಯ ವಿಡಿಯೋಗಳು ರೀಲ್ಸ್ ಅಥವಾ ಫೋಟೋಗಳನ್ನು ಸಾಮಾಜಿಕ ಮಾಧ್ಯಮ ಪ್ಲಾಟ್ ಫಾರ್ಮ್ ಗಳಲ್ಲಿ ಪೋಸ್ಟ್ ಮಾಡದಂತೆ ಖಚಿತಪಡಿಸಿಕೊಳ್ಳಲು ಎಲ್ಲಾ ನಗರ ಘಟಕದ ಮುಖ್ಯಸ್ಥರು ಪೊಲೀಸ್ ಉಪ ಆಯುಕ್ತರು, (DCP) ಮತ್ತು ಸಹಾಯಕ ಪೊಲೀಸ್ ಕಮಿಷನರ್ ಗಳಿಗೆ (ACP) ಬೆಂಗಳೂರು ಪೊಲೀಸ್ ಆಯುಕ್ತರು ಸೂಚಿಸಿದ್ದಾರೆ.

ಮೇಲಿನ ನಿರ್ದೇಶನಗಳನ್ನು ಉಲ್ಲಂಘನೆ ಮಾಡಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ. ಮತ್ತು ರೀಲ್ಸ್ ಮಾಡುವವರ ವಿರುದ್ಧ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಬೆಂಗಳೂರು ಪೊಲೀಸ್ ಆಯುಕ್ತರು ದಯಾನಂದ ಸರ್ ಖಡಕ್ ಆದೇಶ ಹೊರಡಿಸಿದ್ದಾರೆ.

ಬೆಂಗಳೂರು ಪೊಲೀಸ್ ಆಯುಕ್ತರ ಈ ಆದೇಶವನ್ನು ನೋಡಿಯು ಪೊಲೀಸ್ ಅಧಿಕಾರಿಗಳು ಇನ್ಸ್ಟಾಗ್ರಾಮ್ ಫೇಸ್ ಬುಕ್ ಮುಂತಾದ ಜಾಲತಾಣಗಳಲ್ಲಿ ರೀಲ್ಸ್ ಮಾಡುವುದನ್ನು ಮುಂದುವರಿಸಿದರೆ ಅವರ ವಿರುದ್ದ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಬೆಂಗಳೂರು ಪೊಲೀಸ್ ಆಯುಕ್ತರು ಮುನ್ನೆಚ್ಚರಿಕೆ ತಿಳಿಸಿದ್ದಾರೆ.

Geyser Using Tips: ಗೀಸರ್ ಬಳಸಿ ಕರೆಂಟ್​ ಬಿಲ್​ ಜಾಸ್ತಿ ಬರುತ್ತೆ ಅನ್ನೋ ಟೆನ್ಶನ್ ಬಿಡಿ! ಈ ಟಿಪ್ಸ್ ಫಾಲೋ ಮಾಡಿ

Related News

Advertisement
Advertisement