For the best experience, open
https://m.hosakannada.com
on your mobile browser.
Advertisement

Rapido: ಬೆಂಗಳೂರಿನ ವ್ಯಕ್ತಿಯನ್ನು ಗಂಟೆಗಳ ಕಾಲ  ಒತ್ತೆಯಾಳಾಗಿಟ್ಟುಕೊಂಡ  ರ್ಯಾಪಿಡೋ ಚಾಲಕ

08:26 AM Feb 28, 2024 IST | ಹೊಸ ಕನ್ನಡ
UpdateAt: 10:25 AM Feb 28, 2024 IST
rapido  ಬೆಂಗಳೂರಿನ ವ್ಯಕ್ತಿಯನ್ನು ಗಂಟೆಗಳ ಕಾಲ  ಒತ್ತೆಯಾಳಾಗಿಟ್ಟುಕೊಂಡ  ರ್ಯಾಪಿಡೋ ಚಾಲಕ

ವ್ಯಕ್ತಿಯೊಬ್ಬರು, "ರಾಪಿಡೋ ಆಟೋ ಚಾಲಕ ತನ್ನನ್ನು ಒತ್ತೆಯಾಳಾಗಿ " ಇಟ್ಟುಕೊಂಡಿದ್ದಾನೆ ಎಂದು ಸಾಮಾಜಿಕ ಜಾಲತಾಣದಲ್ಲಿ ಸೋಮವಾರ ಹೇಳಿದ್ದಾರೆ. ನನ್ನನ್ನು ರ್ಯಾಪಿಡೋ ಸವಾರ ಗಂಟೆಗಳ ಕಾಲ ಒತ್ತೆಯಾಳಾಗಿಟ್ಟುಕೊಂಡಿದ್ದರು ಎಂಬುದಾಗಿ ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದಾರೆ .

Advertisement

ಇದನ್ನೂ ಓದಿ: Vidhanasoudha: ರಾಜ್ಯಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ನಾಸಿರ್‌ ಹುಸೇನ್‌'ಗೆ ಗೆಲುವು - ವಿಧಾನಸಭೆಯಲ್ಲಿ ಪಾಕಿಸ್ತಾನ್ ಜಿಂದಾಬಾದ್ ಘೋಷಣೆ

ಈ ಘಟನೆ ಬೆಂಗಳೂರಿನಲ್ಲಿ ನಡೆದಿದ್ದು. ನಿಖರವಾದ ಸ್ಥಳ ಇನ್ನೂ ತಿಳಿದಿಲ್ಲ . ಚಾಲಕನಿಗೆ ಯುಪಿಐ ಪಾವತಿಯಲ್ಲಿ ಸಮಸ್ಯೆ ಇದೆ ಎಂದು ಅವರು ಆರೋಪಿಸಿದ್ದಾರೆ . " ನನಗೆ ಉಸಿರಾಟದ ಸಮಸ್ಯೆ ಮತ್ತು ಕಾಲು ಮುರಿದಿದ್ದು , ನಾನು ತಪ್ಪಿಸಿಕೊಳ್ಳಲು ಸಾಧ್ಯವಾಗಲಿಲ್ಲ " ಎಂದು ಅವರು ಹೇಳಿದ್ದಾರೆ.

Advertisement

"ದಯವಿಟ್ಟು ನನಗೆ ಕರೆ ಮಾಡಿ. ನನ್ನನ್ನು ಚಾಲಕ ಆಟೋದಲ್ಲಿ ಇಟ್ಟುಕೊಂಡಿದ್ದಾನೆ. ನನ್ನನ್ನು ಆಟೋದಿಂದ ಇಳಿಸಲು ಬಿಡುತ್ತಿಲ್ಲ. ನನಗೆ ಕಾಲು ಮುರಿತ ಮತ್ತು ಶ್ವಾಸಕೋಶದ ಸೋಂಕು ಇದೆ. ನಾನು 1 ಗಂಟೆಯಿಂದ ಆಟೋದಲ್ಲಿ ಲಾಕ್ ಆಗಿದ್ದೇನೆ, ” ಎಂದು ಅಗರ್ವಾಲ್ Rapido Support ಗೆ ಕೇಳಿದ್ದು, ರ್ಯಾಪಿಡೋ ಸ್ಪಂದಿಸಿಲ್ಲ ಎಂದು ಆರೋಪಿಸಿದ್ದಾರೆ.

ನಂತರ 100ಕ್ಕೆ ಕರೆ ಮಾಡಿದಾಗ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾದೆ ಎಂದು ಆತ ಹೇಳಿದ್ದಾನೆ . ಬಳಕೆದಾರರು ಸಂದೇಶಗಳ ಸ್ಕ್ರೀನ್ಶಾಟ್ ಅನ್ನು ಸಹ ಹಂಚಿಕೊಂಡಿದ್ದು, ರ್ಯಾಪಿಡೋಗೆ ಈ ಕುರಿತು ಕ್ರಮ ಕೈಗೊಳ್ಳುವಂತೆ ಕೋರಿದ್ದಾರೆ .

Advertisement
Advertisement