For the best experience, open
https://m.hosakannada.com
on your mobile browser.
Advertisement

Karnataka Holiday: ರಾಜ್ಯದಲ್ಲಿ ಇಂದು ರಜೆ ನೀಡದಿರುವುದಕ್ಕೆ ಸಮರ್ಥಿಸಿದ ಸಿಎಂ! ಹೇಳಿದ್ದೇನು ಗೊತ್ತೇ?

03:34 PM Jan 22, 2024 IST | ಅಶ್ವಿನಿ ಹೆಬ್ಬಾರ್
UpdateAt: 03:34 PM Jan 22, 2024 IST
karnataka holiday  ರಾಜ್ಯದಲ್ಲಿ ಇಂದು ರಜೆ ನೀಡದಿರುವುದಕ್ಕೆ ಸಮರ್ಥಿಸಿದ ಸಿಎಂ  ಹೇಳಿದ್ದೇನು ಗೊತ್ತೇ
Advertisement

Karnataka Holiday: ಸಿಎಂ ಸಿದ್ದರಾಮಯ್ಯನವರು(CM Siddaramayya) ಮಹದೇವಪುರ ವಿಧಾನಸಭಾ ಕ್ಷೇತ್ರದ ಬಿದರಗಳ್ಳಿ ಹೋಬಳಿಯಲ್ಲಿರುವ ಹಿರಂಡಹಳ್ಳಿ ಗ್ರಾಮದಲ್ಲಿ ರಾಮ ಮಂದಿರವನ್ನು ಇಂದು ಉದ್ಘಾಟನೆ ಮಾಡಿದ್ದಾರೆ.

Advertisement

ರಾಮ ಮಂದಿರ(Ram Mandir)ಉದ್ಘಾಟನೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಯೋಧ್ಯೆಯಲ್ಲಿ ಶತಮಾನಗಳ ಬಳಿಕ ಶ್ರೀರಾಮನ ಪ್ರತಿಷ್ಠಾಪನೆ ಆಗುತ್ತಿರುವ ಹಿನ್ನೆಲೆ ದೇಶದ ಅನೇಕ ರಾಜ್ಯಗಳಲ್ಲಿ ಶಾಲೆ ಕಾಲೇಜು ಸೇರಿದಂತೆ ಕಚೇರಿಗಳಿಗೆ ರಜೆ ಘೋಷಣೆ (School Holiday)ಮಾಡಲಾಗಿದೆ. ಆದರೆ, ಕರ್ನಾಟಕದಲ್ಲಿ ಸರ್ಕಾರಿ ರಜೆ (Karnataka No Holiday)ನೀಡಿರಲಿಲ್ಲ. ಈ ಕುರಿತು ಸಿಎಂ ಸಿದ್ದರಾಮಯ್ಯ ಮತ್ತೊಮ್ಮೆ ಸಮರ್ಥನೆ ನೀಡಿದ್ದಾರೆ.

ಕೇಂದ್ರ ಸರ್ಕಾರ ಎಲ್ಲ ರಾಜ್ಯಗಳಿಗೂ ರಜೆ ನೀಡಿದೆಯೇ? ಅಯೋಧ್ಯೆಯಲ್ಲಿ ಕಾರ್ಯಕ್ರಮ ನಡೆಯುತ್ತಿದೆ.vಆದರೆ ಕೇರಳ, ದೆಹಲಿ (ಜನವರಿ 22 ರಂದು ದೆಹಲಿ ಸರ್ಕಾರಿ ಕಚೇರಿಗಳಿಗೆ ಅರ್ಧ ದಿನ ರಜೆ ಘೋಷಣೆ), ಪಶ್ಚಿಮ ಬಂಗಾಳದಲ್ಲಿ ರಜೆ ಇದೆಯೇ?? ಎಂದು ಸಿದ್ದರಾಮಯ್ಯ ಬೆಂಗಳೂರಿನಲ್ಲಿ ರಜೆ ನೀಡದ ವಿಚಾರಕ್ಕೆ ಬಿಜೆಪಿ‌ ಆಕ್ಷೇಪ ಮಾಡುತ್ತಿರುವುದಕ್ಕೆ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.ಅಷ್ಟೆ ಅಲ್ಲದೇ, ಇದು ರಾಜಕೀಯ ಕಾರ್ಯಕ್ರಮವಲ್ಲ. ಇಲ್ಲಿರುವ ರಾಮನಲ್ಲಿಯೇ ನಮ್ಮೂರಿನ ರಾಮ, ಅಯೋಧ್ಯೆಯ ರಾಮನನ್ನು ಕಾಣಬಹುದು. ಎಲ್ಲರೂ ಒಂದೇ ಅಲ್ಲವೇ ಎಂದು ಪ್ರಶ್ನೆ ಮಾಡಿದ್ದಾರೆ. ಈ ಮೂಲಕ ಸರ್ಕಾರಿ ರಜೆ ಘೋಷಣೆ ಮಾಡದೇ ಇರುವ ತಮ್ಮ ನಡೆಯನ್ನು ಸಿದ್ದರಾಮಯ್ಯ ಸಮರ್ಥಿಸಿ ಕೊಂಡಿದ್ದಾರೆ.

Advertisement

Advertisement
Advertisement
Advertisement