For the best experience, open
https://m.hosakannada.com
on your mobile browser.
Advertisement

Bengaluru Murder: ತಲೆದಿಂಬಿನಿಂದ ಉಸಿರುಗಟ್ಟಿಸಿ ತನ್ನ ಸ್ವಂತ ಮಕ್ಕಳನ್ನೇ ಕೊಲೆಗೈದ ಪಾಪಿ ತಾಯಿ

Bengaluru Murder: ಮಹಿಳೆಯೊಬ್ಬರು ತನ್ನ ಇಬ್ಬರು ಮಕ್ಕಳನ್ನು ಉಸಿರುಗಟ್ಟಿಸಿ ಕೊಲೆ ಮಾಡಿರುವ ಆಘಾತಕಾರಿ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
10:42 PM Apr 10, 2024 IST | ಸುದರ್ಶನ್
UpdateAt: 11:14 PM Apr 10, 2024 IST
bengaluru murder  ತಲೆದಿಂಬಿನಿಂದ ಉಸಿರುಗಟ್ಟಿಸಿ ತನ್ನ ಸ್ವಂತ ಮಕ್ಕಳನ್ನೇ ಕೊಲೆಗೈದ ಪಾಪಿ ತಾಯಿ

Bengaluru Murder: ಮಹಿಳೆಯೊಬ್ಬರು ತನ್ನ ಇಬ್ಬರು

Advertisement

ಮಕ್ಕಳನ್ನು ಉಸಿರುಗಟ್ಟಿಸಿ ಕೊಲೆ ಮಾಡಿರುವ ಆಘಾತಕಾರಿ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಆರೋಪಿ ಮಹಿಳೆಯನ್ನು ಪೊಲೀಸರು ಬಂಧಿಸಿದ್ದಾರೆ.

ಇದನ್ನೂ ಓದಿ: Ravindra Jadeja: ಐಪಿಎಲ್ ನಲ್ಲಿ 100 ನೇ ಕ್ಯಾಚ್ ಹಿಡಿಯುವ ಮೂಲಕ ದಾಖಲೆ ಬರೆದ ರವೀಂದ್ರ ಜಡೇಜಾ

Advertisement

ಮೃತರನ್ನು ಒಂಬತ್ತು ವರ್ಷದ ಲಕ್ಷ್ಮಿ ಮತ್ತು ಏಳು ವರ್ಷದ ಗೌತಮ್ ಎಂದು ಗುರುತಿಸಲಾಗಿದೆ. ಬೆಂಗಳೂರಿನ ಜಾಲಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

ಆರೋಪಿ ತಾಯಿಯನ್ನು ಗಂಗಾದೇವಿ ಎಂದು ಗುರುತಿಸಲಾಗಿದೆ. ಪೊಲೀಸರ ಪ್ರಕಾರ, ಸಂತ್ರಸ್ತರ ಕುಟುಂಬ ಆಂಧ್ರಪ್ರದೇಶದವರಾಗಿದ್ದು, ಆರೋಪಿ ತಾಯಿ ಖಾಸಗಿ ಕಂಪನಿಯೊಂದರ ಮಾರ್ಕೆಟಿಂಗ್ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದರು.

ಇದನ್ನೂ ಓದಿ: Google Search: 2023ರಲ್ಲಿ ಅತಿ ಹೆಚ್ಚು ಬಾರಿ Google ನಲ್ಲಿ ಸರ್ಚ್ ಮಾಡಲಾದ ಲೈಂಗಿಕ ಪ್ರಶ್ನೆಗಳಿವು : ಅವು ಯಾವುವು ಗೊತ್ತಾ?

ಮಾರ್ಚ್ ತಿಂಗಳಲ್ಲಿ ತನ್ನ ಪತಿ ಮಗಳ ಜೊತೆಗೆ ಅಸಭ್ಯವಾಗಿ ವರ್ತಿಸಿದ್ದಾನೆ ಎಂದು ಗಂಗಾದೇವಿ ಗಂಡನ ವಿರುದ್ಧ ಪೋಕ್ಸೋ ಕ್ಸೋ ಕಾಯ್ದೆ ಅಡಿಯಲ್ಲಿ ಲೈಂಗಿಕ ದೌರ್ಜನ್ಯ ಪ್ರಕರಣ ದಾಖಲು ಮಾಡಿದ್ದಳು.

ಮಾಹಿಳೆ ನೀಡಿದ ದೂರಿನ ಅನ್ವಯ ಜಾಲಹಳ್ಳಿ ಪೊಲೀಸರು ಆಕೆಯ ಪತಿಯನ್ನು ಬಂಧಿಸಿ ಜೈಲಿಗೆ ಕಳುಹಿಸಿದ್ದರು. ಇದಾದ ಬಳಿಕ ಇದೀಗ ತನ್ನ ಇಬ್ಬರು ಮಕ್ಕಳನ್ನು ಕೊಲೆ ಮಾಡಿದ್ದಾಳೆ. ಕೆಲಸ ಇಲ್ಲದೇ ಮಕ್ಕಳನ್ನು ಸಾಕುವುದಕ್ಕೆ ಕಷ್ಟವಾಗುತ್ತಿತ್ತು. ಈ ಕಾರಣಕ್ಕೆ ಇಬ್ಬರು ಮಕ್ಕಳನ್ನು ನಿನ್ನೆ ಹಬ್ಬದ ದಿನ ರಾತ್ರಿ 9.30ರ ಸುಮಾರಿಗೆ ಕೊಲೆ ಮಾಡಿರುವುದು ತಿಳಿದುಬಂದಿದೆ ಎಂದು ಪೊಲೀಸರು ಪ್ರಾಥಮಿಕ ತನಿಖೆಯಲ್ಲಿ ದೃಢಪಡಿಸಿದ್ದಾರೆ.

Advertisement
Advertisement
Advertisement