For the best experience, open
https://m.hosakannada.com
on your mobile browser.
Advertisement

Bengaluru Kambala winners: ಬೆಂಗಳೂರು ಕಂಬಳಕ್ಕೆ ವೈಭವೋಪೇತ ತೆರೆ: ಯಾವ ವಿಭಾಗದಲ್ಲಿ ಯಾರು ಜಯಶಾಲಿ, ಫೈನಲ್ ನಲ್ಲಿ ಟೈ ಆದ ಕೋಣಗಳು ಯಾವುವು ...?

09:20 AM Nov 27, 2023 IST | ಹೊಸ ಕನ್ನಡ
UpdateAt: 09:20 AM Nov 27, 2023 IST
bengaluru kambala winners  ಬೆಂಗಳೂರು ಕಂಬಳಕ್ಕೆ ವೈಭವೋಪೇತ ತೆರೆ  ಯಾವ  ವಿಭಾಗದಲ್ಲಿ ಯಾರು ಜಯಶಾಲಿ  ಫೈನಲ್ ನಲ್ಲಿ ಟೈ ಆದ ಕೋಣಗಳು ಯಾವುವು
Advertisement

Bengaluru Kambala winners : ಸಮಸ್ತ ಕನ್ನಡಿಗರಲ್ಲಿ ಸಂಚಲನ ಮತ್ತು ಆಸಕ್ತಿ ಸೃಷ್ಟಿಸಿದ, ಕರಾವಳಿಯ ವಿಶಿಷ್ಟ ಮತ್ತು ವೈಬ್ರoಟ್ ಕಂಬಳಕ್ಕೆ (Karavali Kambala) ಅದ್ದೂರಿ ತೆರೆ ಬಿದ್ದಿದೆ. ನಡೆದ ಒಟ್ಟು 6 ವಿಭಾಗಗಳ ಸ್ಪರ್ಧೆಯಲ್ಲಿ 158 ಜೊತೆ ಕಂಬಳದ ಕೋಣಗಳು ಭಾಗಿಯಾಗಿದ್ದವು. ಶನಿವಾರ ಬೆಳಗ್ಗೆ ಆರಂಭವಾಗಿದ್ದ ಕಂಬಳ, ಇಂದು ಸೋಮವಾರ ಬೆಳಗ್ಗಿನ ಜಾವ 4 ವೇಳೆಗೆ ತೆರೆ ವೈಭವೋಪೇತ ತೆರೆ ಬಿದ್ದಿದೆ. ಫೈನಲ್ ಪಂದ್ಯ ಬಂತು ಟೈ ಆಗುವ ಮೂಲಕ ತನ್ನ ರೋಚಕತೆಯನ್ನು ಹೆಚ್ಚಿಸಿತ್ತು.

Advertisement

ಯಾವ ವಿಭಾಗದಲ್ಲಿ ಯಾರ ಗೆಲುವು ?
*ಹಗ್ಗ ಹಿರಿಯ ವಿಭಾಗ: ನಂದಳಿಕೆ ಶ್ರೀಕಾಂತ್ ಭಟ್ ಕೋಣ
*ಹಗ್ಗ ಕಿರಿಯ ವಿಭಾಗ: ಸುರತ್ಕಲ್ ಪಾಂಚಜನ್ಯ ಯೋಗೀಶ್ ಕರಿಯಾ ಪೂಜಾರಿ ಕೋಣ
*ನೇಗಿಲ ಹಿರಿಯ ವಿಭಾಗ: ಬಂಗಾಡಿ ಪರಂಬೇಲು ನಾರಾಯಣ ಮಲೆಕುಡಿಯ ಕೋಣ
*ನೇಗಿಲ ಕಿರಿಯ ವಿಭಾಗ: ಜೈ ತುಳುನಾಡು ಪುತ್ತೂರು ಬೊಟ್ಯಾಡಿ ಕಿಶೋರ್ ಭಂಡಾರಿ ಕೋಣಗಳು
*ಕನೆ ಹಲಗೆ ವಿಭಾಗ: ಬೊಳ್ಳಂಬಳ್ಳಿಯ ಶ್ರೀರಾಮಚೈತ್ರ ಪರಮೇಶ್ವರ ಭಟ್ ಕೋಣಗಳು ಗೆದ್ದು ಸಿಲಿಕಾನ್ ಸಿಟಿಯಲ್ಲಿ ಇತಿಹಾಸ ನಿರ್ಮಿಸಿದವು. ಅಡ್ಡ ಹಲಗೆ ವಿಭಾಗದ ಫೈನಲ್ ಪಂದ್ಯವಂತೂ ಅತ್ಯಂತ ರೋಚಕತೆಗೆ ಕಾರಣವಾಗಿತ್ತು.

ಅಡ್ಡ ಹಲಗೆ ವಿಭಾಗದ ಫೈನಲ್ ಪಂದ್ಯದಲ್ಲಿ ಎರಡೂ ತಂಡದ ಕೋಣಗಳು ಯಾರೂ ಕಮ್ಮಿ ಇಲ್ಲ ಎನ್ನುವ ಹಾಗೆ ಸಮನಾಗಿ ಓಡಿ ಪಂದ್ಯ ಟೈ ಮಾಡಿಕೊಂಡವು. ಆದರೆ ಮತ್ತೆ ಎರಡು ತಂಡಗಳ ನಡುವೆ ಟೈ ಬ್ರೇಕರ್ ಪಂದ್ಯ ಆಯೋಜನೆ ಮಾಡಲಾಯಿತು. ಆ ರೋಚಕ ಪಂದ್ಯದಲ್ಲಿ ಎಸ್‍ಎಂಎಸ್ ಫ್ಯಾಮಿಲಿ ಬೆಂಗಳೂರು ತಂಡ ಗೆಲುವಿನ ನಗೆ ಬೀರಿದೆ. ತನ್ಮೂಲಕ ಆ ತಂಡ ಪ್ರಶಸ್ತಿ ಮುಡಿಗೇರಿಸಿಕೊಂಡಿತು.
ಸಮಾರಂಭದ ಕೊನೆಯಲ್ಲಿ ಕಂಬಳ ಸಮಿತಿ ಅಧ್ಯಕ್ಷ ಹಾಗೂ ಶಾಸಕ ಅಶೋಕ್ ರೈ ಮಾತನಾಡಿ, ಬೆಂಗಳೂರು ಕಂಬಳ ನೂರು ಪ್ರತಿಶತ ಯಶಸ್ವಿಯಾಗಿದೆ ಎಂದರು. ನಮಗೆ ದೊಡ್ಡ ಯಶಸ್ಸು ಸಿಕ್ಕಿದೆ. ಇದಕ್ಕೆ ಶ್ರಮಿಸಿದ ಎಲ್ಲರಿಗೂ ಧನ್ಯವಾದ ಎಂದು ಅಶೋಕ್ ಕುಮಾರ್ ರೈ ಯವರು ಹೇಳಿದ್ದಾರೆ. ಒಟ್ಟಾರೆ ಕಂಬಳದ ಸಮಾರಂಭಕ್ಕೆ ಹಾಲವು ಕ್ಷೇತ್ರಗಳ ಗಣ್ಯರು ಸೆಲಬ್ರಿಟಿಗಳು ಒಬ್ಬೊಬ್ಬರಾಗಿ ಬಂದು ತಮ್ಮ ಬೆಂಬಲವನ್ನು ಪ್ರಸ್ತುತಪಡಿಸಿದ್ದರು.

Advertisement

ಬೆಂಗಳೂರಿನ ಕಂಬಳವನ್ನು ಎಷ್ಟು ಲಕ್ಷ ಜನ ವೀಕ್ಷಿಸಿದ್ದಾರೆ ?
ಕಂಬಳವನ್ನು ಒಟ್ಟು 9 ರಿಂದ 10 ಲಕ್ಷ ಜನ ವೀಕ್ಷಣೆ ಮಾಡಿದ್ದಾರೆ. ಇದೇ ಸಂಧರ್ಭದಲ್ಲಿ ಕಂಬಳ ಓಟದಲ್ಲಿ ಗೆದ್ದ ಮಾಲೀಕರು, ಮತ್ತು ಓಟಗಾರರು ಸಂತಸವನ್ನು ಹಂಚಿಕೊಂಡಿದ್ದಾರೆ. ಬಳಿಕ ಕಂಬಳ ವಿಜೇತರಿಗೆ(Bengaluru Kambala winners )ಸನ್ಮಾನ ಹಾಗೂ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಇದನ್ನೂ ಓದಿ: D.K: ಅಕ್ಕಪಕ್ಕದ ಮನೆಯ ಯುವಕ-ಯುವತಿ ಒಂದೇ ದಿನ ನಾಪತ್ತೆ!

Advertisement
Advertisement
Advertisement