Bengaluru kambala: ಬೆಂಗಳೂರಿಗೆ ಬಂದ ಕಂಬಳದ ಕೋಣಗಳು - ಸ್ಥಳಕ್ಕೆ ಬಂದ ಬೆಂಗಳೂರಿಗರು ಮಾಡಿದ್ದೇನು ಗೊತ್ತಾ?!
Bengaluru kambala: ಇತಿಹಾಸದಲ್ಲೆ ಪ್ರಥಮ ಬಾರಿಗೆ ಬೆಂಗಳೂರಿನಲ್ಲಿ ನಡೆಯಲಿರುವ ತುಳುನಾಡಿನ ಪ್ರಸಿದ್ಧ ಜಾನಪದ ಕ್ರೀಡೆ ಕಂಬಳಕ್ಕೆ (Bengaluru Kambala 2023) ಕ್ಷಣಗಣನೆ ಶುರುವಾಗಿದೆ. ಮುಂದಿನ ಶನಿವಾರ, ಭಾನುವಾರ ಅರಮನೆ ಮೈದಾನದಲ್ಲಿ ಕರಾವಳಿಯ ಕಂಬಳ ವಿಜೃಂಭಿಸಲಿದೆ. ಈ ಹಿನ್ನೆಲೆಯಲ್ಲಿ ಒಂದೊಂದಾಗೆ ಕಂಬಳ ಜೊಡಿಗಳು ಬೆಂಗಳೂರಿನತ್ತ ಪಯಣ ಬೆಳೆಸಿವೆ.
ಹೌದು, ನಾಡಿನ ಜನರು ಕಾತರದಿಂದ ಕಾದಿರುವ ಕಂಬಳಕ್ಕಾಗಿ ಕರವಾಳಿಯಿಂದ ಕಂಬಳ ಕೋಣಗಳು ಬೆಂಗಳೂರಿನತ್ತ ಪ್ರಯಾಣ ಬೆಳೆಸಿವೆ. ಕೆಲವು ಕೋಣಗಳು ತಮ್ಮ ಮಾಲಿಕರ, ತಂಡದ ಸಮೇತವಾಗಿ ಬೆಂಗಳೂರು ತಲುಪಿವೆ. ಕಂಬಳ ನಡೆಯುವ ಸ್ಥಳಕ್ಕೆ ಆಗಮಿಸಿದ ಕೋಣಗಳನ್ನು ಬೆಂಗಳೂರು ಜನ ಹಾಗೂ ಸಮಿತಿಯ ಅಧಿಕಾರಿಗಳು ಪ್ರೀತಿಯಿಂದ ಬರಮಾಡಿಕೊಂಡಿದ್ದಾರೆ.
ಸ್ಥಳಕ್ಕೆ ಆಗಮಿಸಿದ ಅಧಿಕಾರಿಗಳು ಸ್ಥಳೀಯರು ಕೋಣಗಳಿಗೆ ಅರಿಶಿನ ಕುಂಕುಮ ಹಚ್ಚಿ, ಹೂ ಮುಡಿಸಿ, ಆರತಿ ಬೆಳಗಿ ಪ್ರೀತಿಯಿಂದ, ಗೌರವಾಧಾರಗಳಿಂದ ಬೆಂಗಳೂರಿಗೆ ಸ್ವಾಗತ ಕೋರಿದ್ದಾರೆ. ಸದ್ಯ ಈ ವಿಡಿಯೋಗಳು ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗುತ್ತಿದೆ.
https://www.facebook.com/share/v/PKNkgBnVi8vtfFX3/?mibextid=XDzfc5