For the best experience, open
https://m.hosakannada.com
on your mobile browser.
Advertisement

Bengaluru: ಪ್ರಿನ್ಸಿಪಾಲ್ ಹೆಸರಲ್ಲಿ ಗೌಪ್ಯವಾಗಿ ಉತ್ತರ ಪತ್ರಿಕೆಗಳನ್ನು ಮೌಲ್ಯ ಮಾಪನ ಮಾಡಿದ ಡಿಗ್ರಿ ವಿದ್ಯಾರ್ಥಿನಿಯರು !!

Bengaluru: ಇಂದಿನ ಬದಲಾದ ಕಾಲಘಟ್ಟದಲ್ಲಿ ಶಿಕ್ಷಣ ವ್ಯವಸ್ಥೆ ಸಾಕಷ್ಟು ಬದಲಾಗಿದೆ. ಆದರೆ ದುರಂತವೆಂದರೆ ಇದರೊಂದಿಗೆ ವಿದ್ಯಾರ್ಥಿಗಳಿಗೆ ಗುರುಗಳ ಮೇಲೆ ಭಯ, ಭಕ್ತಿ, ಗೌರವಗಳೂ ಕೂಡ ನಾಶವಾಗಿವೆ.
10:26 AM Jul 17, 2024 IST | ಸುದರ್ಶನ್
UpdateAt: 10:26 AM Jul 17, 2024 IST
bengaluru  ಪ್ರಿನ್ಸಿಪಾಲ್ ಹೆಸರಲ್ಲಿ ಗೌಪ್ಯವಾಗಿ ಉತ್ತರ ಪತ್ರಿಕೆಗಳನ್ನು ಮೌಲ್ಯ ಮಾಪನ ಮಾಡಿದ ಡಿಗ್ರಿ ವಿದ್ಯಾರ್ಥಿನಿಯರು
Advertisement

Bengaluru: ಇಂದಿನ ಬದಲಾದ ಕಾಲಘಟ್ಟದಲ್ಲಿ ಶಿಕ್ಷಣ ವ್ಯವಸ್ಥೆ ಸಾಕಷ್ಟು ಬದಲಾಗಿದೆ. ಆದರೆ ದುರಂತವೆಂದರೆ ಇದರೊಂದಿಗೆ ವಿದ್ಯಾರ್ಥಿಗಳಿಗೆ ಗುರುಗಳ ಮೇಲೆ ಭಯ, ಭಕ್ತಿ, ಗೌರವಗಳೂ ಕೂಡ ನಾಶವಾಗಿವೆ. ಏನು ಮಾಡಿದರೂ ಸರಿಯೇ ಎಂಬ ಭಾವನೆ ವಿದ್ಯಾರ್ಥಿಗಳಲ್ಲಿ ಬಂದಿದೆ. ಅಂತೆಯೇ ಇದೀಗ ಬೆಂಗಳೂರಿನಲ್ಲೊಂದು ಇಂತದ್ದೇ ಆದ ಹಾಗೂ ಅಚ್ಚರಿ ಪಡುವಂತಹ ವಿಚಾರವೊಂದು ಬೆಳಕಿಗೆ ಬಂದಿದೆ. ಇದು ಕೇಳಲು ನಮಗೆ ಕಾಮಿಡಿ ಅನಿಸಿದರೂ ವಾಸ್ತವತೆಯನ್ನು ಹಾಗೂ ಭವಿಷ್ಯವನ್ನು ನೆನೆದರೆ ಆತಂಕ ಕೂಡ ಆಗುತ್ತದೆ.

Advertisement

ಹೌದು, ವಿಕ್ಟೋರಿಯಾ ಆಸ್ಪತ್ರೆಗಳ(Victoriya Hospital) ಸಂಕೀರ್ಣದಲ್ಲಿ ಕಾರ್ಯನಿರ್ವಹಿಸುತ್ತಿರುವ ಈ ಕಾಲೇಜು, ಬೆಂಗಳೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯ (BMCRI) ಅಧೀನದಲ್ಲಿರೋ ಸರ್ಕಾರಿ ನರ್ಸಿಂಗ್ ಕಾಲೇಜಿನ ವಿದ್ಯಾರ್ಥಿನಿಯರು ಮಹಾನ್ ಸಾಧನೆ ಮಾಡಿದ್ದಾರೆ. ಏನೆಂದರೆ ಪದವಿ ಉತ್ತರ ಪತ್ರಿಕೆಗಳನ್ನು ಗೌಪ್ಯವಾಗಿ ಮೌಲ್ಯಮಾಪನ ನಡೆಸಿದ್ದಾರೆ. ಅದರಲ್ಲೂ ಕಾಲೇಜಿನ ಪ್ರಾಂಶುಪಾಲೆ ಜಯಲಕ್ಷ್ಮಿ ಎನ್(Jayalakshmi N). ಅವರ ಹೆಸರಿನಲ್ಲಿಯೇ ಈ ಮೌಲ್ಯಮಾಪನ ನಡೆಸಿದ್ದಾರೆ.

Basavanagouda Yatnal: ಪ್ರತಿಭಟನೆ ಮಾಡ್ತಾರೆ, ಮತ್ತೆ ಸಿಎಂಗೆ ಫೋನ್ ಮಾಡಿ ತಪ್ಪು ತಿಳಿಬೇಡಿ ಸಾರ್ ಹೈಕಮಾಂಡ್ ಪ್ರೆಶರ್ ಅಂತಾರೆ – ಸ್ವಪಕ್ಷ ಬಿಜೆಪಿ ವಿರುದ್ಧವೇ ಯತ್ನಾಳ್ ಬಾಂಬ್ !!

Advertisement

ಅಂದಹಾಗೆ ಕಾಲೇಜಿನ ಎರಡನೇ ಮಹಡಿಯಲ್ಲಿರುವ ಮಕ್ಕಳ ಪ್ರಯೋಗಾಲಯದಲ್ಲಿ ಕಳೆದ ಮಾ.26ರಂದು ಇಲ್ಲಿನ ಇಬ್ಬರು ಪದವಿಯ ದ್ವಿತೀಯ ವರ್ಷದ ವಿದ್ಯಾರ್ಥಿನಿಯರು ಜಮ್ಮು ಮತ್ತು ಕಾಶ್ಮೀರದ ಬಾಬಾ ಗುಲಾಮ್ ಶಾ ಬಾದ್‌ಶಾ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳ ಉತ್ತರ ಪತ್ರಿಕೆಗಳ ಮೌಲ್ಯ ಮಾಪನ ನಡೆಸಿದ್ದಾರೆ. ಅನುಮಾನಗೊಂಡ ಸಹ ಪ್ರಾಧ್ಯಾಪಕರು ದಿಢೀರ್ ಭೇಟಿ ನೀಡಿ, ಪರಿಶೀಲಿಸಿದಾಗ ಜಯಲಕ್ಷ್ಮಿ ಎನ್. ಅವರ ಹೆಸರಿನಲ್ಲಿ ಮೌಲ್ಯಮಾಪನ ನಡೆಸುತ್ತಿರುವುದು ತಿಳಿದುಬಂದಿದೆ. ಈ ವಿದ್ಯಾರ್ಥಿಗಳೂ ತಪ್ಪೊಪ್ಪಿಕೊಂಡಿದ್ದು, ಪ್ರಾಧ್ಯಾಪಕರು ಘಟನೆಯ ವಿಡಿಯೊ ಮಾಡಿದ್ದಾರೆ.

ಪ್ರಾಧ್ಯಾಪಕರ ಪರಿಶೀಲನೆ ವೇಳೆ ವಿದ್ಯಾರ್ಥಿಗಳು ಸಮಾಜ ವಿಜ್ಞಾನ, ಸಂಶೋಧನೆ ಮತ್ತು ಸಂಖ್ಯಾಶಾಸ್ತ್ರ ವಿಷಯಗಳ ಹಲವು ಉತ್ತರ ಪತ್ರಿಕೆಗಳನ್ನು ಮೌಲ್ಯಮಾಪನ ಮಾಡಿರುವುದು ದೃಢಪಟ್ಟಿದೆ. ಈ ವೇಳೆ ಪ್ರಾಧ್ಯಾಪಕರು 'ಈ ರೀತಿ ಕೃತ್ಯ ಮಾಡುತ್ತೀರಾ’ ಎಂದು ದಬಾಯಿಸಿದ್ದಾರೆ. ಜಯಲಕ್ಷ್ಮಿ ಅವರ ಸೂಚನೆ ಅನುಸಾರ ನಾವು ಮೌಲ್ಯಮಾಪನ ಮಾಡಿದ್ದೇವೆ ಎಂದು ವಿದ್ಯಾರ್ಥಿನಿಯರು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ. ಆ ವೇಳೆ ಅಲ್ಲಿದ್ದ ಉತ್ತರ ಪತ್ರಿಕೆಗಳನ್ನು ವಶಕ್ಕೆ ಪಡೆದುಕೊಂಡ ಪ್ರಾಧ್ಯಾಪಕರು, ಬಿಎಂಸಿಆರ್‌ಐ ಡೀನ್ ಗಮನಕ್ಕೆ ತಂದಿದ್ದಾರೆ.

Yoga for Men’s: ಪುರುಷರ ವೀರ್ಯಾಣು ಸಂಖ್ಯೆ ಹೆಚ್ಚಿಸಲು ಈ ಆಸನಗಳು ಬೆಸ್ಟ್ !

Advertisement
Advertisement
Advertisement