Bengaluru: ಹಣಕ್ಕಾಗಿ ತಮ್ಮದೇ ಪೋರ್ನ್ ವಿಡಿಯೋ ಅಪ್ಲೋಡ್ ಮಾಡುತ್ತಿದ್ದ ಬೆಂಗಳೂರು ಜೋಡಿ - ಗೊತ್ತಾಗಿದ್ದೇಗೆ?
Bengaluru: ಬದಲಾದ ಜಗತ್ತಿನಲ್ಲಿ ಹಣ ಗಳಿಸಲು ಸಾಕಷ್ಟು ಒಳ್ಳೆಯ ಮಾರ್ಗಗಳಿವೆ. ಆದರೆ ದುರಾಸೆಗೆ ಬಲಿಯಾಗಿ, ಸುಲಭದಲ್ಲಿ ಹೆಚ್ಚು ದುಡ್ಡುಮಾಡುವ ನಿಟ್ಟಿನಲ್ಲಿ ಅನೇಕರು ಅನ್ಯಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುತ್ತಾರೆ. ಅದರಲ್ಲಿ ಲೈಂಗಿಕ ಕ್ರಿಯೆಯೂ ಒಂದು. ಅಂತೆಯೇ ಇದೀಗ ಅಚ್ಚರಿ ಘಟನೆಯೊಂದು ಬೆಳಕಿಗೆ ಬಂದಿದ್ದು, ದುಡ್ಡು ಮಾಡಲು ಬೆಂಗಳೂರಿನ ಜೋಡಿಯೊಂದು ತಮ್ಮದೇ ಪೋರ್ನ್ ವಿಡಿಯೋ ಮಾಡಿ ಅದನ್ನು ವೆಬ್ಸೈಟ್ ಗೆ ಅಪ್ಲೋಡ್ ಮಾಡಿ ಸಿಕ್ಕಿಬಿದ್ದಿದ್ದಾರೆ.
ಇದನ್ನೂ ಓದಿ: Putturu: ಲಾರಿ ಬ್ರೇಕ್‌ಫೈಲ್ ಘಟನೆ; ಚಾಲಕನ ಜಾಣ್ಮೆಯಿಂದ ತಪ್ಪಿದ ದೊಡ್ಡ ದುರಂತ
ಹೌದು, ಬೆಂಗಳೂರು(Bengaluru) ಮಹಾನಗರದಲ್ಲಿ ಯುವತಿಯೊಬ್ಬಳು ತನ್ನ ಪ್ರಿಯಕರನೊಂದಿಗೆ ಸೇರಿ ಲೈಂಗಿಕ ಚಟುವಟಿಕೆ ನಡೆಸಿ, ಚಿತ್ರೀಕರಿಸಿದ ವೀಡಿಯೋವನ್ನು ಪೋರ್ನ್ ವೆಬ್‌ಸೈಟ್‌ಗೆ ಅಪ್ಲೋಡ್ ಮಾಡುತ್ತಿದ್ದ ಪ್ರಕರಣ ಬೆಳಕಿಗೆ ಬಂದಿದೆ. ಈ ಬಗ್ಗೆ ಗುತ್ತಿಗೆದಾರ ಅಮರ್‌ನಾಥ್ ಎಂಬವರು ಐಟಿ ಆಕ್ಟ್ (ಮಾಹಿತಿ ತಂತ್ರಜ್ಞಾನ ಕಾಯ್ದೆ) (IT Act) ಅಡಿಯಲ್ಲಿ ದೂರು ನೀಡಿದ್ದು, ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ (Jnanabharathi Police Station) ಪ್ರಕರಣ ದಾಖಲಾಗಿದೆ. ಅಲ್ಲದೆ ದೂರು ದಾಖಲಿಸುತ್ತಿದ್ದಂತೆ ಅಮರಮಾಥ್‌ಗೆ ಖತರ್ನಾಕ್ ಜೋಡಿಗಳು ಧಮ್ಕಿ ಹಾಕಿದ್ದು, ಪೊಲೀಸರ ಬಳಿ ದೂರುದಾರರು ರಕ್ಷಣೆ ಕೋರಿದ್ದಾರೆ.
ಏನಿದು ಪ್ರಕರಣ?
ದುಡ್ಡು ಮಾಡವು ಉದ್ದೇಶದಿಂದ ಮಹಿಳೆ ಸೌಮ್ಯ ಆಕೆಯ ಪ್ರಿಯಕರ ರವಿ ರಾಮನಗರ ಎಂಬಾತ ಜೊತೆ ಸಂಭೋಗ ನಡೆಸುತ್ತಾಳೆ. ಈ ಅಶ್ಲೀಲ ಚಿತ್ರೀಕರಣಕ್ಕಾಗಿ ಉಲ್ಲಾಳ ಉಪನಗರದ ಮುಖ್ಯರಸ್ತೆಯ 5ನೇ ಮೇನ್‌ನಲ್ಲಿ ಮನೆಯೊಂದನ್ನ ಭೋಗ್ಯಕ್ಕೆ ಪಡೆದುಕೊಂಡಿದ್ದಾರೆ. ಇಲ್ಲಿ ವೀಡಿಯೋ ಚಿತ್ರೀಕರಣ ಮಾಡಿದ್ದಾರೆ. ಈ ಕೃತ್ಯಕ್ಕೆ ರೇಣುಕಾ ಚೊಟ್ಟನಹಳ್ಳಿ, ರಮೇಶ್ ಪಾಂಡವಪುರ ಸಹಕರಿಸಿದ್ದಾರೆ. ಅಲ್ಲಿ ತಾವೇ ಲೈಂಗಿಕ ಚಟುವಟಿಕೆ ನಡೆಸಿ, ಅದನ್ನು ಚಿತ್ರೀಕರಿಸಿ ಪೋರ್ನ್ ವೆಬ್‌ಸೈಟ್‌ನಲ್ಲಿ ಅಪ್ಲೋಡ್ ಮಾಡಿದ್ದಾರೆ.