Belthangady: ಗುರುವಾಯನಕೆರೆ ಕಾಲೇಜಿನ ಹಾಸ್ಟೆಲ್ 11 ಹುಡುಗರು ನಾಪತ್ತೆ! ಹುಡುಗ್ರು ಎಸ್ಕೇಪ್ ರೂಟ್ ಹಿಡಿದದ್ದೇ ವಿಚಿತ್ರ !
Belthangady: ಬೆಳ್ತಂಗಡಿಯ ಗುರುವಾಯನಕೆರೆಯಲ್ಲಿರುವ ಎಕ್ಸೆಲ್ ಪಿಯು ಕಾಲೇಜಿನಲ್ಲಿ ರಾತ್ರೋರಾತ್ರಿ ವಿದ್ಯಾರ್ಥಿಗಳು ನಾಪತ್ತೆಯಾಗಿದ್ದು ಸುದ್ದಿಯಾಗಿದ್ದಾರೆ. ನಿನ್ನೆ ಸುದ್ದಿ ತಿಳಿದ ಪೋಷಕರು ಆತಂಕದಲ್ಲಿದ್ದಾರೆ. ಈ ಘಟನೆಯು ನವೆಂಬರ್ 30ರ ಮಧ್ಯರಾತ್ರಿ ನಡೆದಿದ್ದು, ಕಾಣೆಯಾದ ವಿದ್ಯಾರ್ಥಿಗಳ ಪೋಷಕರಿಗೆ ಮಹತ್ವದ ಸುಳಿವೊಂದು ಸಿಕ್ಕಿದೆ. ಆದರೆ ನಿನ್ನೆ ತಡರಾತ್ರಿ ತನಕ ಮಕ್ಕಳು ಮತ್ತೆ ಸ್ವಸ್ಥಾನ ಸೇರಿಲ್ಲ.
ಬೆಳ್ತಂಗಡಿ (Belthangady) ತಾಲೂಕಿನ ಕುವೆಟ್ಟು ಗ್ರಾಮದ ಪಿಯುಸಿ ಗೆ ಪ್ರೊಫೆಷನಲ್ ತರಬೇತಿ ನೀಡುವ ಎಕ್ಸೆಲ್ ಕಾಲೇಜಿನ ಹಾಸ್ಟೆಲ್ ನಲ್ಲಿ ಸಾಮಾನ್ಯವಾಗಿ ಮಧ್ಯರಾತ್ರಿ 12 ಗಂಟೆಯ ವೇಳೆಗೆ ಕಾಲೇಜಿನ ಹಾಸ್ಟೆಲ್ ವಾರ್ಡನ್ ಗಳು ಹಾಗೂ ವಿದ್ಯಾರ್ಥಿಗಳೆಲ್ಲರೂ ಮಲಗಿರುತ್ತಾರೆ. ಇದೇ ಸಮಯಕ್ಕಾಗಿ ಕಾಯುತ್ತಿದ್ದ ಹುಡುಗರು ರಾತ್ರಿ ಸುಮಾರು ಒಂದು 1 ಗಂಟೆಯ ಹೊತ್ತಿಗೆ ಹಾಸ್ಟೆಲ್ನಿಂದ ತಪ್ಪಿಸಿಕೊಂಡಿದ್ದಾರೆ. ತಾವು ಗೇಟಿನ ಮೂಲಕ ಹೊರಗೆ ಹೋದ್ರೆ ಸಿಕ್ಕಿಹಾಕಿಕೊಳ್ಳಬಹುದು ಅಂತ ಯೋಚಿಸಿದ ಹುಡುಗ್ರು ಅಲ್ಲಿಯೇ ಹಿಂದಿನಿಂದ ಗುಡ್ಡ ಹತ್ತಿ ಎಸ್ಕೇಪ್ ಆಗ್ತಾರೆ.
ಹಾಸ್ಟೆಲ್ ವಾರ್ಡನ್ ಬೆಳಿಗ್ಗೆ ಎದ್ದು ಬಾಯ್ಸ್ ರೂಂ ಚೆಕ್ ಮಾಡಿದಾಗ ಅಲ್ಲಿ 11 ಜನ ಹುಡುಗ್ರು ನಾಪತ್ತೆಯಾಗಿದ್ದನ್ನು ಕಂಡು ಗಾಬರಿಯಾಗುತ್ತಾರೆ. ಸ್ವಲ್ಪ ಹೊತ್ತಿನ ಹುಡುಕಾಟದ ನಂತರ ಆಡಳಿತ ಮಂಡಳಿಗೆ ಈ ವಿಷಯವನ್ನು ಮುಟ್ಟಿಸುತ್ತಾರೆ. ನಾಪತ್ತೆ ಪ್ರಕರಣದ ಬಗ್ಗೆ ತಿಳಿದ ಕಾಲೇಜು ತಮ್ಮ ಗೌರವಕ್ಕೆ ಧಕ್ಕೆಯಾಗಬಹುದೆಂದು ಅಂಜಿ ಇದನ್ನು ಗುಪ್ತವಾಗಿ ಸಂಭಾಳಿಸುವ ಯೋಚನೆ ಮಾಡುತ್ತದೆ. ಹಾಗಾಗಿ ಕಾಣೆಯಾದ ವಿದ್ಯಾರ್ಥಿಗಳ ಪೋಷಕರಿಗೆ ಮಾತ್ರ ಸುದ್ದಿಯನ್ನು ತಿಳಿಸಿ ಎಲ್ಲರೂ ಒಟ್ಟಿಗೆ ಹುಡುಕಾಟಕ್ಕೆ ಶುರು ಮಾಡ್ತಾರೆ. ಹೀಗೆ ಆತಂಕದಿಂದ ಸರ್ಚ್ ಮಾಡ್ತಿದ್ದಾಗ ಸಿಕ್ಕಿದ ಸುಳಿವು ನಾಪತ್ತೆ ಪ್ರಕರಣಕ್ಕೆ ರೋಚಕ ಟ್ವಿಸ್ಟ್ ನೀಡಿತ್ತು.
ಕಾಣೆಯಾಗಿದ್ದ 11 ಜನ ಹುಡುಗ್ರು ಕಾರವಾರದ ರೈಲಿನ ಮೂಲಕ ಗೋವಾಕ್ಕೆ ಹೋಗುವ ಪ್ಲಾನ್ ಮಾಡಿದ್ದರು. ಹೀಗೆ ರೈಲಿನಲ್ಲಿ ಗೋವಾಕ್ಕೆ ಪ್ರಯಾಣಿಸುತ್ತಿದ್ದ ಹಾಸ್ಟೆಲ್ ಹುಡುಗರನ್ನು ಪತ್ತೆಹಚ್ಚಲಾಗಿದ್ದು, ಇದೀಗ ಎಕ್ಸೆಲ್ ಹಾಸ್ಟೆಲ್ ಗೆ ಕರೆತರುತ್ತಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಈ ವಿದ್ಯಾರ್ಥಿಗಳು ತಮಗೆ ಓದಿನಲ್ಲಿ ಇಂಟ್ರೆಸ್ಟ್ ಇಲ್ಲದೆಯೋ, ಒತ್ತಡಕ್ಕೆ ಒಳಗಾಗಿಯೋ ಅಥವಾ ಮನೆಯವರ ಒತ್ತಾಯಕ್ಕಾಗಿ ಓದಲು ಬರುತ್ತಿದ್ದ ಕಾರಣಕ್ಕೆ ಈ ನಿರ್ಧಾರ ಬಂದಿದ್ದಾರೆ ಎನ್ನಲಾಗಿದೆ. ಒಟ್ಟಾರೆ ವಿದ್ಯಾರ್ಥಿಗಳು ಅದ್ಯಾಕೋ ಅಸಮಾಧಾನಗೊಂಡಿದ್ದರು. ಒಲ್ಲದ ಓದಿಗೆ ವಿದ್ಯಾರ್ಥಿಗಳು ಬೇಸರಗೊಂಡು ಹಾಸ್ಟೆಲ್ ಬೇಲಿ ಎಗರಿ ಊರು ಸುತ್ತಲು ಹೋದ್ರಾ ಅಂತ ಕೇಳಿ ಬರುವ ಪ್ರಶ್ನೆ. ಪ್ರೊಫೆಷನಲ್ ಕಾಲೇಜಿನಲ್ಲಿ ಬೆಳಿಗ್ಗೆ ಹೇಳಲು ಸಂಜೆ ಮಲಗಲು ಮತ್ತು ಕಾಲಕಾಲಕ್ಕೆ ಓದಲು ಹೆಚ್ಚಿನ ಒತ್ತಾಯ ಇದ್ದೇ ಇರುತ್ತದೆ. ಇಲ್ಲದೆ ಹೋದರೆ ಮಕ್ಕಳು ಓದೋದಿಲ್ಲ. ಪೋಷಕರ ಒತ್ತಾಯಕ್ಕೆ ಸೇರಿದ ಕೆಲವು ಮಕ್ಕಳು ಓದಲು ಉತ್ಸಾಹ ಇಲ್ಲದವರು, ಈ ರೀತಿ ತಪ್ಪಿಸಿಕೊಳ್ಳಲು ಮಾರ್ಗ ಹುಡುಕಿದ್ರಾ ಅನ್ನುವ ಪ್ರಶ್ನೆ ಎದ್ದಿದೆ. ಟೂರಿಗೆ ಹೊರಟ ವಿದ್ಯಾರ್ಥಿಗಳು ಊರಿಗೆ ಬಂದಮೇಲೆ ಅವರನ್ನೇ ಈ ಪ್ರಶ್ನೆ ಕೇಳಬೇಕಿದೆ.