For the best experience, open
https://m.hosakannada.com
on your mobile browser.
Advertisement

Belthangady: ಶಾಸಕ ಹರೀಶ್‌ ಪೂಂಜ ಸೇರಿ 65 ಮಂದಿಗೆ ನ್ಯಾಯಾಲಯದಿಂದ ಸಮನ್ಸ್‌

Belthangady: ಶಾಸಕ ಹರೀಶ್‌ ಪೂಂಜ (Harish Poonja) ಹಾಗೂ 65 ಮಂದಿ ಬಿಜೆಪಿ ಕಾರ್ಯಕರ್ತರ ವಿರುದ್ಧ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಿಂದ ಸಮನ್ಸ್ ಜಾರಿ ಮಾಡಿರುವ ಕುರಿತು ವರದಿಯಾಗಿದೆ.
09:39 AM Jun 28, 2024 IST | ಸುದರ್ಶನ್
UpdateAt: 09:39 AM Jun 28, 2024 IST
belthangady  ಶಾಸಕ ಹರೀಶ್‌ ಪೂಂಜ ಸೇರಿ 65 ಮಂದಿಗೆ ನ್ಯಾಯಾಲಯದಿಂದ ಸಮನ್ಸ್‌
Advertisement

Belthangady: ಪೊಲೀಸರ ಕರ್ತವ್ಯಕ್ಕೆ ಅಡ್ಡಿ ಪಡಿಸಿ, ಪ್ರತಿಭಟನೆ ನಡೆಸಿದ ಶಾಸಕ ಹರೀಶ್‌ ಪೂಂಜ (Harish Poonja) ಹಾಗೂ 65 ಮಂದಿ ಬಿಜೆಪಿ ಕಾರ್ಯಕರ್ತರ ವಿರುದ್ಧ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಿಂದ ಸಮನ್ಸ್ ಜಾರಿ ಮಾಡಿರುವ ಕುರಿತು ವರದಿಯಾಗಿದೆ.

Advertisement

Jio: ‘ಜಿಯೋ’ ಬಳಕೆದಾರರಿಗೆ ಬಿಗ್ ಶಾಕ್- ರಿಚಾರ್ಜ್ ದರದಲ್ಲಿ 25% ಹೆಚ್ಚಳ !!

ಬಿಜೆಪಿ ಯುವಮೋರ್ಚಾದ ತಾಲೂಕು ಅಧ್ಯಕ್ಷ ಶಶಿರಾಜ್‌ ಶೆಟ್ಟಿ ಪರ ಪ್ರತಿಭಟನೆ ನಡೆಸಿದ್ದು, ಇದೀಗ ಬಿಜೆಪಿ ಮಂಡಲ ಅಧ್ಯಕ್ಷ ಶ್ರೀನಿವಾಸ ರಾವ್‌ ಧರ್ಮಸ್ಥಳ ಸೇರಿ 65 ಮಂದಿ ವಿರುದ್ಧ ಬೆಂಗಳೂರಿನಲ್ಲಿರುವ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಸಮನ್ಸ್‌ ಜಾರಿ ಮಾಡಿದೆ.

Advertisement

ಪ್ರಥಮ ಕೇಸ್‌ನಲ್ಲಿ 28 ಮಂದಿ, 2ನೇ ಕೇಸ್‌ನಲ್ಲಿ 37 ಮಂದಿಗೆ ಸಮನ್ಸ್‌ ಜಾರಿ ಮಾಡಲಾಗಿದೆ. ಹಾಗೂ ಜು.10 ರಂದು ಚೀಫ್‌ ಮೆಟ್ರೋಪಾಲಿಟನ್‌ ಮ್ಯಾಜಿಸ್ಟ್ರೇಟ್‌ ಕೋರ್ಟ್‌ನ ನ್ಯಾಯಾಧೀಶರ ಎದುರು ವಿಚಾರಣೆಗೆ ಹಾಜರಾಗುವಂತೆ ತಿಳಿಸಲಾಗಿದೆ.

ಬೆಳ್ತಂಗಡಿ ಪೊಲೀಸರು ಜನಪ್ರತಿನಿಧಿಗಳ ಬಗ್ಗೆ ಈ ಎರಡೂ ಪ್ರಕರಣದಲ್ಲಿ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಿದ್ದು, ಇದೀಗ ನ್ಯಾಯಾಲಯವು ಆರೋಪಿಗಳಿಗೆ ಸಮನ್ಸ್‌ ಜಾರಿ ಮಾಡಿ ವಿಚಾರಣೆ ಆರಂಭಿಸಲಿದೆ ಎಂದು ವರದಿಯಾಗಿದೆ.

ಹರೀಶ್ ಪೂಂಜ, ರಾಜೇಶ್ ಎಂ.ಕೆ., ಜಗದೀಶ ಕನ್ನಾಜೆ, ಚಂದ್ರಹಾಸ ದಾಸ್, ಪ್ರಕಾಶ್ ಆಚಾರಿ, ಸಂದೀಪ್ ರೈ, ನಿತೇಶ್ ಶೆಟ್ಟಿ, ಪವನ್ ಶೆಟ್ಟಿ, ಪ್ರದೀಪ್ ಶೆಟ್ಟಿ, ಪ್ರದೀಪ್ ಶೆಟ್ಟಿ ಬರಾಯ, ರಂಜಿತ್ ಶೆಟ್ಟಿ, ರಿಜೇಶ್ ಮಂದಾರಗಿರಿ, ಅವಿನಾಶ್ ಮಂದಾರಗಿರಿ, ಚಂದನ್ ಕಾಮತ್, ಸಂತೋಷ್ ಕುಮಾರ್ ಜೈನ್, ಪುಷ್ಪರಾಜ್ ಶೆಟ್ಟಿ, ಶ್ರೀನಿವಾಸ ರಾವ್, ರಾಜ್ ಪ್ರಕಾಶ್ ಶೆಟ್ಟಿ, ಗಣೇಶ್ ಲ್ಯಾಲ, ವಾಸು ಪಡ್ತಾಡಿ, ವಿಠಲ ಆಚಾರ್ಯ, ಗಣೇಶ್ ಕೆ.ಕೊಡಪತ್ತಾಯ, ವಿಕಾಸ್ ಶೆಟ್ಟಿ, ರವಿನಂದನ್ ಉಪ್ಪಿನಂಗಡಿ, ಸುಖೇಶ್, ನವೀನ್ ಕುಲಾಲ್, ಪದ್ಮನಾಭ ಶೆಟ್ಟಿ ಮತ್ತು ಶಂಕರ ಸಪಲ್ಯ- ಮೇ 18 ರಂದು ನಡೆದ ಪ್ರತಿಭಟನೆಗೆ ಸಂಬಂಧಿಸಿದಂತೆ ಇವರುಗಳಿಗೆ ಸಮನ್ಸ್ ಜಾರಿಯಾಗಿದೆ ಎಂದು ವರದಿಯಾಗಿದೆ.

ಹರೀಶ್ ಪೂಂಜ ಗರ್ಡಾಡಿ, ಜಯಾನಂದ ಗೌಡ, ರಾಜೇಶ್ ಎಂ.ಕೆ. ನವೀನ್ ನೆರಿಯ, ಚಂದ್ರಹಾಸ ಕಾವು, ಜಗದೀಶ್ ಲ್ಯಾಲ, ಗಿರೀಶ್ ಡೊಂಗ್ರೆ, ಉಮೇಶ್ ಕುಲಾಲ್, ಯಶವಂತ ಗೌಡ, ದಿನೇಶ್ ಪೂಜಾರಿ, ಶಶಿಧರ್ ಕಲ್ಕಂಜ, ಗಣೇಶ್ ಕೆ.ಪುದುವೆಟ್ಟು, ರವಿನಂದನ್ ನಟ್ಟಿಬೈಲು, ರಂಜಿತ್ ಶೆಟ್ಟಿ, ಅವಿನಾಶ್, ರಿಜೇಶ್, ಸುಧೀರ್, ಶಂಕರ ಸಪಲ್ಯ, ಸುಖೇಶ್, ಪದ್ಮನಾಭ ಶೆಟ್ಟಿ, ನವೀನ್ ಕುಲಾಲ್, ವಿಕಾಸ್ ಶೆಟ್ಟಿ, ಸಂತೋಷ್ ಕುಮಾರ್ ಜಿ., ಚಂದನ್ ಕಾಮತ್, ಪ್ರದೀಪ್ ಶೆಟ್ಟಿ, ಪುಷ್ಪರಾಜ್ ಶೆಟ್ಟಿ, ರಾಜ್ ಪ್ರಕಾಶ್ ಶೆಟ್ಟಿ, ವಿಠಲ ಆಚಾರ್ಯ, ಶ್ರೀನಿವಾಸ ರಾವ್, ಗಣೇಶ್ ಲ್ಯಾಲ, ರಂಜಿತ್ ಶೆಟ್ಟಿ, ರತನ್ ಶೆಟ್ಟಿ, ಪ್ರಕಾಶ್ ಆಚಾರಿ, ನಿತೇಶ್ ಶೆಟ್ಟಿ, ಪ್ರದೀಪ್ ಶೆಟ್ಟಿ, ಸಂದೀಪ್ ರೈ, ಪವನ್ ಶೆಟ್ಟಿ, ಶ್ರೀರಾಜ್ ಶೆಟ್ಟಿ ಮತ್ತು ಭರತ್ ಶೆಟ್ಟಿ- ಮೇ 20ರಂದು ಆಡಳಿತ ಸೌಧದ ಮುಂಭಾಗದಲ್ಲಿ ನಡೆಸಿದ ಪ್ರತಿಭಟನೆಗೆ ಸಂಬಂಧಿಸಿದಂತೆ ಇವರುಗಳಿಗೆ ಸಮನ್ಸ್ ಜಾರಿ ಮಾಡಲಾಗಿದೆ ಎಂದು ವರದಿಯಾಗಿದೆ.

Panipuri Ban: ಗೋಬಿ ಆಯ್ತು, ಈಗ ರಾಜ್ಯದಲ್ಲಿ ಪಾನಿಪುರಿ ಕೂಡ ಬ್ಯಾನ್ ?!

Advertisement
Advertisement
Advertisement