For the best experience, open
https://m.hosakannada.com
on your mobile browser.
Advertisement

Belagavi Shettar: ಭಾರೀ ಮುನ್ನಡೆಯಲ್ಲಿ ಶೆಟ್ಟರ್‌; ಕಣ್ಣು ಒರೆಸಿಕೊಳ್ಳುತ್ತ ಹೊರಬಂದ ಮೃಣಾಲ್‌

Belagavi Shettar: ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಜಗದೀಶ್‌ ಶೆಟ್ಟರು ಭರ್ಜರಿ ಮುನ್ನಡೆ ಸಾಧಿಸುತ್ತಿದ್ದಾರೆ.
11:49 AM Jun 04, 2024 IST | ಸುದರ್ಶನ್
UpdateAt: 11:49 AM Jun 04, 2024 IST
belagavi shettar  ಭಾರೀ ಮುನ್ನಡೆಯಲ್ಲಿ ಶೆಟ್ಟರ್‌  ಕಣ್ಣು ಒರೆಸಿಕೊಳ್ಳುತ್ತ ಹೊರಬಂದ ಮೃಣಾಲ್‌
Advertisement

Belagavi Shettar: ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಜಗದೀಶ್‌ ಶೆಟ್ಟರು ಭರ್ಜರಿ ಮುನ್ನಡೆ ಸಾಧಿಸುತ್ತಿದ್ದಾರೆ. ಜಗದೀಶ್‌ ಶೆಟ್ಟರ್‌ ಅವರು ತಮ್ಮ ಪ್ರತಿಸ್ಪರ್ಧಿ ಕಾಂಗ್ರೆಸ್‌ ಅಭ್ಯರ್ಥಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ ಅವರ ಪುತ್ರ ಮೃಣಾಲ್‌ ಹೆಬ್ಬಾಳ್ಕರ್‌ ಅವರ ವಿರುದ್ಧ ಗೆಲುವಿನತ್ತ ಸಾಗಿದ್ದಾರೆ.

Advertisement

ಜಗದೀಶ್‌ ಶೆಟ್ಟರ್‌ ಅವರು ಎಂಟನೇ ಸುತ್ತಿನಲ್ಲಿ ಮತ ಎಣಿಕೆ ಅಂತ್ಯಕ್ಕೆ 84168 ಮತಗಳ ಭರ್ಜರಿ ಮುನ್ನಡೆ ಗಳಿಸಿದ್ದಾರೆ.

ಇಲ್ಲಿಯವರೆಗೆ ಬಿಜೆಪಿ 334178, ಕಾಂಗ್ರೆಸ್‌ 250010 ಮತ ಪಡೆದಿದೆ. ಇತ್ತ ಮೃಣಾಲ್‌ ಹೆಬ್ಬಾಳ್ಕರ್‌ ಅವರು ನಿರಾಸೆಯಿಂದ ಕಣ್ಣು ಒರೆಸಿಕೊಳ್ಳುತ್ತ ಮತ ಎಣಿಕೆ ಕೇಂದ್ರದಿಂದ ಹೊರ ಬಂದಿರುವ ದೃಶ್ಯ ಸೆರೆಯಾಗಿದೆ. ಇನ್ನೊಂದು ಕಡೆ ಬಿಜೆಪಿ ಕಾರ್ಯಕರ್ತರು ವಿಜಯೋತ್ಸವದ ತಯಾರಿಯಲ್ಲಿದ್ದಾರೆ.

Advertisement

Advertisement
Advertisement
Advertisement