ಮುಖಪುಟಸುದ್ದಿರಾಜಕೀಯಅಂಕಣಮನರಂಜನೆಸಿನೆಮಾ-ಕ್ರೀಡೆಲೈಫ್ ಸ್ಟೈಲ್ಕ್ರೀಡೆ
Advertisement

Beer Price: ಕಾಂಗ್ರೆಸ್ ಅಧಿಕಾರ ಹಿಡಿದು 1 ವರ್ಷ - ಬಿಯರ್ ಬೆಲೆಯಲ್ಲಿ 3 ಸಲ ಏರಿಕೆ !!

Beer Price: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು 1 ವರ್ಷ ಆಗುವ ವೇಳೆಗೆ ಸರ್ಕಾರ 3 ಸಲ ಬಿಯರ್ ದರ( Beer Price)ಏರಿಕೆ ಮಾಡಿ ಬಿಯರ್ ಪ್ರಿಯರಿಗೆ ಶಾಕ್ ಕೊಟ್ಟಿದೆ.
09:12 AM May 19, 2024 IST | ಸುದರ್ಶನ್
UpdateAt: 09:12 AM May 19, 2024 IST
Advertisement

Beer Price: ಲೋಕಸಭಾ ಚುನಾವಣೆ ಮುಗಿದ ಬಳಿಕ ರಾಜ್ಯ ಸರ್ಕಾರವು ಮದ್ಯದ ದರದಲ್ಲಿ ಮತ್ತೆ ಏರಿಕೆ ಮಾಡಲು ಮುಂದಾಗಿದ್ದು ಪ್ರಿಯರಿಗೆ ಶಾಕ್ ನೀಡಲು ತಯಾರಿ ನಡೆಸಿದೆ. ಆದರೆ ಅಚ್ಚರಿ ಏನಂದ್ರೆ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು 1 ವರ್ಷ ಆಗುವ ವೇಳೆಗೆ ಸರ್ಕಾರ 3 ಸಲ ಬಿಯರ್ ದರ( Beer Price)ಏರಿಕೆ ಮಾಡಿ ಬಿಯರ್ ಪ್ರಿಯರಿಗೆ ಶಾಕ್ ಕೊಟ್ಟಿದೆ.

Advertisement

ಹೌದು, 2023 ರ ವಿಧಾನಸಭಾ ಚುನಾವಣೆಯ(Assembly Election) ನಂತರ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರವು ಈಗಾಗಲೇ ಮೂರು ಬಾರಿ ಬಿಯರ್ ಬೆಲೆಯನ್ನು ಹೆಚ್ಚಿಸಿದೆ. ಆರಂಭದಲ್ಲಿ ಶೇ.20ರಷ್ಟು ಹೆಚ್ಚುವರಿ ಸುಂಕ ವಿಧಿಸಲಾಗಿದ್ದು, ನಂತರ ಹೆಚ್ಚುವರಿ ಅಬಕಾರಿ ಸುಂಕವನ್ನು (ಎಇಡಿ) 185 ರಿಂದ ಶೇ.195ಕ್ಕೆ ಹೆಚ್ಚಿಸಲಾಗಿದೆ. ಇದರ ಪರಿಣಾಮವಾಗಿ ಬಿಯರ್ ಬೆಲೆಗಳು ಪ್ರತಿ ಬಾಟಲಿಗೆ ರೂ 8 ರಿಂದ 15 ರೂಪಾಯಿಯಷ್ಟು ಏರಿಕೆಯಾಯಿತು. ಕಳೆದ ಏಳೆಂಟು ತಿಂಗಳುಗಳಲ್ಲಿ ಬಿಯರ್ ಬೆಲೆಯು ಪ್ರತಿ ಬಾಟಲಿಗೆ ಸುಮಾರು 40 ರೂ.ಗಳಷ್ಟು ಏರಿಕೆಯಾಗಿದೆ.

ಅಂದಹಾಗೆ ರಾಜ್ಯದಲ್ಲಿ ಸರ್ಕಾರದ ಗ್ಯಾರಂಟಿ(Congress Guarantees) ಯೋಜನೆಗಳಿಗೆ ಯಾವುದೇ ಹಣಕಾಸಿನ ಬಿಕ್ಕಟ್ಟು ಎದುರಾಗದಂತೆ ಸರ್ಕಾರ ಮುಂದಾಲೋಚನೆ ನಡೆಸುತ್ತಿದೆ. ಹೀಗಾಗಿ ಮತ್ತೆ ಮದ್ಯದ ದರ ಏರುವುದು ಫಿಕ್ಸ್ ಆಗಿದೆ. ಅಲ್ಲದೆ ನೆರೆಯ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದಲ್ಲಿ ಮದ್ಯದ ದರ ತುಂಬಾ ಕಡಿಮೆ. ಹೀಗಾಗಿ ಈ ಮಾರ್ಗವನ್ನು ಬಳಸಿಯೇ ಸರ್ಕಾರ ಮದ್ಯಪ್ರಿಯರಿಗೆ ಶಾಕ್ ನೀಡಲು ತೆರೆಮರೆಯಲ್ಲಿ ತಯಾರಿ ಶುರುಮಾಡಿದೆ. ಒಟ್ಟಿನಲ್ಲಿ ಲೋಕಸಭೆ ಚುನಾವಣೆಯ(Parliament Election) ನಂತರ ನೆರೆಯ ರಾಜ್ಯಗಳ ಬೆಲೆಗಳನ್ನು ನೋಡಿ ಕರ್ನಾಟಕದಲ್ಲಿ ಮದ್ಯದ ಬೆಲೆಯನ್ನು ಹೆಚ್ಚಳ( Alcohol price hike)ಮಾಡಲು ಉದ್ದೇಶಿಸಿದೆ. ಹೀಗಾದರೆ ಮತ್ತೆ ಬಿಯರ್ ದರದಲ್ಲಿ ಭಾರೀ ಏರಿಕೆ ಆಗಲಿದ್ದು, ಸಿದ್ದು ಸರ್ಕಾರ 4ನೇ ಸಲ ಏರಿಕೆ ಮಾಡಿದಂತಾಗುತ್ತದೆ.

Advertisement

ಇದನ್ನೂ ಓದಿ: Karkala : ಸೈಜು ಕಲ್ಲು ಸಾಗಟದ ಟಿಪ್ಪರ್‌ ಲಾರಿ ಪಲ್ಟಿ; ಇಬ್ಬರು ಕಾರ್ಮಿಕರು ಮೃತ

Related News

Advertisement
Advertisement