For the best experience, open
https://m.hosakannada.com
on your mobile browser.
Advertisement

Beauty tips: ಉಪ್ಪು ನೀರಿಂದ ಮುಖ ತೊಳೆದರೆ ಇಷ್ಟೆಲ್ಲಾ ಲಾಭ ಉಂಟಾ ?!

06:53 PM Dec 30, 2023 IST | ಹೊಸ ಕನ್ನಡ
UpdateAt: 06:53 PM Dec 30, 2023 IST
beauty tips  ಉಪ್ಪು ನೀರಿಂದ ಮುಖ ತೊಳೆದರೆ ಇಷ್ಟೆಲ್ಲಾ ಲಾಭ ಉಂಟಾ
Advertisement

Advertisement

Beauty tips: ಹುಡುಗರು ಅಥವಾ ಹುಡುಗಿಯರು ತಮ್ಮ ಮುಖದ ಸೌಂದರ್ಯವನ್ನು ಹೆಚ್ಚಿಸಲು ನಾನಾ ಕಸರತ್ತು ಮಾಡುತ್ತಾರೆ. ಮಾರುಕಟ್ಟೆಗಳಲ್ಲಿ ಸಿಗುವ ಅನೇಕ ಕ್ರೀಂ ಗಳನ್ನು ಹಚ್ಚಿ ಸುಂದರವಾಗಿ(Beauty tips)ಕಾಣಲು ತವಕಿಸುತ್ತಾರೆ. ಆದರೆ ಇದೆಲ್ಲದಕ್ಕೂ ಇದೆಲ್ಲದಕ್ಕೂ ವಿಭಿನ್ನವಾಗಿ ಮನೆಯಲ್ಲೇ ಸಿಗುವಂತ ಉಪ್ಪಿನಿಂದ ನಿಮ್ಮ ಮುಖದ ಸೌಂದರ್ಯವನ್ನು ಹೆಚ್ಚಿಸಿಕೊಳ್ಳಬಹುದೆಂಬುದು ನಿಮಗೆ ಗೊತ್ತಾ?! ಹಾಗಿದ್ದರೆ ಇಲ್ಲಿದೆ ನೋಡಿ ಉಪಯುಕ್ತ ಮಾಹಿತಿ.

ಉಪ್ಪು ನೀರು ತಯಾರಿಸುವ ಹಾಗೂ ಬಳಸುವ ವಿಧಾನ:
• ಸ್ವಲ್ಪ ನೀರಿಗೆ ಅರ್ಧ ಚಮಚ ಉಪ್ಪು ಹಾಕಿ ಕಾಯಿಸಿಕೊಳ್ಳಿ
• ಕಾಯಿಸಿದ ನೀರನ್ನು ನೇರವಾಗಿ ಮುಖಕ್ಕೆ ಹಚ್ಚಿ
• ಇಲ್ಲವಾದರೆ ಕಾಯಿಸಿದ ನೀರಿಗೆ ಹತ್ತಿಯನ್ನು ಎದ್ದಿ ಮುಖಕ್ಕೆ ಹಚ್ಚಬಹುದು
• ಬಳಿಕ 10 ರಿಂದ 15 ನಿಮಿಷ ಬಿಟ್ಟು ತಣ್ಣೀರಿನಿಂದ ತೊಳೆಯಿರಿ

Advertisement

ಉಪ್ಪು ನೀರು ಹೆಚ್ಚುವುದರಿಂದ ಏನೆಲ್ಲಾ ಲಾಭ ಇದೆ?
ಈ ರೀತಿಯಾಗಿ ವಾರಕ್ಕೆ ಎರಡು ಬಾರಿ ಮಾಡಿ. ಇದರಿಂದ ಮುಖದಲ್ಲಿರುವ ಕೊಳೆ, ಕಪ್ಪು ಕಲೆ, ಮುಖದಲ್ಲಿ ತೂತಗಳಿದ್ದರೆ ಚಿಕ್ಕದಾಗಿ ಮುಚ್ಚುತ್ತೆ ಮೂಗಿನ ಮೇಲಿರೋ ಕಪ್ಪು ಕೊಳೆಯನ್ನೂ ತೆಗೆದುಹಾಕುತ್ತೆ. ಮುಖದಲ್ಲಿ ಎಣ್ಣೆಯ ಅಂಶವನ್ನು ತೆಗೆದುಹಾಕುತ್ತೆ. ಮೊಡವೆ, ಮೊಡವೆಯ ಕಲೆಗಳ ಕೂಡ ಮಾಯವಾಗುತ್ತೆ. ವಯಸ್ಸಾದ ರೀತಿ ಕಾಣುವುದನ್ನು ತಡೆಯುತ್ತೆ.

Advertisement
Advertisement
Advertisement