For the best experience, open
https://m.hosakannada.com
on your mobile browser.
Advertisement

Batteries plus: ಮೊಬೈಲ್ ಚಾರ್ಜ್ ಹಾಕುವಾಗ ಅಪ್ಪಿ ತಪ್ಪಿಯೂ ಈ ತಪ್ಪು ಮಾಡಬೇಡಿ !ಈ ಒಂದು ಮಿಸ್ಟೇಕ್ ನಿಂದಲೇ ನಿಮ್ಮ ಬ್ಯಾಟರಿ ಬೇಗ ಖಾಲಿ ಆಗೋದು

10:34 AM Dec 22, 2023 IST | ಕಾವ್ಯ ವಾಣಿ
UpdateAt: 10:58 AM Dec 22, 2023 IST
batteries plus  ಮೊಬೈಲ್ ಚಾರ್ಜ್ ಹಾಕುವಾಗ ಅಪ್ಪಿ ತಪ್ಪಿಯೂ ಈ ತಪ್ಪು ಮಾಡಬೇಡಿ  ಈ ಒಂದು ಮಿಸ್ಟೇಕ್ ನಿಂದಲೇ ನಿಮ್ಮ ಬ್ಯಾಟರಿ ಬೇಗ ಖಾಲಿ ಆಗೋದು
Advertisement

Charging Tips: ದಿನನಿತ್ಯ ಅತೀ ಹೆಚ್ಚು ಬಳಕೆ ಮಾಡುವ ವಸ್ತುಗಳಲ್ಲಿ ಸ್ಮಾರ್ಟ್ ಫೋನ್ ಕೂಡಾ ಒಂದು. ಆದರೆ ಪ್ರತಿಯೊಬ್ಬರೂ ಮೊಬೈಲ್​ ಚಾರ್ಜಿಂಗ್​ ವಿಚಾರದಲ್ಲಿ ಒಂದಲ್ಲಾ ಒಂದು ತಪ್ಪು ಮಾಡೇ ಮಾಡುತ್ತಾರೆ. ಹೌದು, ಚಾರ್ಜಿಂಗ್ ವಿಷಯದಲ್ಲಿ ನೀವು ಕೆಲವು ತಪ್ಪು ಮಾಡುವುದರಿಂದ ಸ್ಮಾರ್ಟ್‌ಫೋನ್ ಬ್ಯಾಟರಿ ಬಾಳಿಕೆ ಬರುವುದಿಲ್ಲ. ಅದಕ್ಕಾಗಿ ನೀವು ಈ ಟಿಪ್ಸ್ (Charging Tips) ಫಾಲೋ ಮಾಡಿ.

Advertisement

ಮುಖ್ಯವಾಗಿ ನಿಮ್ಮ ಮೊಬೈಲ್​ ಬ್ಯಾಟರಿ ಸಂಪೂರ್ಣವಾಗಿ ಖಾಲಿಯಾಗಲು ಬಿಡಬೇಡಿ. ಇದು ಬ್ಯಾಟರಿ ಅವಧಿಯನ್ನು ಕಡಿಮೆ ಮಾಡುತ್ತದೆ.

ಇನ್ನು ನಿಮ್ಮ ಸ್ಮಾರ್ಟ್‌ಫೋನ್ ಕಂಪನಿಯ ಚಾರ್ಜರ್​ ಅನ್ನೇ ಯಾವಾಗಲೂ ಬಳಸಿ. ಬೇರೆ ಮೊಬೈಲ್​ಗಳ ಚಾರ್ಜರ್ ಬಳಸಬೇಡಿ.

Advertisement

ಇದನ್ನು ಓದಿ: Bantwala: ಕಾಣೆಯಾಗಿದ್ದ ಕೋಣಗಳು ಪತ್ತೆ, ಎರಡು ಜೀವಂತವಾಗಿ, ಒಂದು ಶವವಾಗಿ ಪತ್ತೆ!

ಇನ್ನು ಅತಿ ಅವಶ್ಯಕ ಇಲ್ಲದ ಹೊರತು ಫಾಸ್ಟ್ ಚಾರ್ಚರ್ ಹಾಗೂ ಪವರ್​ ಬ್ಯಾಂಕ್​ ಬಳಸಬೇಡಿ.

ಮೊಬೈಲ್ ಬೇಗ ಚಾರ್ಜ್ ಆಗಬೇಕು ಅಂದ್ರೆ ನಿಮ್ಮ ಫೋನ್​ ಅನ್ನು ಸ್ವಿಚ್​ ಆಫ್​ ಮಾಡಿ ಅಥವಾ ಏರೊಪ್ಲೇನ್​ ಮೋಡ್​ಗೆ ಹಾಕಿ ಚಾರ್ಜ್​ ಮಾಡಿ.

ಇನ್ನು ರಾತ್ರಿ ಚಾರ್ಜ್​ ಹಾಕಿ ಮಲಗುವ ಅಭ್ಯಾಸ ತಪ್ಪು . ಓವರ್​ ಚಾರ್ಜಿಂಗ್​ ಬ್ಯಾಟರಿಯೊಳಗೆ ಶಾಖವನ್ನು ಉತ್ಪಾದಿಸುತ್ತದೆ. ಇದು ಬ್ಯಾಟರಿಗೆ ಹಾನಿಯುಂಟು ಮಾಡುತ್ತದೆ.

ನಿಮ್ಮ ಮೊಬೈಲ್​​ನಲ್ಲಿ ನೀವು ಬಳಸದ ವೇಳೆ ಕೂಡ ಅನೇಕ ಅಪ್ಲಿಕೇಶನ್​​ಗಳು ಓಪನ್​ ಇದ್ದರೆ ಇದು ಚಾರ್ಜ್​ ಕಬಳಿಸುತ್ತದೆ. ಹೀಗಾಗಿ ಬಳಸದ ವೇಳೆ ಟ್ಯಾಬ್​ಗಳನ್ನು, ಆ್ಯಪ್​​ಗಳನ್ನು ಕ್ಲೋಸ್​ ಮಾಡಿ.

Advertisement
Advertisement
Advertisement