For the best experience, open
https://m.hosakannada.com
on your mobile browser.
Advertisement

Basavanagouda patil yatnal: ಯತ್ನಾಳ್ ಗೆ ಲೋಕಸಭಾ ಟಿಕೆಟ್- ಈ ಸ್ಪರ್ಧೆ ಕಾಂಗ್ರೆಸ್ ನಿಂದಲೋ.. ಇಲ್ಲಾ ಬಿಜೆಪಿಯಿಂದಲೊ ?!

02:25 PM Dec 19, 2023 IST | ಹೊಸ ಕನ್ನಡ
UpdateAt: 03:00 PM Dec 19, 2023 IST
basavanagouda patil yatnal   ಯತ್ನಾಳ್ ಗೆ ಲೋಕಸಭಾ ಟಿಕೆಟ್  ಈ ಸ್ಪರ್ಧೆ ಕಾಂಗ್ರೆಸ್ ನಿಂದಲೋ   ಇಲ್ಲಾ ಬಿಜೆಪಿಯಿಂದಲೊ
Advertisement

Basavanagouda patil yatnal: ರಾಜ್ಯದಲ್ಲಿ ಹಿಂದೂ ಹುಲಿ, ಹಿಂದೂ ಫೈರ್ ಬ್ರಾಂಡ್ ಎಂದೇ ಖ್ಯಾತಿ ಪಡೆದಿರುವ ಬಿಜೆಪಿಯ ಪ್ರಬಲ ನಾಯಕ, ಕೇಂದ್ರದ ಮಾಜಿ ಸಚಿವ ಹಾಗೂ ಹಾಲಿ ಶಾಸಕರಾಗಿರುವ ಬಸನಗೌಡ ಪಾಟೀಲ್ ಯತ್ನಾಳ್(Basavanagouda patil yatnal) ಅವರು ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲಿದ್ದಾರೆ ಎಂಬ ವಿಚಾರವನ್ನು ಇದೀಗ ಸಾಕಷ್ಟು ಸುದ್ದಿಯಾಗುತ್ತಿದೆ.

Advertisement

ಹೌದು, ಬಿಜೆಪಿ(BJP) ನಾಯಕರ ಆಗಿರುವ ಬಸನಗೌಡ ಪಾಟೀಲ್ ಯತ್ನಾಳ್ ಅವರು ತಮ್ಮ ಪಕ್ಷದ ವರಿಷ್ಠರಾದ ಬಿಎಸ್ ಯಡಿಯೂರಪ್ಪನವರ ವಿರುದ್ಧ ಮೊದಲಿನಿಂದಲೂ ಕಿಡಿ ಕಾರುತ್ತಿದ್ದಾರೆ. ಅದರಲ್ಲೂ ಕೂಡ ಅವರ ಪುತ್ರ ವಿಜಯೇಂದ್ರ ರಾಜಕೀಯಕ್ಕೆ ಎಂಟ್ರಿ ಕೊಟ್ಟು, ಸದ್ಯ ಬಿಜೆಪಿ ರಾಜ್ಯಾಧ್ಯಕ್ಷ ಆದಬಳಿಕವಂತೂ ಅಪ್ಪ ಮಗನ ವಿರುದ್ಧ ಪದೇಪದೇ ವಾಗ್ದಾಳಿ ನಡೆಸುತ್ತಿದ್ದಾರೆ. ಒಟ್ಟಾರೆ ಪಕ್ಷದ ವಿರುದ್ಧವೇ ಬಂಡೆದ್ದಿರುವಂತೆ ಮಾತನಾಡುತ್ತಿದ್ದಾರೆ. ಹೀಗೆ ವೈಲೆಂಟ್ ಆಗಿರುವ ಯತ್ನಾಳ್ ಅವರನ್ನು ಸೈಲೆಂಟ್ ಮಾಡಲು ಬಿಜೆಪಿ ಹೈಕಮಾಂಡ್‌ ಅವರನ್ನು ರಾಷ್ಟ್ರ ರಾಜಕಾರಣಕ್ಕೆ ಕರೆತರಲು ಮುಂದಾಗಿದೆ ಎನ್ನಲಾಗಿದೆ.

ಇದನ್ನು ಓದಿ: Parliment election : ಲೋಕಸಭಾ ಚುನಾವಣೆ - ಕರ್ನಾಟಕ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ !!

Advertisement

ಹೀಗಾಗಿ ಮುಂದಿನ ಲೋಕಸಭಾ ಚುನಾವಣೆಯಲ್ಲಿ(Parliament election) ಬಸವನಗೌಡ ಪಾಟೀಲ್‌ ಯತ್ನಾಳ್ ಅವರಿಗೆ ಟಿಕೆಟ್ ನೀಡುವ ಮೂಲಕ ಅವರ ಅಸಮಾಧಾನವನ್ನ ಶಮನಗೊಳಿಸಲು ಬಿಜೆಪಿ ಹೈಕಮಾಂಡ್ ಯೋಜಿಸಿದೆ ಎನ್ನುವ ಮಾತುಗಳು ಕೂಡ ರಾಜಕೀಯ ವಲಯದಲ್ಲಿ ಕೇಳಿಬಂದಿವೆ. ಅಭ್ಯರ್ಥಿಗಳ ಕೊರತೆ ಇರುವ ಕ್ಷೇತ್ರದಲ್ಲಿ ಹಿಂದು ಹುಲಿ ಯತ್ನಾಳ್‌ ಅವರನ್ನ ಕಣಕ್ಕಿಳಿಸಲು ಮಾಸ್ಟರ್‌ ಪ್ಲಾನ್‌ ಅನ್ನು ಬಿಜೆಪಿ ಹೈಕಮಾಂಡ್‌ ಹಾಕಿಕೊಂಡಿದೆ.

ಇದನ್ನು ಓದಿ: H D kumarswamy: ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿಗೆ ಕೇಂದ್ರ ಮಂತ್ರಿ ಪಟ್ಟ ?! ಬಿಜೆಪಿ ನಾಯಕನಿಂದಲೇ ಸಿಕ್ತು ಬಿಗ್ ಅಪ್ಡೇಟ್

ಬೆಳಗಾವಿಯಿಂದಲೇ ಸ್ಪರ್ದೆ?
ರಾಜ್ಯದಲ್ಲಿ ಕೆಲವು ಹೈವೋಲ್ಟೇಜ್ ಕ್ಷೇತ್ರಗಳ ಪೈಕಿ ಬೆಳಗಾವಿಯ(Belagavi) ಲೋಕಸಭಾ ಕ್ಷೇತ್ರವು ಕೂಡ ಒಂದು. ಸದ್ಯ ಇಲ್ಲಿ ಮಂಗಳ ಅಂಗಡಿಯವರು ಸಂಸದರಾಗಿದ್ದಾರೆ. ಆದರೆ ಈ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪ್ರಬಲ ನಾಯಕ ಸತೀಶ್ ಜಾರಕಿಹೊಳಿಯನ್ನು ಈ ಕ್ಷೇತ್ರದಿಂದ ಕಣಕ್ಕಿಳಿಸಲು ಈ ಚಿಂತನೆ ನಡೆಸಿದೆ. ಒಂದು ವೇಳೆ ಸತೀಶ್ ಜಾರಕಿಹೊಳಿ ಸ್ಪರ್ಧಿಸಿದರೆ ಗೆಲುವು ನಿಶ್ಚಿತ ಎಂದು ಹೇಳಲಾಗುತ್ತಿದೆ. ಹೀಗಾಗಿ ಮಂಗಳ ಅಂಗಡಿಯವರನ್ನ ಸತೀಶ್ ಜಾರಕಿಹೊಳಿಯವರ ವಿರುದ್ಧ ನಿಲ್ಲಿಸಿದರೆ ಬಿಜೆಪಿಗೆ ಸೋಲು ಖಚಿತ. ಈ ಹಿನ್ನೆಲೆಯಲ್ಲಿ ಬಸವನಗೌಡ ಪಾಟೀಲ ಅವರನ್ನು ಬೆಳಗಾವಿ ಕ್ಷೇತ್ರದಿಂದ ಸ್ಪರ್ಧೆಗೆ ಇಳಿಸಿ ಬಿಜೆಪಿ ಈ ಬಾರೀಯೂ ಬೆಳಗಾವಿಯನ್ನು ತನ್ನ ತೆಕ್ಕೆಗೆ ಎಳೆದುಕೊಳ್ಳಲು ಚಿಂತನೆ ನಡೆಸಿದೆ ಎನ್ನಲಾಗಿದೆ.

Advertisement
Advertisement
Advertisement