ಮುಖಪುಟಸುದ್ದಿರಾಜಕೀಯಅಂಕಣಮನರಂಜನೆಸಿನೆಮಾ-ಕ್ರೀಡೆಲೈಫ್ ಸ್ಟೈಲ್ಕ್ರೀಡೆ
Advertisement

Bantwala Crime: ಬಂಟ್ವಾಳ: ನಾಪತ್ತೆಯಾಗಿದ್ದ ಅಮ್ಟಾಡಿ ಗ್ರಾಮ ಪಂಚಾಯತ್‌ ಕಾರ್ಯದರ್ಶಿ ಪಟ್ರಮೆ ಹೊಳೆಯಲ್ಲಿ ಶವವಾಗಿ ಪತ್ತೆ

Bantwala Crime: ನಾಪತ್ತೆಯಾಗಿದ್ದ ಅಮ್ಟಾಡಿ ಗ್ರಾಮ ಪಂಚಾಯತ್‌ ಕಾರ್ಯದರ್ಶಿ ಲಕ್ಷ್ಮೀ ನಾರಾಯಣ ಎಂಬುವವರ ಶವವು ಧರ್ಮಸ್ಥಳ ಪಟ್ರಮೆ ಬಳಿಯ ನದಿಯಲ್ಲಿ ಪತ್ತೆಯಾಗಿದೆ. 
12:06 PM Apr 01, 2024 IST | ಸುದರ್ಶನ್
UpdateAt: 12:15 PM Apr 01, 2024 IST

Bantwala Crime: ಆರು ದಿನಗಳ ಹಿಂದೆ ನಾಪತ್ತೆಯಾಗಿದ್ದ ಅಮ್ಟಾಡಿ ಗ್ರಾಮ ಪಂಚಾಯತ್‌ ಕಾರ್ಯದರ್ಶಿ ಲಕ್ಷ್ಮೀ ನಾರಾಯಣ ಎಂಬುವವರ ಶವವು ಧರ್ಮಸ್ಥಳ ಪಟ್ರಮೆ ಬಳಿಯ ನದಿಯಲ್ಲಿ ಪತ್ತೆಯಾಗಿದೆ.

Advertisement

ಇದನ್ನೂ ಓದಿ: Vanita Raut: ಲೋಕಸಭಾ ಚುನಾವಣೆಯಲ್ಲಿ ಗೆದ್ದರೆ ಬಡವರಿಗೆ ವಿದೇಶಿ ವಿಸ್ಕಿ, ಬಿಯರ್‌ ಭಾಗ್ಯ-ಸ್ವತಂತ್ರ ಅಭ್ಯರ್ಥಿಯಿಂದ ಘೋಷಣೆ

ಇವರು ಚುನಾವಣಾ ಕರ್ತವ್ಯದಲ್ಲಿದ್ದು, ಆದರೆ ಮಾ.27 ರಂದು ತಮ್ಮ ಕರ್ತವ್ಯಕ್ಕೆ ಹಾಜರಾಗದೆ ನಾಪತ್ತೆಯಾಗಿದ್ದರು. ಈ ಕುರಿತು ಅವರ ಪತ್ನಿ ಪೂಂಜಾಲಕಟ್ಟೆ ಪೊಲೀಸ್‌ ಠಾಣೆಯಲ್ಲಿ ದೂರನ್ನು ನೀಡಿದ್ದರು.

Advertisement

ಇದನ್ನೂ ಓದಿ: Bantwala: ಬಂಟ್ವಾಳ; ಮಹಡಿ ಮೇಲಿಂದ ಬಿದ್ದು ಬಾಲಕ ಸಾವು

ಇದಕ್ಕೂ ಮೊದಲು ಒಂದು ಬಾರಿ ಇದೇ ರೀತಿ ನಾಪತ್ತೆಯಾಗಿದ್ದ ಇವರು, ನಂತರ ಕರ್ತವ್ಯಕ್ಕೆ ಬಂದಿದ್ದರು. ಪೊಲೀಸರು ಮೊಬೈಲ್‌ ಲೊಕೇಶನ್‌ ಟ್ರೇಸ್‌ ಮಾಡಿದಾಗ ಪಟ್ರಮೆಯಲ್ಲಿ ಕಂಡು ಬಂದಿತ್ತು. ಆ ಪರಿಸರದಲ್ಲಿ ಹುಡುಕಾಟ ನಡೆಸಿದಾಗ ಪಟ್ರಮೆ ಹೊಳೆಯಲ್ಲಿ ಶವ ಪತ್ತೆಯಾಗಿದೆ.

ಇದು ಆತ್ಮಹತ್ಯೆಯೋ ಅಥವಾ ಕೊಲೆಯೋ ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Advertisement
Advertisement
Next Article