Bantwala : ಬಿಸಿಲ ಝಳಕ್ಕೆ ಬಸ್ ಗಾಜು ಪುಡಿ ಪುಡಿ- ಇಬ್ಬರು ಮಕ್ಕಳು ಸೇರಿ ಚಾಲಕನಿಗೆ ಗಾಯ !!
Bantwala: ಬಿಸಿಲ ಧಗೆಗೆ ಜನ ತತ್ತರಿಸಿ ಹೋಗಿದ್ದಾರೆ. ಕಂಡುಕೇಳರಿಯದ ತಾಪಮಾನ ಈ ಸಲ ಕಂಡುಬಂದಿದೆ. ಮನೆಯಿಂದ ಹೊರ ಹೋಗುವುದು ಬಿಡಿ, ಮನೆಯಲ್ಲಿ ಇರಲೂ ಒದ್ದಾಡುವ ಪರಿಸ್ಥಿತಿ ಬಂದೊದಗಿದೆ. ಆದರೀಗ ಕರಾವಳಿಯಲ್ಲಿ ಇದು ಇನ್ನೂ ಮಿತಿ ಮೀರಿ ಹೋದಂತೆ ಕಾಣುತ್ತಿದೆ. ಯಾಕೆಂದರೆ ಬಿಸಿಲಿನ ತಾಪದಿಂದ ಬಸ್ಸಿನ ಗಾಜು ಒಡೆದು ಪುಡಿಪುಡಿಯಾಗಿದೆ.
ಹೌದು, ದಕ್ಷಿಣ ಕನ್ನಡ(Dakshina Kannada) ಜಿಲ್ಲೆಯ ಬಂಟ್ವಾಳ(Bantwala) ತಾಲೂಕಿನ ಉರಿಮಜಲು(Urimajalu) ಎಂಬಲ್ಲಿ ಕೇರಳ ರಾಜ್ಯ ರಸ್ತೆ ನಿಗಮದ ಮಲಬಾರ್ ಬಸ್ಸಿನ ಮುಂಭಾಗದ ಗಾಜು ಒಡೆದ ಪರಿಣಾಮ, ಇಬ್ಬರು ಮಕ್ಕಳು ಹಾಗೂ ಚಾಲಕ ಗಾಯಗೊಂಡ ಘಟನೆ ಬೆಳಕಿಗೆ ಬಂದಿದ್ದು ಎಲ್ಲರಿಗೂ ಅಘಾತ ಉಂಟುಮಾಡಿದೆ. ಬಿಸಿಲ ಝಳ ಭಯ ಹುಟ್ಟಿಸಿದೆ.
ಪುತ್ತೂರಿನಿಂದ(Putturu) ವಿಟ್ಲ(Vitla) ಮೂಲಕ ಕಾಸರಗೋಡಿಗೆ ಹೊರಟಿದ್ದ ಬಸ್ ಉರಿಮಜಲು ಸೊಸೈಟಿ ತಲುಪುತ್ತಿದ್ದಂತೆ ಮುಂಭಾಗದ ಗಾಜು ಒಡೆದಿದೆ. ಬಸ್‌ನ ಮುಂಭಾಗದ ಸೀಟಿನಲ್ಲಿ ಕುಳಿತಿದ್ದ ಇಬ್ಬರು ಬಾಲಕರು ಹಾಗೂ ಬಸ್ ಚಾಲಕ ಗಾಯಗೊಂಡಿದ್ದಾರೆ. ಓರ್ವ ಬಾಲಕ ಗಂಭೀರವಾಗಿ ಗಾಯಗೊಂಡಿದ್ದಾರೆ ಎನ್ನಲಾಗಿದೆ.