For the best experience, open
https://m.hosakannada.com
on your mobile browser.
Advertisement

Bangalore: ರಾಜ್ಯಕ್ಕೇ ಖುಷಿ ಸುದ್ದಿ ಕೊಟ್ಟವಳ ಕಹಿ ಸುದ್ದಿ; ದಿವ್ಯಾ ವಸಂತ ಗ್ಯಾಂಗ್‌ನಿಂದ 100 ಜನರಿಗೆ ಸುಲಿಗೆ; ದಿವ್ಯಾ ವಸಂತ ನಾಪತ್ತೆ

Bangalore: ಅಂದು ರಾಜ್ಯವೇ ಖುಷಿ ಪಡುವ ಸುದ್ದಿ ಎಂದು ಅಮೂಲ್ಯ ಪ್ರೆಗ್ನೆಂಟ್‌ ವಿಷಯವನ್ನು ಬಿತ್ತರ ಮಾಡಿ ನಗೆಪಾಟಲಿಗೀಡಾಗಿದ್ದ ದಿವ್ಯಾ ವಸಂತಳ ಹುಡುಕಾಟದಲ್ಲಿ ಇಂದು ಪೊಲೀಸರಿದ್ದಾರೆ.
09:18 AM Jul 06, 2024 IST | ಸುದರ್ಶನ್
UpdateAt: 09:24 AM Jul 06, 2024 IST
bangalore  ರಾಜ್ಯಕ್ಕೇ ಖುಷಿ ಸುದ್ದಿ ಕೊಟ್ಟವಳ ಕಹಿ ಸುದ್ದಿ  ದಿವ್ಯಾ ವಸಂತ ಗ್ಯಾಂಗ್‌ನಿಂದ 100 ಜನರಿಗೆ ಸುಲಿಗೆ  ದಿವ್ಯಾ ವಸಂತ ನಾಪತ್ತೆ
Advertisement

Bangalore: ಇಂದಿರಾನಗರ ʼಸ್ಪಾʼ ವ್ಯವಸ್ಥಾಪಕನಿಗೆ ಬೆದರಿಸಿ 15 ಲಕ್ಷ ರೂ. ಹಣ ಸುಲಿಗೆ ಯತ್ನ ಪ್ರಕರಣಕ್ಕೆ ಸಂಬಂಧಪಟ್ಟಂತೆ ರಾಜ್‌ ನ್ಯೂಸ್‌ ಸುದ್ದಿವಾಹಿನಿ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ) ಸೇರಿ ಇಬ್ಬರನ್ನು ಜಿ.ಬಿ. ನಗರ ಪೊಲೀಸರು ಬಂಧನ ಮಾಡಿದ್ದಾರೆ. ಸುದ್ದಿವಾಹಿನಿಯ ಸಿಇಒ ರಾಜಾನುಕುಂಟೆ ವೆಂಕಟೇಶ್‌ ಹಾಗೂ ನಿರೂಪಕಿ ದಿವ್ಯಾ ವಸಂತ ಸೋದರ ಸಂದೇಶ್‌ ಬಂಧಿತರು. ಆರೋಪಿಗಳಿಂದ 3 ಮೊಬೈಲ್‌ ಜಪ್ತಿ ಮಾಡಲಾಗಿರುವ ಕುರಿತು ವರದಿಯಾಗಿದೆ.

Advertisement

ಅಂದು ರಾಜ್ಯವೇ ಖುಷಿ ಪಡುವ ಸುದ್ದಿ ಎಂದು ಅಮೂಲ್ಯ ಪ್ರೆಗ್ನೆಂಟ್‌ ವಿಷಯವನ್ನು ಬಿತ್ತರ ಮಾಡಿ ನಗೆಪಾಟಲಿಗೀಡಾಗಿದ್ದ ದಿವ್ಯಾ ವಸಂತಳ ಹುಡುಕಾಟದಲ್ಲಿ ಇಂದು ಪೊಲೀಸರಿದ್ದಾರೆ. ಈ ಕೃತ್ಯ ಬೆಳಕಿಗೆ ಬಂದ ನಂತರ ನಿರೂಪಕಿ ದಿವ್ಯಾ, ಸಚಿನ್‌ ಹಾಗೂ ಆಕಾಶ್‌ ಪತ್ತೆಗೆ ಪೊಲೀಸರು ಹುಡುಕಾಟ ನಡೆಸಿದ್ದು, ತನಿಖೆ ನಡೆಯುತ್ತಿದೆ.

ಇತ್ತೀಚೆಗೆ ಇಂದಿರಾನಗರದ 100 ಅಡಿ ರಸ್ತೆ 15 ನೇ ಮುಖ್ಯರಸ್ತೆಯ ʼಟ್ರಿ ಸ್ಟ್ರಾ ಅಂಡ್‌ ಬ್ಯೂಟಿʼ ಪಾರ್ಲರ್‌ನ ವ್ಯವಸ್ಥಾಪಕ ಶಿವಶಂಕರ ಅವರಿಗೆ ವೇಶ್ಯಾವಾಟಿಕೆ ನಡೆದಿದೆ ಎಂದು ಈ ತಂಡ ಬೆದರಿಸಿದ್ದು, ಹಣ ಸುಲಿಗೆ ಮಾಡಲು ಯತ್ನಿಸಿದ್ದು, ಈ ಕುರಿತು ತನಿಖೆ ಮಾಡಿದ ಪೊಲೀಸರು ತಾಂತ್ರಿಕ ಮಾಹಿತಿಯನ್ನು ಆಧರಿಸಿದ್ದು, ಸಿಇಒ ಸೇರಿ ಇಬ್ಬರನ್ನು ಬಂಧನ ಮಾಡಿದ್ದಾರೆ ಎಂದು ವರದಿಯಾಗಿದೆ.

Advertisement

ವೆಂಕಟೇಶ್‌ ಹಾಗೂ ದಿವ್ಯಾ ಸುಲಿಗೆ ಕೃತ್ಯಗಳಿಗೆ ವಾಟ್ಸ್‌ಅಪ್‌ನಲ್ಲಿ ಸೈ ರಿಸರ್ಚ್‌ ಟೀಂ ಎಂಬ ಹೆಸರಿನ ಗ್ರೂಪ್‌ ಮಾಡಿದ್ದು, ಈ ಗ್ರೂಪಿನಲ್ಲಿ ಸುಲಿಗೆ ಕೃತ್ಯ ಕುರಿತು ಚರ್ಚೆ ನಡೆಸುತ್ತಿದ್ದರು ಎಂದು ಮೂಲಗಳು ತಿಳಿಸಿರುವ ಕುರಿತು ವರದಿಯಾಗಿದೆ.

Lalu Prasad Yadav: ಆಗಸ್ಟ್ ವೇಳೆಗೆ ಮೋದಿ ಸರ್ಕಾರ ಪತನ, ಯಾವಾಗ ಬೇಕಾದರೂ ನಡೆಯಬಹುದು ಚುನಾವಣೆ- ಏನಿದು ಶಾಕಿಂಗ್ ನ್ಯೂಸ್ !!

Advertisement
Advertisement
Advertisement