For the best experience, open
https://m.hosakannada.com
on your mobile browser.
Advertisement

Bangalore: ಸುಲಿಗೆ, ಬೆದರಿಕೆ ಪ್ರಕರಣ; ನಿರೂಪಕಿ ದಿವ್ಯಾ ವಸಂತ ಕೇರಳದಲ್ಲಿ ಬಂಧನ

Bangalore: ನಿರೂಪಕಿ ದಿವ್ಯವಸಂತ ಬಂಧನವಾಗಿದೆ. ಈಕೆಯನ್ನು ಬೆಂಗಳೂರಿನ ಜೀವನ್‌ ಭೀಮಾನ ಪೊಲೀಸರು ಬಂಧನ ಮಾಡಿದ್ದಾರೆ.
12:42 PM Jul 11, 2024 IST | ಸುದರ್ಶನ್
UpdateAt: 12:42 PM Jul 11, 2024 IST
bangalore  ಸುಲಿಗೆ  ಬೆದರಿಕೆ ಪ್ರಕರಣ  ನಿರೂಪಕಿ ದಿವ್ಯಾ ವಸಂತ ಕೇರಳದಲ್ಲಿ ಬಂಧನ

Bangalore: ಇಡೀ ರಾಜ್ಯವೇ ಖುಷಿ ಪಡೋ ಸುದ್ದಿಯಿದು ಎಂದು ಹೇಳಿ ಕಹಿ ಸುದ್ದಿಯಲ್ಲಿ ಫೇಮಸ್‌ ಆದ, ಬ್ಲ್ಯಾಕ್‌ಮೇಲ್‌ ಮಾಡಿ ಹಲವು ಕಡೆ ಸುಲಿಗೆ ಮಾಡಿರುವ ಆರೋಪ ಹೊತ್ತಿರುವ ನಿರೂಪಕಿ ದಿವ್ಯವಸಂತ ಬಂಧನವಾಗಿದೆ. ಈಕೆಯನ್ನು ಬೆಂಗಳೂರಿನ ಜೀವನ್‌ ಭೀಮಾನ ಪೊಲೀಸರು ಬಂಧನ ಮಾಡಿದ್ದಾರೆ.

Advertisement

ಇಂದಿರಾನಗರದಲ್ಲಿರುವ ಸ್ಪಾ ಮಾಲೀಕನಿಗೆ ಬೆದರಿಕೆ ಕರೆ ಮಾಡಿ, ಹಣ ಸುಲಿಗೆ ಮಾಡಿದ ಪ್ರಕರಣ ಇತ್ತೀಚೆಗೆ ನಡೆದಿದ್ದು, ಇದರಲ್ಲಿ ದಿವ್ಯ ವಸಂತನ ತಮ್ಮ ಬಂಧನವಾಗಿದ್ದು, ವೆಂಕಟೇಶ್‌ ಬಂಧನವಾಗಿದ್ದು, ದಿವ್ಯಾ ವಸಂತ ಪರಾರಿಯಾಗಿ ತಲೆಮರೆಸಿಕೊಂಡಿದ್ದಳು.

ದಿವ್ಯ ವಸಂತ ಕೇರಳದಲ್ಲಿ ಇರುವ ಕುರಿತು ಮಾಹಿತಿ ಪೊಲೀಸರಿಗೆ ಲಭ್ಯವಾಗಿತ್ತು. ಒಂದು ವಾರದಿಂದ ನಾಪತ್ತೆಯಾಗಿದ್ದ ದಿವ್ಯ ವಸಂತ ತಮಿಳುನಾಡಿನಿಂದ ಕೇರಳದಲ್ಲಿ ಹೋಗಿ ಸೇರಿಕೊಂಡಿದ್ದು, ಸದ್ಯ ಪೊಲೀಸರು ಇದೀಗ ಕೇರಳದಿಂದ ಬಂಧಿಸಿ ಕರೆತಂದಿದ್ದು, ವಿಚಾರಣೆ ನಡೆಸುತ್ತಿದ್ದಾರೆ.

Advertisement

Advertisement
Advertisement
Advertisement