For the best experience, open
https://m.hosakannada.com
on your mobile browser.
Advertisement

Bangalore: ಸ್ಕೂಟರ್‌ನಲ್ಲಿ ಬಂದು ಕಾಲೇಜು ಹುಡುಗಿಯರಿಗೆ ತನ್ನ ಗುಪ್ತಾಂಗ ತೋರಿಸಿದ ವ್ಯಕ್ತಿಯ ಬಂಧನ

Bengaluru: ಸ್ಕೂಟರ್‌ನಲ್ಲಿ ಬಂದ ವ್ಯಕ್ತಿಯೋರ್ವ ತನ್ನ ಪ್ಯಾಂಟ್‌ ಜಿಪ್‌ ತೆಗೆದು ಮರ್ಮಾಂಗ ತೋರಿಸಿದ ಹೀನ ಘಟನೆಯೊಂದು ನಡೆದಿದ್ದು, ಇದೀಗ ಪೊಲೀಸರು ವಿಕೃತಿ ಮೆರೆದ ವ್ಯಕ್ತಿಯನ್ನು ಇದೀಗ ಬಂಧಿಸಿದ್ದಾರೆ.
08:20 PM Jul 08, 2024 IST | ಸುದರ್ಶನ್
UpdateAt: 08:20 PM Jul 08, 2024 IST
bangalore  ಸ್ಕೂಟರ್‌ನಲ್ಲಿ ಬಂದು ಕಾಲೇಜು ಹುಡುಗಿಯರಿಗೆ ತನ್ನ ಗುಪ್ತಾಂಗ ತೋರಿಸಿದ ವ್ಯಕ್ತಿಯ ಬಂಧನ
Image Credit: Asianet Suvarna
Advertisement

Bengaluru: ಬೆಂಗಳೂರಿನ ವಿ.ವಿ.ಪುರಂ ಕಾಲೇಜಿನ ಬಳಿ, ಹುಡುಗಿಯರು ನಡೆದುಕೊಂಡು ಹೋಗುವಾಗ ಸ್ಕೂಟರ್‌ನಲ್ಲಿ ಬಂದ ವ್ಯಕ್ತಿಯೋರ್ವ ತನ್ನ ಪ್ಯಾಂಟ್‌ ಜಿಪ್‌ ತೆಗೆದು ಮರ್ಮಾಂಗ ತೋರಿಸಿದ ಹೀನ ಘಟನೆಯೊಂದು ನಡೆದಿದ್ದು, ಇದೀಗ ಪೊಲೀಸರು ವಿಕೃತಿ ಮೆರೆದ ವ್ಯಕ್ತಿಯನ್ನು ಇದೀಗ ಬಂಧಿಸಿದ್ದಾರೆ.

Advertisement

BPL Card: ನೀವೇನಾದರೂ ಈ ಸೌಲಭ್ಯ ಹೊಂದಿದ್ದರೆ ಬಿಪಿಎಲ್‌ ಕಾರ್ಡ್‌ ರದ್ದು; ಸರಕಾರದಿಂದ ಖಡಕ್ ಆದೇಶ

ಕಾಲೇಜು ವಿದ್ಯಾರ್ಥಿನಿಯರಿಗೆ ತನ್ನ ಮರ್ಮಾಂಗ ತೋರಿಸಿದ ವ್ಯಕ್ತಿ ತನ್ನ ಮುಖಕ್ಕೆ ಬಟ್ಟೆ ಕಟ್ಟಿಕೊಂಡಿದ್ದು, ಸ್ಕೂಟರ್‌ನಲ್ಲಿ ಹೋಗುತ್ತಿದ್ದ. ಈ ವ್ಯಕ್ತಿ ಯುವತಿಯರು ಹೆಚ್ಚಾಗಿರುವ ಕಾಲೇಜನ್ನು ಟಾರ್ಗೆಟ್‌ ಮಾಡುತ್ತಿದ್ದು, ಅಲ್ಲಿ ತನ್ನ ಕಾಮುಕ ವರ್ತನೆಯನ್ನು ಮಾಡುತ್ತಿದ್ದ. ಇಂದು ಕೂಡಾ ಇದೇ ರೀತಿ ಮಾಡಿದ್ದಾನೆ.

Advertisement

ಸ್ಕೂಟರ್‌ನಲ್ಲಿ ಕುಳಿತು ತನ್ನ ಗುಪ್ತಾಂಗ ಹೊರಗೆ ತೆಗೆದು ತೋರಿಸಿ ವಿಕೃತವಾಗಿ ನಡೆದುಕೊಳ್ಳುತ್ತಿದ್ದ ಈತನನ್ನು ಹಲವು ಯುವತಿಯವರು ಸೇರಿ ಹೇಗಾದರೂ ಈತನನ್ನು ಹಿಡಯಬೇಕು ಎನ್ನುವಷ್ಟರಲ್ಲಿ ಆತ ಅಲ್ಲಿಂದ ಪರಾರಿಯಾಗುತ್ತಿದ್ದ.

ಎಂದಿನಂತೆ ಈತ ನಿನ್ನೆ ಕೂಡಾ ಮಧ್ಯಾಹ್ನ ತನ್ನ ಮುಖಕ್ಕೆ ಬಟ್ಟೆ ಹಾಕಿ ವಿವಿ ಪುರಂ ಕಾಲೇಜಿನ ಬಳಿ ಬಂದು ತನ್ನ ಮರ್ಮಾಂಗ ತೋರಿಸಿದ್ದಾನೆ. ಅದನ್ನು ಯುವತಿಯರು ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದಾರೆ. ನಂತರ ಪೊಲೀಸರಿಗೆ ಕೊಟ್ಟು ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದರು. ನಂತರ ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ನೋಡಿ, ಇಂದು ಸಂಜೆ ವೇಳೆಗೆ ಕಾಮುಕನನ್ನು ಬಂಧನ ಮಾಡಿದ್ದಾರೆ.

ಮರ್ಮಾಂಗ ತೋರಿಸಿ ವಿಕೃತಿ ಮೆರೆಯುತ್ತಿದ್ದ ವ್ಯಕ್ತಿ ಯುವಕನಾಗಿಲ್ಲ. ಆತ 48 ವರ್ಷ ಅಂಕಲ್‌. ಅಯೂಬ್‌ ಉರ್‌ ರೆಹಮಾನ್‌. ಈತ ಕಲಾಸಿಪಾಳ್ಯದಲ್ಲಿ ಟೀ ಅಂಗಡಿ ಇಟ್ಟುಕೊಂಡಿದ್ದ. ಆಗಾಗ ತನ್ನ ಸ್ಕೂಟರ್‌ನಲ್ಲಿ ಬಂದು ಅಸಭ್ಯ ವರ್ತನೆ ಮಾಡಿ ಎಸ್ಕೇಪ್‌ ಆಗುತ್ತಿದ್ದ. ಇನ್ನು ಪೊಲೀಸರು ಬಂಧಿಸಿದಾಗ ಹೀಗೆ ಮಾಡುವುದಕ್ಕೆ ಕಾರಣವೇನೆಂದು ಕೇಳಿದಾಗ ನಾನು ಏನು ಮಾಡಿದ್ನೋ ನಂಗೇ ಗೊತ್ತಿಲ್ಲ ಎಂಬ ಉಡಾಫೆ ಉತ್ತ ನೀಡಿದ್ದಾನೆ.

ವಿವಿ ಪುರಂ ಪೊಲೀಸರು ಸದ್ಯಕ್ಕೆ ಆರೋಪಿ ಆಯೂಬ್‌ನ ವಿಚಾರಣೆ ಮಾಡುತ್ತಿದ್ದಾರೆ.

Davanagere: ಮಾಜಿ ಸಚಿವ ಬಿ.ಸಿ.ಪಾಟೀಲ್‌ ಅಳಿಯ ಆತ್ಮಹತ್ಯೆಗೆ ಶರಣು

Advertisement
Advertisement
Advertisement