Bans sale of Meat: ನಾಳೆ ಮಾಂಸ ಮಾರಾಟ ನಿಷೇಧ
Bans sale of Meat: ರಾಮ ನವಮಿಯ ಆಚರಣೆಯ ಕಾರಣದಿಂದ ಬುಧವಾರ ಬೆಂಗಳೂರಿನಲ್ಲಿ ಮಾಂಸ ಮಾರಾಟ ನಿಷೇಧ ಮಾಡಿ ಬಿಬಿಎಂಪಿ ಆದೇಶ ಹೊರಡಿಸಿದೆ. ರಾಮನವಮಿನಯ ಕಾರಣ ಮಾಂಸ ಮಾರಾಣ, ಪ್ರಾಣಿ ಹತ್ಯೆಯನ್ನು ನಿಷೇಧ ಮಾಡಲಾಗಿದ್ದು, ಈ ಕುರಿತು ಬಿಬಿಎಂಪಿಯ ಪಶುಸಂಗೋಪನಾ ಇಲಾಖೆ ಪತ್ರಿಕಾ ಪ್ರಕಟಣೆ ಮೂಲಕ ಆದೇಶ ಹೊರಡಿಸಿದೆ.
ಇದನ್ನೂ ಓದಿ: 2nd PU ವಾರ್ಷಿಕ ಪರೀಕ್ಷೆಯ ಉತ್ತರ ಪತ್ರಿಕೆ ಸ್ಕ್ಯಾನ್ಡ್ ಪ್ರತಿ ಪಡೆಯಲು ಇಂದು ಕೊನೇ ದಿನ !!
ಚೈತ್ರ ನವರಾತ್ರಿ ರಾಮ ನವಮಿಯೊಂದಿಗೆ ಕೊನೆಗೊಳ್ಳುವ ಕಾರಣ ರಾಮನವಮಿಯಂದು ಶ್ರೀರಾಮನ ವಿಶೇಷ ಪೂಜೆ ಮಾಡಲಾಗುವುದು.
ನವಮಿ ತಿಥಿ ಎಪ್ರಿಲ್ 17 ರಂದು ಮಧ್ಯಾಹ್ನ 3.15 ಕ್ಕೆ ಕೊನೆಗೊಳ್ಳುತ್ತದೆ. ಧಾರ್ಮಿಕ ನಂಬಿಕೆಯ ಅನುಸಾರ, ವಿಷ್ಣು ತನ್ನ ಏಳನೇ ಅವತಾರವಾಗಿ ರಾಮನಾಗಿ ಜನಿಸಿದ್ದು, ಅಯೋಧ್ಯೆಯ ರಾಜ ದಶರಥನ ಹಿರಿಯ ಮಗನಾಗಿ ಚೈತ್ರ ಮಾಸದ ಶುಕ್ಲ ಪಕ್ಷದ ಒಂಬತ್ತನೇ ದಿನದಂದು ಜನಿಸಿರುವುದಾಗಿ ಹೇಳಿಕೆ ಇದೆ. ಈ ಕಾರಣದಿಂದ ಪ್ರತಿ ವರ್ಷ ರಾಮನವಮಿ ಹಬ್ಬವನ್ನು ಭಗವಾನ್ ರಾಮನ ಜನ್ಮದಿನವನ್ನಾಗಿ ಆಚರಿಸಲಾಗುವುದು.
ಇದನ್ನೂ ಓದಿ: Health Tips: ಸ್ನಾಯುಗಳು ಬಲವಾಗಿರಲು ಈ ಆಹಾರಗಳು ಬೆಸ್ಟ್! : ಗಟ್ಟಿ ಮುಟ್ಟಾದ ದೇಹ ನಿಮ್ಮದಾಗಲು ಇವನ್ನು ಖಂಡಿತ ಸೇವಿಸಿ