ಮುಖಪುಟಸುದ್ದಿರಾಜಕೀಯಅಂಕಣಮನರಂಜನೆಸಿನೆಮಾ-ಕ್ರೀಡೆಲೈಫ್ ಸ್ಟೈಲ್ಕ್ರೀಡೆ
Advertisement

Ballari: ಮಂತ್ರಿಗಿರಿ ಮೇಲೆ ಕಣ್ಣು, ಬಳ್ಳಾರಿ ಸಂಸದ ಸ್ಥಾನಕ್ಕೆ ತುಕಾರಾಂ ರಾಜಿನಾಮೆ?

Ballari: ಬಳ್ಳಾರಿಯಲ್ಲಿ ಶ್ರೀರಾಮುಲು ವಿರುದ್ಧ ಜಯಭೇರಿ ಬಾರಿಸಿದ ಸಂಸದ ತುಕಾರಾಂ ಅವರು ತಮ್ಮ ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡುತ್ತಾರೆ ಎಂಬ ವಿಚಾರವೊಂದು ಸದ್ದು ಮಾಡುತ್ತಿದೆ.
08:37 AM Jun 09, 2024 IST | ಸುದರ್ಶನ್
UpdateAt: 08:37 AM Jun 09, 2024 IST
Advertisement

Ballari: ಲೋಕಸಭಾ ಚುನಾವಣೆ(Parliament Election) ಯಲ್ಲಿ ಕಾಂಗ್ರೆಸ್ ರಾಜ್ಯದಲ್ಲಿ 9 ಸ್ಥಾನಗಳನ್ನು ಗೆದ್ದುಕೊಂಡಿದೆ. ಕಳೆದು ಚುನಾವಣೆಯಲ್ಲಿ 1 ಸ್ಥಾನ ಗೆದ್ದಿದ್ದ ಕಾಂಗ್ರೆಸ್ ಇದೀಗ 9 ಸ್ಥಾನ ಗೆದ್ದು ಗೆಲುವಿನ ನಗೆ ಬೀರಿದೆ. ಆದರೆ ಈ ಬೆನ್ನಲ್ಲೇ ಬಳ್ಳಾರಿ(Ballari)ಯಲ್ಲಿ ಶ್ರೀರಾಮುಲು ವಿರುದ್ಧ ಜಯಭೇರಿ ಬಾರಿಸಿದ ಸಂಸದ ತುಕಾರಾಂ(Tukaram) ಅವರು ತಮ್ಮ ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡುತ್ತಾರೆ ಎಂಬ ವಿಚಾರವೊಂದು ಸದ್ದು ಮಾಡುತ್ತಿದೆ.

Advertisement

ಚಂದನ್‌ ಶೆಟ್ಟಿ ವಿಚ್ಛೇದಿತ ಪತ್ನಿ ನಿವೇದಿತಾಗೆ ಎಷ್ಟು ಜೀವನಾಂಶ ಕೊಡುತ್ತಾರೆ?

ಸಂಡೂರು(Sanduru) ಕ್ಷೇತ್ರದಿಂದ ಸತತ ನಾಲ್ಕು ಬಾರಿ ಶಾಸಕರಾಗಿ ಆಯ್ಕೆಯಾಗುವ ಮೂಲಕ ಸಾರ್ವಜನಿಕ ವಲಯದಲ್ಲಿ ಉತ್ತಮ ಅಭಿಪ್ರಾಯ ಮೂಡಿಸಿರುವ ತುಕಾರಾಂ ಅವರು ಲೋಕಸಭಾ ಚುನಾವಣೆಯಲ್ಲೂ ಕಾಂಗ್ರೆಸ್(Congress) ಅಭ್ಯರ್ಥಿಯಾಗಿ ಸ್ಪರ್ಧಿಸಿ ಮಾಜಿ ಸಚಿವ, ಬಿಜೆಪಿ(BJP) ನಾಯಕ ಶ್ರೀರಾಮುಲು ಅವರನ್ನು ಹೀನಾಯವಾಗಿ ಸೋಲಿಸಿದ್ದಾರೆ. ಆದರೀಗ ನೂತನ ಸಂಸದರಾಗಿ ಆಯ್ಕೆಯಾಗಿರುವ ಇ ತುಕಾರಾಂ ಸಂಡೂರು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಲೋಕಸಭೆಗೆ ಹೋಗುವ ಸಾಧ್ಯತೆ ಕಡಿಮೆ ಎಂದು ಮೂಲಗಳು ತಿಳಿಸಿವೆ.

Advertisement

ಹೌದು, ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಹಣ ದುರುಪಯೋಗದ ಆರೋಪದ ಮೇಲೆ ಸಿದ್ದರಾಮಯ್ಯ ಸಂಪುಟದಿಂದ ಬಿ ನಾಗೇಂದ್ರ(Nagendra) ಅವರು ರಾಜೀನಾಮೆ ನೀಡಿರುವ ಹಿನ್ನೆಲೆಯಲ್ಲಿ ತುಕಾರಾಂ ಅಭಿಮಾನಿಗಳು ಸಭೆ ನಡೆಸಿ ತಮ್ಮ ನಾಯಕನನ್ನು ಸಂಪುಟಕ್ಕೆ ಸೇರ್ಪಡೆ ಮಾಬೇಕೆಂದು ಒತ್ತಾಯಿಸಿದ್ದಾರೆ. ಹೀಗಾಗಿ ತುಕಾರಾಂ ಅವರು ಇದೀಗ ಬಳ್ಳಾರಿ ಜಿಲ್ಲೆಯನ್ನು ಪ್ರತಿನಿಧಿಸುವ ಸಚಿವ ಸ್ಥಾನದ ನಿರೀಕ್ಷೆಯಲ್ಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಆದರೆ ತುಕಾರಾಂ ಅವರು ಈ ವಿಚಾರವನ್ನು ತಳ್ಳಿಹಾಕಿದ್ದಾರೆ ಎನ್ನಲಾಗಿದೆ. ಇನ್ನು ರಾಜಕೀಯ ವಲಯದಲ್ಲಿ ಏನು ಬೇಕಾದರೂ ನಡೆಯಬಹುದು. ಒಂದು ವೇಳೆ ತುಕಾರಾಂ ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಿದರೆ ಉಪಚುನಾವಣೆಯಲ್ಲಿ ಸ್ಪರ್ಧಿಸಲು ಪುತ್ರಿ ಸೌಪರ್ಣಿಕಾಗೆ ಬಳ್ಳಾರಿ ಲೋಕಸಭೆ ಟಿಕೆಟ್‌ ಕೇಳುವ ಸಾಧ್ಯತೆ ಇದೆ.

Cancel NEET-UG 2024: ನೀಟ್ ಪರೀಕ್ಷೆ ಫಲಿತಾಂಶ ರದ್ದತಿಗೆ ಮಹಾರಾಷ್ಟ್ರ ಸರ್ಕಾರದಿಂದ ಬಹಿರಂಗ ಒತ್ತಾಯ, ಪ್ರಿಯಾಂಕಾ ವಾದ್ರ ಸಾಥ್ !

Advertisement
Advertisement