For the best experience, open
https://m.hosakannada.com
on your mobile browser.
Advertisement

Baba Vanga Predictions: ಪ್ರಪಂಚದ ಅಂತ್ಯ ಯಾವಾಗ? ಬಾಬಾ ವಂಗಾ ಭವಿಷ್ಯ!

Baba Vanga Prediction: ಈ ಪ್ರಪಂಚ ಯಾವಾಗ ಅಂತ್ಯವಾಗುತ್ತದೆ ಎಂಬುದನ್ನೂ ಅವರು ಹೇಳಿದ್ದರು. ಬಾಬಾ ವಂಗಾ ಭವಿಷ್ಯವಾಣಿಯ ಪ್ರಕಾರ ಪ್ರಪಂಚವು 5079ರಲ್ಲಿ ಕೊನೆಗೊಳ್ಳುತ್ತದೆ ಎಂದಿದ್ದಾರೆ.
11:47 AM May 27, 2024 IST | ಕಾವ್ಯ ವಾಣಿ
UpdateAt: 11:58 AM May 27, 2024 IST
baba vanga predictions  ಪ್ರಪಂಚದ ಅಂತ್ಯ ಯಾವಾಗ  ಬಾಬಾ ವಂಗಾ ಭವಿಷ್ಯ
Advertisement

Baba Vanga Predictions: ತಂತ್ರಜ್ಞಾನ ಎಷ್ಟೇ ಮುಂದುವರಿದಿದ್ದರೂ ಸಹ ವಿಧಿ ಭವಿಷ್ಯವನ್ನು ತಳ್ಳಿ ಹಾಕುವಂತಿಲ್ಲ ಎನ್ನುತ್ತಾರೆ ಹಿರಿಯರು. ಹೌದು, ತಮ್ಮ ಭವಿಷ್ಯವಾಣಿಯಿಂದಲೇ ಹೆಸರಾಗಿರುವ ಬಾಬಾ ವಂಗಾ ಬಗ್ಗೆ ಬಹುತೇಕ ಎಲ್ಲರು ಕೇಳಿರಬಹುದು. ಅದರಲ್ಲೂ ಬಾಬಾ ವಂಗಾ ಭವಿಷ್ಯವಾಣಿ (Baba Vanga Predictions) ನೂರಕ್ಕೆ ನೂರು ನಿಜವಾಗುತ್ತೆ ಎಂಬ ನಂಬಿಕೆಯಿದೆ. ಅಂತೆಯೇ ಈ ಜಗತ್ತು ಯಾವಾಗ ಕೊನೆಗೊಳ್ಳುತ್ತದೆ ಎಂಬುದರ ಬಗ್ಗೆ ಕೂಡ ಬಾಬಾ ವಂಗಾ ಭವಿಷ್ಯ ನುಡಿದಿದ್ದಾರೆ.

Advertisement

ಇದನ್ನೂ ಓದಿ: Mangaluru: ಮಂಗಳೂರಿನ ಕಂಕನಾಡಿಯಲ್ಲಿ ನಡು ರಸ್ತೆಯಲ್ಲೇ ನಮಾಜ್;‌ ವಿಡಿಯೋ ವೈರಲ್‌

12ನೇ ವಯಸ್ಸಿನಲ್ಲಿ ದೃಷ್ಟಿ ಕಳೆದುಕೊಂಡ ಬಾಬಾ ವಂಗಾ, 1996 ರಲ್ಲಿ ತಮ್ಮ 85ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ. ಬಾಬಾ ವಂಗಾ ತಮ್ಮ ಮರಣಕ್ಕೂ ಮೊದಲು ಸಾಕಷ್ಟು ಭವಿಷ್ಯವಾಣಿಗಳನ್ನು ನುಡಿದಿದ್ದಾರೆ. ಈ ಸಂದರ್ಭದಲ್ಲಿಯೇ ಈ ಪ್ರಪಂಚ ಯಾವಾಗ ಅಂತ್ಯವಾಗುತ್ತದೆ ಎಂಬುದನ್ನೂ ಅವರು ಹೇಳಿದ್ದರು. ಬಾಬಾ ವಂಗಾ ಭವಿಷ್ಯವಾಣಿಯ ಪ್ರಕಾರ ಪ್ರಪಂಚವು 5079ರಲ್ಲಿ ಕೊನೆಗೊಳ್ಳುತ್ತದೆ ಎಂದಿದ್ದಾರೆ.

Advertisement

ಇದನ್ನೂ ಓದಿ: Camphor for White Hair: ಕೇವಲ ಕರ್ಪೂರದ ಪುಡಿಯನ್ನು ಈ ಎಣ್ಣೆಗೆ ಬೆರೆಸಿ ಹಚ್ಚಿದ್ರೆ ಸಾಕು! ಕೂದಲು ಕಪ್ಪು ಬಣ್ಣಕ್ಕೆ ತಿರುಗುತ್ತೆ!

ಬಾಬಾ ವೆಂಗಾ ಪ್ರಕಾರ, 2024 ರ ವರ್ಷವು ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್‌ಗೆ ಅಪಾಯಕಾರಿ ಎಂದಿದ್ದಾರೆ. ಅವರ ಸ್ವಂತ ದೇಶದವರು ಅವರ ಮೇಲೆ ದಾಳಿ ಮಾಡಬಹುದು ಎಂಬುದನ್ನು ಬಾಬಾ ವಂಗಾ ಮೊದಲೇ ಹೇಳಿದ್ದರು. ಅಲ್ಲದೇ ಉಕ್ರೇನ್‌ನಲ್ಲಿನ ಚೆರ್ನೋಬಿಲ್ ದುರಂತ, ರಾಜಕುಮಾರಿ ಡಯಾನಾ ಸಾವು, ಹೀಗೆ 2024ರ ಕುರಿತಂತೆ ಬಾಬಾ ವಂಗಾ ನುಡಿದಿದ್ದ ಭವಿಷ್ಯವಾಣಿಗಳು ಕೂಡ ನಿಜವೆಂದು ಸಾಬೀತಾಗುತ್ತಿವೆ.

2024ರಲ್ಲಿ ಯುರೋಪಿನಲ್ಲಿ ಹಲವು ಭಯೋತ್ಪಾದಕ ದಾಳಿಗಳು ನಡೆಯಲಿವೆ ಎಂದು ಬಾಬಾ ವೆಂಗಾ ಹೇಳಿದ್ದರು. ಜೊತೆಗೆ ಸೈಬ‌ರ್ ದಾಳಿ ಹೆಚ್ಚಾಗಲಿದೆ ಎಂಬುದನ್ನೂ ಬಾಬಾ ವೆಂಗಾ ಹೇಳಿದ್ದರು. ಅದೇ ರೀತಿ ಪ್ರಪಂಚದಾದ್ಯಂತ ಸೈಬರ್ ದಾಳಿ ಹೆಚ್ಚಾಗುತ್ತಿದೆ. ಈ ಎಲ್ಲವುಗಳನ್ನು ಗಮನಿಸಿದಾಗ ಅವರ ಭವಿಷ್ಯವಾಣಿ ಸತ್ಯಕ್ಕೆ ಹತ್ತಿರವಾದ ಮಾತಾಗಿದೆ.

Advertisement
Advertisement
Advertisement