ಮುಖಪುಟಸುದ್ದಿರಾಜಕೀಯಅಂಕಣಮನರಂಜನೆಸಿನೆಮಾ-ಕ್ರೀಡೆಲೈಫ್ ಸ್ಟೈಲ್ಕ್ರೀಡೆ
Advertisement

Baba Ramdev: ನ್ಯಾಯಾಂಗ ನಿಂದನೆ ನೋಟಿಸ್ ಗೆ ಉತ್ತರಿಸಲು ನಿರಾಕರಿಸಿದ ಬಾಬಾ ರಾಮದೇವ್ ಗೆ ಸುಪ್ರೀಂ ಕೋರ್ಟ್ ಬುಲಾವ್

06:58 AM Mar 20, 2024 IST | ಹೊಸ ಕನ್ನಡ
UpdateAt: 06:59 AM Mar 20, 2024 IST

ಯೋಗ ಗುರು ರಾಮ್‌ದೇವ್ ಮತ್ತು ಪತಂಜಲಿ ಆಯುರ್ವೇದ ವ್ಯವಸ್ಥಾಪಕ ನಿರ್ದೇಶಕ ಆಚಾರ್ಯ ಬಾಲಕೃಷ್ಣ ಅವರಿಗೆ ಇಂದು ಸುಪ್ರೀಂ ಕೋರ್ಟ್ ಕಂಪನಿಯ ಉತ್ಪನ್ನಗಳ ಸುಳ್ಳು ಜಾಹೀರಾತು ಮತ್ತು ಅವುಗಳ ಔಷಧೀಯ ಪರಿಣಾಮಕಾರಿತ್ವ ಸಂಬಂಧಿಸಿದ ನ್ಯಾಯಾಂಗ ನಿಂದನೆ ಪ್ರಕರಣ ಸಂಬಂಧ ಖುದ್ದಾಗಿ ಹಾಜರಾಗುವಂತೆ ಸಮನ್ಸ್ ಜಾರಿ ಮಾಡಿದೆ.

Advertisement

ಇದನ್ನೂ ಓದಿ: Intresting News: ಮನೆಕೆಲಸ ಮಾಡಿದ್ದಕ್ಕಾಗಿ ಗಂಡನಿಂದ 79 ಲಕ್ಷ ಪರಿಹಾರ ಪಡೆದ ಪತ್ನಿ

ತನ್ನ ಉತ್ಪನ್ನಗಳು ಮತ್ತು ಅವುಗಳ ಔಷಧೀಯ ಪರಿಣಾಮಕಾರಿತ್ವಕ್ಕೆ ಸಂಬಂಧಿಸಿದಂತೆ ಸುಳ್ಳು ಅಂಶಗಳಿರುವ ಜಾಹೀರಾತು ನೀಡಬಾರದು ಎಂದು ಪತಂಜಲಿ ಆಯುರ್ವೇದ ಸಂಸ್ಥೆಗೆ ನೀಡಿದ್ದ ಸೂಚನೆಯನ್ನು ಉಲ್ಲಂಘಿಸಿದ್ದಕ್ಕಾಗಿ ಕಳೆದ ತಿಂಗಳು ಸುಪ್ರೀಂ ಕೋರ್ಟ್ ಸಂಸ್ಥೆಯನ್ನು ತರಾಟೆಗೆ ತೆಗೆದುಕೊಂಡಿತ್ತು.

Advertisement

ಇದನ್ನೂ ಓದಿ: Israel Airstrike : ಹಮಾಸ್ ಉನ್ನತ ಮಿಲಿಟರಿ ಕಮಾಂಡರ್ ಮಾರ್ವಾನ್ ಇಸ್ಸಾ ಹತ್ಯೆ

ಅಲ್ಲದೆ ಈ ಹಿಂದೆ ಸರ್ವೋಚ್ಚ ನ್ಯಾಯಾಲಯವು ತಮ್ಮ ವಿರುದ್ಧ ಏಕೆ ನ್ಯಾಯಾಂಗ ನಿಂದನೆ ಮೊಕದ್ದಮೆಯನ್ನು ಪ್ರಾರಂಭಿಸಬಾರದು ಎಂದು ಕೇಳಿ ಪತಂಜಲಿಗೆ ನೋಟಿಸ್ ನೀಡಿತ್ತು.

ವ್ಯಾಕ್ಸಿನೇಷನ್ ಡ್ರೈವ್ ಮತ್ತು ಆಧುನಿಕ ಔಷಧಿಗಳ ವಿರುದ್ಧ ರಾಮದೇವ್ ಅವರು ಅಪಪ್ರಚಾರ ನಡೆಸುತ್ತಿದ್ದಾರೆ ಎಂದು ಆರೋಪಿಸಿ ಭಾರತೀಯ ವೈದ್ಯಕೀಯ ಸಂಘದ (ಐಎಂಎ) ಮನವಿಯನ್ನು ಸುಪ್ರೀಂ ಕೋರ್ಟ್ ವಿಚಾರಣೆ ನಡೆಸುತ್ತಿದೆ.

Advertisement
Advertisement
Next Article