ಮುಖಪುಟಸುದ್ದಿರಾಜಕೀಯಅಂಕಣಮನರಂಜನೆಸಿನೆಮಾ-ಕ್ರೀಡೆಲೈಫ್ ಸ್ಟೈಲ್ಕ್ರೀಡೆ
Advertisement

Ayushamn Card: 5 ಲಕ್ಷದವರೆಗೆ ಉಚಿತ ಚಿಕಿತ್ಸೆ ಪಡೆಯಬಹುದಾದ ಆಯುಷ್ಮಾನ್ ಕಾರ್ಡ್ ಪಡೆಯುವುದು ಹೇಗೆ?

Ayushamn Card: ಸಾಮಾನ್ಯ ಜನರಿಗೆ ಆರ್ಥಿಕ ಸುರಕ್ಷತೆ (financial help) ನೀಡುವ ಉದ್ದೇಶದಿಂದ ಕೇಂದ್ರ ಸರ್ಕಾರವು ಅನೇಕ ಯೋಜನೆಗಳನ್ನು ಪರಿಚಯಿಸಿದೆ.
12:46 PM Jul 24, 2024 IST | ಸುದರ್ಶನ್
UpdateAt: 12:46 PM Jul 24, 2024 IST
Advertisement

Ayushamn Card: ಸಾಮಾನ್ಯ ಜನರಿಗೆ ಆರ್ಥಿಕ ಸುರಕ್ಷತೆ (financial help) ನೀಡುವ ಉದ್ದೇಶದಿಂದ ಕೇಂದ್ರ ಸರ್ಕಾರವು ಅನೇಕ ಯೋಜನೆಗಳನ್ನು ಪರಿಚಯಿಸಿದೆ. ಇದರ ಅಡಿಯಲ್ಲಿ ವಿವಿಧ ರೀತಿಯಲ್ಲಿ ಆರ್ಥಿಕ ಸಹಾಯವನ್ನು ನೀಡಲಾಗುತ್ತದೆ. ಅಂತೆಯೇ ಅವುಗಳಲ್ಲಿ ಪ್ರಮುಖವಾದುದೆಂದರೆ ಆಯುಷ್ಮಾನ್ ಭಾರತ್‌ (Ayushamn Card) ಯೋಜನೆ.

Advertisement

ಏನಿದು ಆಯುಷ್ಮಾನ್ ಭಾರತ್ ಯೋಜನೆ?
ಆಯುಷ್ಮಾನ್ ಭಾರತ್ ಯೋಜನೆಯು, ಆರೋಗ್ಯ ಮತ್ತು ಸ್ವಾಸ್ಥ್ಯ ಕೇಂದ್ರ ಮತ್ತು ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆ ಎಂಬ ಎರಡು ಪರಸ್ಪರ ಸಂಬಂಧಿತ ಘಟಕಗಳನ್ನು ಒಳಗೊಂಡಿದೆ. ಆರೈಕೆಗಾಗಿ ಪ್ರತಿ ಕುಟುಂಬಕ್ಕೆ ವರ್ಷಕ್ಕೆ ₹5 ಲಕ್ಷದವರೆಗೆ ರಕ್ಷಣೆ ನೀಡುವುದು ಈ ಯೋಜನೆಯ ಉದ್ದೇಶವಾಗಿದೆ. ಈ ಯೋಜನೆಯಡಿ ಯಾವುದೇ ಬಡವರು ದೇಶದ ಯಾವುದೇ ಭಾಗದಲ್ಲಿ ಯೋಜನೆಯ ಲಾಭ ಪಡೆಯಬಹುದು ಮತ್ತು ಈ ಯೋಜನೆಯಡಿ ಒಳಗೊಂಡಿರುವ ಫಲಾನುಭವಿಗೆ ಭಾರತದಾದ್ಯಂತ ಖಾಸಗಿ / ಸಾರ್ವಜನಿಕ ಆಸ್ಪತ್ರೆಗಳಿಂದ ಆರೋಗ್ಯ ಸೌಲಭ್ಯ ಒದಗಿಸಲಾಗುತ್ತದೆ.

ಯೋಜನೆಯ ಸೌಲಭ್ಯ ಪಡೆಯುವುದೇಗೆ?:
ಪ್ರಾಥಮಿಕ, ದ್ವಿತೀಯ ಕ್ಲಿಷ್ಟಕರ ಚಿಕಿತ್ಸೆಗಳು ಮತ್ತು ತೃತೀಯ ಹಂತದ ಕಾಯಿಲೆಗಳಿಗೆ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಲಭ್ಯವಿದ್ದರೆ ಮಾತ್ರ ಅಲ್ಲಿಯೇ ನೀಡಲಾಗುತ್ತದೆ. ಇಲ್ಲದಿದ್ದರೆ ರೆಫರಲ್ ನೀಡಲಾಗುತ್ತದೆ. ರೆಫರಲ್ ಪಡೆದುಕೊಂಡ ರೋಗಿ ತಾನು ಇಚ್ಛಿಸುವ ಯಾವುದೇ ನೋಂದಾಯಿತ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಬಹುದು. ಹೃದಯರೋಗ, ಕ್ಯಾನ್ಸರ್, ಮೂತ್ರಪಿಂಡದ ಕಾಯಿಲೆ, ನವಜಾತ ಶಿಶುಗಳ ಕಾಯಿಲೆ ಸೇರಿದಂತೆ ತೃತೀಯ ಹಂತದ ಸುಮಾರು 900 ಚಿಕಿತ್ಸೆಗಳು ಹಾಗೂ ರಸ್ತೆ ಅಪಘಾತ ಸೇರಿದಂತೆ 169 ತುರ್ತು ಚಿಕಿತ್ಸೆಗಳಿಗೆ ಯಾವುದೇ ರೆಫರಲ್ ಇಲ್ಲದೆ ನೇರವಾಗಿ ನೋಂದಾಯಿತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಬಹುದು.

Advertisement

ಆಯುಷ್ಮಾನ್ ಕಾರ್ಡ್ ಪಡೆಯುವುದು ಹೇಗೆ?
ಆಯುಷ್ಮಾನ್ ಕಾರ್ಡ್ ಅನ್ನು ಆಫ್‌ಲೈನ್‌ನಲ್ಲಿ ಪಡೆಯಲು ಬಯಸಿದರೆ ಇದಕ್ಕಾಗಿ ನಿಮ್ಮ ಹತ್ತಿರದ ಸಿಎಸ್‌ಸಿ ಕೇಂದ್ರಕ್ಕೆ ಹೋಗಬೇಕು. ಇಲ್ಲಿ ಸಂಬಂಧಪಟ್ಟ ಅಧಿಕಾರಿಯನ್ನು ಭೇಟಿಯಾಗಿ ಅದನ್ನು ಮಾಡಿಕೊಳ್ಳಬಹುದು.

ಆನ್ಲೈನ್ ಮೂಲಕ ಪಡೆಯುವುದು ಹೇಗೆ:
* ಹಂತ 1: ಗೂಗಲ್ ಪ್ಲೇ ಸ್ಟೋರ್ ಅಥವಾ beneficiary.nha.gov.in ನಿಂದ 'ಆಯುಷ್ಮಾನ್' ಅಪ್ಲಿಕೇಶನ್ ಅನ್ನು ಡೌನ್ಫೋಡ್ ಮಾಡಿ, ಅಥವಾ ಮೇಲಿನ ಚಿತ್ರದಲ್ಲಿ ನೀಡಲಾದ ಕ್ಯೂಆರ್ ಕೋಡ್ ಅನ್ನು ಸ್ಕ್ಯಾನ್ ಮಾಡಿ.
* ಹಂತ 2: ನಿಮ್ಮ ಮೊಬೈಲ್ ಸಂಖ್ಯೆಯನ್ನು ನಮೂದಿಸಿ ಮತ್ತು ಬಳಕೆದಾರರ ಲಾಗಿನ್ ರಚಿಸಲು ಫೋನ್ನಲ್ಲಿ ಸ್ವೀಕರಿಸಿದ ಒಟಿಪಿಯನ್ನು ಭರ್ತಿ ಮಾಡಿ.
* ಹಂತ 3: ನಿಮ್ಮ ಹೆಸರು, ಪಡಿತರ ಚೀಟಿ ಅಥವಾ ಆಧಾ‌ರ್
ಸಂಖ್ಯೆಯ ಮೂಲಕ ನಿಮ್ಮ ಅರ್ಹತೆಯನ್ನು ಪರಿಶೀಲಿಸಿ.
* ಹಂತ 4: ಅರ್ಹರಾಗಿದ್ದರೆ, ಆಧಾರ್ ಇ-ಕೆವೈಸಿ (ಉದಾ. ಫೇಸ್ ಆಥ್, ಮೊಬೈಲ್‌ ಒಟಿಪಿ) ಮೂಲಕ ನಿಮ್ಮ ಮತ್ತು ನಿಮ್ಮ ಕುಟುಂಬ ಸದಸ್ಯರ ವಿವರಗಳನ್ನು ಪರಿಶೀಲಿಸಿ.
* ಹಂತ 5: ಅಗತ್ಯವಿರುವ ಎಲ್ಲಾ ವಿವರಗಳನ್ನು ಭರ್ತಿ ಮಾಡಿದ ನಂತರ, ನಿಮ್ಮ ಮೊಬೈಲಿಂದ ನಿಮ್ಮ ಫೋಟೋವನ್ನು ತೆಗೆದುಕೊಂಡು ಅದನ್ನು ಅಪ್ಲೋಡ್ ಮಾಡಿ. ಪರಿಶೀಲನೆ ಪ್ರಕ್ರಿಯೆ ಪೂರ್ಣಗೊಂಡ ನಂತರ, ನೀವು ನಿಮ್ಮ ಆಯುಷ್ಮಾನ್ ಕಾರ್ಡ್ ಅನ್ನು ಡೌನ್ಫೋಡ್ ಮಾಡಬಹುದು.

ಯಾರೆಲ್ಲಾ ಪಡೆಯಬಹುದು?
ಕುಟುಂಬದಲ್ಲಿ ಅಂಗವಿಕಲ ವ್ಯಕ್ತಿಯನ್ನು ಹೊಂದಿರುವವರು, ಪರಿಶಿಷ್ಟ ಜಾತಿ ಅಥವಾ ಪಂಗಡದಿಂದ ಬಂದವರು, ಅಸಂಘಟಿತ ವಲಯದಲ್ಲಿ ಕೆಲಸ ಮಾಡುವವರು, ಗ್ರಾಮೀಣ ಪ್ರದೇಶಗಳಲ್ಲಿ ವಾಸಿಸುವ ಜನರು, ದಿನಗೂಲಿ ಮಾಡುವವರು, ಬಡತನ ರೇಖೆಗಿಂತ ಕೆಳಗಿರುವವರು, ನಿರ್ಗತಿಕ ಅಥವಾ ಬುಡಕಟ್ಟು ಜನರು ಆಯುಷ್ಮಾನ್ ಕಾರ್ಡ್ ಅನ್ನು ಪಡೆಯಬಹುದು.

Advertisement
Advertisement