ಮುಖಪುಟಸುದ್ದಿರಾಜಕೀಯಅಂಕಣಮನರಂಜನೆಸಿನೆಮಾ-ಕ್ರೀಡೆಲೈಫ್ ಸ್ಟೈಲ್ಕ್ರೀಡೆ
Advertisement

Rama Mandir: ಸೋರುತಿಹುದು ಅಯೋಧ್ಯೆಯ ರಾಮ ಮಂದಿರ, ಮೊದಲ ಮಳೆಗೆ ಗರ್ಭಗುಡಿಯಲ್ಲಿ ತುಂಬಿ ತುಳುಕುತಿಹುದು ಮಾಳಿಗೆಯ ನೀರು !!

Rama Mandir: ಸುಮಾರು ಒಂದು ಸಾವಿರ ಕೋಟಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಅಯೋಧ್ಯೆಯ ರಾಮಮಂದಿರ(Rama Mandir) ಅವ್ಯವಸ್ಥೆಯ ಕೂಪವಾಗುತ್ತಿದೆ.
10:53 AM Jun 25, 2024 IST | ಸುದರ್ಶನ್
UpdateAt: 10:53 AM Jun 25, 2024 IST
Advertisement

Rama Mandir: ಸುಮಾರು ಒಂದು ಸಾವಿರ ಕೋಟಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಅಯೋಧ್ಯೆಯ ರಾಮಮಂದಿರ(Rama Mandir) ಅವ್ಯವಸ್ಥೆಯ ಕೂಪವಾಗುತ್ತಿದೆ. ಅಯೋಧ್ಯೆಯಲ್ಲಿ ಇದೀಗ ಮೊದಲ ಮಳೆ ಶುರುವಾಗಿದ್ದು ಇಡೀ ಮಂದಿರ ಸೋರುತ್ತಿದೆ. ಗರ್ಭಗುಡಿಯಲ್ಲಿ ಶ್ರೀರಾಮನಿ(Shreerama)ರುವೆಡೆಯಲ್ಲೂ ನೀರು ಸೋತಿದೆ. ಆದರೆ ನೀರು ಹೇಗೆ ಸೋರುತ್ತಿದೆ ಎಂಬುದೇ ಯಾರಿಗೂ ಗೊತ್ತಾಗುತ್ತಿಲ್ಲ. ಗರ್ಭಗುಡಿಯಲ್ಲಿ ನಿಂತು ಪೂಜೆ ಸಲ್ಲಿಸಲೂ ಆಗುತ್ತಿಲ್ಲ. ಎಲ್ಲಾ ಅವ್ಯವಸ್ಥೆಯಾಗಿದೆ ಎಂದು ಅರ್ಚಕರು ತಿಳಿಸಿದ್ದಾರೆ.

Advertisement

ಹೌದು, ಆರು ತಿಂಗಳ ಹಿಂದೆ 22ನೇ ಜನವರಿ 2024ರಂದು ರಾಮಮಂದಿರ ಉದ್ಘಾಟನೆ ಮಾಡಲಾಗಿತ್ತು. ಈ ಮೂಲಕ ಕೋಟ್ಯಾಂತರ ಹಿಂದೂಗಳ ಕನಸು ನನಸಾಗಿತ್ತು. ಆದರೀಗ ಅವಸರದಲ್ಲಿ ಆದ ಉದ್ಘಾಟನೆ ಅವ್ಯವಸ್ಥೆಗಳಿಗೆ ಕಾರಣವಾಗಿದೆ. ಇದೀಗ ಉತ್ತರ ಪ್ರದೇಶದ ಭಾಗದಲ್ಲಿ ಮಳೆ (Rain) ಆರಂಭವಾಗಿದ್ದು, ರಾಮಮಂದಿರದ ಮೇಲ್ಛಾವಣೆಯಿಂದ ನೀರು ಸೋರಿಕೆಯಾಗುತ್ತಿದೆ. ಗರ್ಭಗುಡಿಯಲ್ಲಿಯೂ ನೀರು ಸೋರಿಕೆಯಾಗಿದೆ ಎಂದು ಸುದ್ದಿಸಂಸ್ಥೆ ವರದಿ ಮಾಡಿದೆ. ಮೊದಲ ಮಳೆಯ ಸಿಂಚನಕ್ಕೆ ಮಂದಿರ ಸೋರುತ್ತಿರುವುದು ಅಚ್ಚರಿ ಎನಿಸಿದೆ.

ಈ ಬಗ್ಗೆ ಪ್ರತಿಕ್ರಿಯಿಸಿದ ಅರ್ಚಕರು ಬಾಲರಾಮನನ್ನು(Bala Rama) ಪ್ರತಿಷ್ಠಾಪನೆ ಮಾಡಲಾಗಿರುವ ಗರ್ಭಗುಡಿಯಲ್ಲಿ ಮಳೆ ನೀರು ಸೋರಿಕೆಯಾಗಿದೆ. ಇದರಿಂದ ಶ್ರೀರಾಮನನ್ನು ಪೂಜಿಸಲೂ ಕಿರಿಕಿರಿಯಾಗುತ್ತದೆ. ಜುಲೈ 2025ರೊಳಗೆ ರಾಮಮಂದಿರದ ಸಂಪೂರ್ಣ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದು ಹೇಳಲಾಗುತ್ತಿದೆ. ಆದ್ರೆ ಅದು ಅಸಾಧ್ಯ ಎಂಬುವುದು ನನ್ನ ಅನಿಸಿಕೆಯಾಗಿದೆ. ಈಗಾಗಲೇ ಬಂದ ಮೊದಲ ಮಳೆ ಗೆ ರಾಮಲಲ್ಲಾನ ಜಾಗಕ್ಕೆ ನೀರು ಬಂದಿದೆ. ಹೇಗೆ ಸೋರಿಕೆ ಆಯ್ತು? ಮಳೆನೀರು ಒಳಗೆ ಬರಲು ಕಾರಣ ಏನು ಎಂಬ ಪ್ರಶ್ನೆಗೆ ಸಂಬಂಧಿಸಿದವರು ಉತ್ತರ ನೀಡಬೇಕು. ಹಾಗೆ ಕಾಮಗಾರಿಯ ಕುರಿತು ಸಮಗ್ರ ತನಿಖೆ ನಡೆಸಬೇಕು ಎಂದು ಅರ್ಚಕರು ಆಗ್ರಹಿಸಿದ್ದಾರೆ.

Advertisement

ಶ್ರೀರಾಮನ ಅಭಿಷೇಕವನ್ನೇ ಮರೆತ ಇಂಜಿನಿಯರ್ ಗಳು :
ಶ್ರೀರಾಮನಿಗೆ ಸ್ನಾನ, ಅಭಿಷೇಕವನ್ನು ಮಾಡಿದ ನೀರು ಹೊರ ಹೋಗಲು ಯಾವುದೇ ಕಾಲುವೆ, ಚರಂಡಿಯ ವ್ಯವಸ್ಥೆಯನ್ನೇ ಮಾಡಿಲ್ಲ. ಹೀಗಾಗಿ ನೀರೆಲ್ಲಾ ಒಳಗೇ ನಿಂತುಬಿಡತ್ತದೆ. ಒಟ್ಟಿನಲ್ಲಿ ಕೆಲಸ ಕಾರ್ಯಗಳ ನಡುವೆ ದೇವಾಲಯಯದ ಇಂಜಿನಿಯರ್ ಗಳು ಶ್ರೀರಾಮನ ಸ್ನಾನದ ವಿಷಯವನ್ನೇ ಮರೆತಂತಿದೆ.

ನಿತ್ಯದ ಪೂಜಾ ಕೈಂಕರ್ಯಗಳಿಗೆ ಬಳಸುವ ನೀರು ಹರಿದು ಹೋಗದೇ ಇರುವುದು ಅರ್ಚಕರು ಹಾಗೂ ದೇವಸ್ಥಾನದ ಆಡಳಿತ ಮಂಡಳಿಗೆ ಆತಂಕ ತಂದಿದೆ ಎಂದು ಅರ್ಚಕರೊಬ್ಬರು ತಿಳಿಸಿದ್ದಾರೆ. ಈ ಬಗ್ಗೆ ಮಾತನಾಡಿದ ಅವರು ಅಲಂಕಾರ ಸಮಾರಂಭದ ಮೊದಲು ರಾಮ್ ಲಲ್ಲಾನಿಗೆ ಪ್ರತಿದಿನ ಸ್ನಾನ ಮಾಡಿಸಲಾಗುತ್ತದೆ. ಈ ಆಚರಣೆಯಲ್ಲಿ ಮೊದಲು ಸರಯು ನದಿಯ ನೀರಿನಿಂದ ಅಭಿಷೇಕ ಮಾಡಲಾಗುತ್ತದೆ. ಬಳಿಕ ಹಾಲು, ಮೊಸರು, ತುಪ್ಪ ಮತ್ತು ಜೇನುತುಪ್ಪವನ್ನು ಒಳಗೊಂಡಿರುವ ಮಧು ಪರ್ಕ್ ಎಂದು ಕರೆಯಲ್ಪಡುವ ಮಿಶ್ರಣವನ್ನು ಹಾಕಲಾಗುತ್ತದೆ.

ಇದರ ಅನಂತರ ರಾಮ್ ಲಲ್ಲಾನನ್ನು ಸರಯುವಿನ ನೀರಿನಿಂದ ಮತ್ತೆ ಸ್ನಾನ ಮಾಡಿಸಲಾಗುತ್ತದೆ. ಈ ಆಚರಣೆಗಳ ಅನಂತರ ನೆಲದ ಮೇಲೆ ಸಂಗ್ರಹವಾಗುವ ನೀರನ್ನು ಹರಿಸುವುದಕ್ಕೆ ಅವಕಾಶವಿಲ್ಲ ಎಂದು ತಿಳಿಸಿದರು. ಪ್ರಸ್ತುತ, ನೀರನ್ನು ಹಿಡಿಯಲು ದೊಡ್ಡ ಪ್ಲೇಟ್ ಅನ್ನು ಇರಿಸಲಾಗುತ್ತದೆ. ಅನಂತರ ಅದನ್ನು ಸಸ್ಯಗಳಿಗೆ ಬಿಡಲಾಗುತ್ತದೆ. ಉಳಿದ ನೀರನ್ನು ಕೈಯಾರೆ ಒರೆಸಿ ಒಣಗಿಸಲಾಗುತ್ತದೆಯಂತೆ.

Neet Exam: ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣ, ಸಿಬಿಐ ಕಾರ್ಯಾಚರಣೆ! ಪಾಟ್ನಾ ಎಸ್‌ಎಸ್‌ಪಿಗೆ ಸಮನ್ಸ್

Advertisement
Advertisement