For the best experience, open
https://m.hosakannada.com
on your mobile browser.
Advertisement

Pension Scheme: ಈ ಯೋಜನೆಯಲ್ಲಿ ಪ್ರತಿ ತಿಂಗಳು ಜಸ್ಟ್ 210 ರೂ. ಠೇವಣಿ ಮಾಡಿ, ವೃದ್ದಾಪ್ಯದಲ್ಲಿ ಪ್ರತಿ ತಿಂಗಳು 5,000 ರೂ. ಪಿಂಚಣಿ ಪಡೆಯಿರಿ!!

10:16 AM Jan 04, 2024 IST | ಅಶ್ವಿನಿ ಹೆಬ್ಬಾರ್
UpdateAt: 10:24 AM Jan 04, 2024 IST
pension scheme  ಈ ಯೋಜನೆಯಲ್ಲಿ ಪ್ರತಿ ತಿಂಗಳು ಜಸ್ಟ್  210 ರೂ  ಠೇವಣಿ ಮಾಡಿ  ವೃದ್ದಾಪ್ಯದಲ್ಲಿ  ಪ್ರತಿ ತಿಂಗಳು  5 000 ರೂ  ಪಿಂಚಣಿ ಪಡೆಯಿರಿ
Advertisement

Atal Pension Yojana: ಪ್ರಧಾನ ಮಂತ್ರಿ ಅಟಲ್ ಪೆನ್ಷನ್ ಯೋಜನಾ (APY- Atal Pension Yojana) ಸರ್ಕಾರದಿಂದ ನಡೆಸಲಾಗುವ ವೃದ್ಧಾಪ್ಯ ಪಿಂಚಣಿ ಯೋಜನೆಗಳಲ್ಲಿ ಒಂದಾಗಿದೆ. ಅಟಲ್ ಪೆನ್ಷನ್ ಯೋಜನೆಯ ಸದಸ್ಯರು 60 ವರ್ಷದ ಬಳಿಕ ಪ್ರತೀ ತಿಂಗಳು 1,000 ರೂನಿಂದ 5,000 ರೂವರೆಗೆ ಕನಿಷ್ಠ ಖಾತ್ರಿ ಪಿಂಚಣಿ(Pension)ಪಡೆಯಬಹುದು.18 ವರ್ಷದಿಂದ 40 ವರ್ಷದ ವಯೋಮಾನದ ಯಾವುದೇ ಭಾರತೀಯರು ಅಟಲ್ ಪೆನ್ಷನ್ ಯೋಜನೆಯಲ್ಲಿ ನೊಂದಾಯಿಸಿಕೊಳ್ಳಬಹುದು.

Advertisement

ಅಟಲ್ ಪಿಂಚಣಿ ಯೋಜನೆಯಲ್ಲಿ ಹೂಡಿಕೆ ಮಾಡುವುದು ವೃದ್ಧಾಪ್ಯದಲ್ಲಿ ಪಿಂಚಣಿ ಪಡೆಯಲು ಹೆಚ್ಚು ಅನುಕೂಲಕರವಾಗಿದೆ. ಈ ಯೋಜನೆಯಲ್ಲಿ ಹೂಡಿಕೆ ಮಾಡುವ ಮೂಲಕ 1000 ರಿಂದ 5000 ರೂ.ವರೆಗೆ ಮಾಸಿಕ ಪಿಂಚಣಿ ಪಡೆಯಬಹುದು. ಪ್ರತಿ ತಿಂಗಳು ಸಣ್ಣ ಮೊತ್ತವನ್ನು ಇದರಲ್ಲಿ ಠೇವಣಿ ಮಾಡಿದರೆ ಸಾಕು!!ಪ್ರತಿ ತಿಂಗಳು 5,000 ರೂಪಾಯಿಗಳ ಪಿಂಚಣಿ ಪಡೆಯಬೇಕೆಂದರೆ APY ಯೋಜನೆಯಲ್ಲಿ ಪ್ರತಿ ತಿಂಗಳು 210 ರೂಪಾಯಿಗಳನ್ನು ಹೂಡಿಕೆ ಮಾಡಬೇಕಾಗುತ್ತದೆ.

ಇದನ್ನು ಓದಿ: LPG gas cylinder: LPG ಬಳಕೆದಾರರೇ ಗಮನಿಸಿ, E-KYC ಬಗ್ಗೆ ಬಿಗ್ ಅಪ್ಡೇಟ್ ಇಲ್ಲಿದೆ ನೋಡಿ!!

Advertisement

ಸರ್ಕಾರ ಕಳೆದ ತಿಂಗಳು ಯೋಜನೆಯ ನಿಯಮಗಳನ್ನು ಬದಲಾಯಿಸಿದ್ದು, ಸರ್ಕಾರದ ಹೊಸ ನಿಯಮದನುಸಾರ,ಆದಾಯ ತೆರಿಗೆ ಪಾವತಿದಾರರು ಈ ಯೋಜನೆಗೆ ಸೇರ್ಪಡೆಯಾಗಲು ಸಾಧ್ಯವಿಲ್ಲ. ಅಕ್ಟೋಬರ್ 1, 2022 ರಿಂದ ಈ ಬದಲಾವಣೆಯನ್ನು ಜಾರಿಗೆ ತರಲಾಗಿದೆ. ಅಟಲ್ ಪಿಂಚಣಿ ಯೋಜನೆಯಲ್ಲಿ ಹೂಡಿಕೆದಾರರಿಗೆ ಆದಾಯ ತೆರಿಗೆಯಿಂದ ವಿನಾಯಿತಿ ಸಿಗಲಿದೆ. ಈ ಯೋಜನೆಯಡಿ ಖಾತೆಯನ್ನು ತೆರೆಯಲು ಅರ್ಹತೆಯನ್ನು ಗಮನಿಸಿದರೆ, ಯೋಜನೆಗೆ ಸೇರಲು ಬಯಸುವವರು ಭಾರತದ ಪ್ರಜೆಯಾಗಿರಬೇಕಾಗಿದ್ದು, ಅರ್ಜಿದಾರರ ವಯಸ್ಸು 18-40 ರ ನಡುವಿನವರಾಗಿರಬೇಕು. ಆಧಾರ್ ಕಾರ್ಡ್‌ನೊಂದಿಗೆ ಲಿಂಕ್ ಮಾಡಿದ ಬ್ಯಾಂಕ್ ಖಾತೆಯನ್ನು ಹೊಂದಿರಬೇಕಾಗಿದ್ದು, ಅರ್ಜಿದಾರರು ಮೊಬೈಲ್ ಸಂಖ್ಯೆಯನ್ನು ಹೊಂದಿರಬೇಕು. ಇದರ ಜೊತೆಗೆ ಈ ಮೊದಲೇ, ಅಟಲ್ ಪಿಂಚಣಿಯ ಫಲಾನುಭವಿಯಾಗಿರಬಾರದು.

Advertisement
Advertisement
Advertisement