Vastu Tips For Money: ದುಡ್ಡಿನ ವಿಷ್ಯದಲ್ಲಿ ಇದೊಂದು ನಿಯಮ ಪಾಲಿಸಿ ಸಾಕು - ಆದಷ್ಟು ಬೇಗ ನಿಮ್ಮನ್ನು ಕೋಟ್ಯಾಧೀಶ್ವರರನ್ನಾಗಿ ಮಾಡುತ್ತೆ !!
Vastu Tips For Money: ಬೇಕಾದ ರೀತಿಯಲ್ಲಿ ಬದುಕಲು ಜೀವನಕ್ಕೆ ಹಣ, ಆಸ್ತಿ, ಒಂದು ಹಂತದಲ್ಲಿ ಬಹಳ ಮುಖ್ಯ. ಆದರೆ ಜೀವನದಲ್ಲಿ ಸಾಕಷ್ಟು ಶ್ರಮ ಪಟ್ಟರೂ ಕೂಡ ಕೆಲವು ಮನೆಯಲ್ಲಿ ಆರ್ಥಿಕವಾಗಿ ಸಮಸ್ಯೆ ಹುಟ್ಟಿಕೊಳ್ಳುತ್ತಲೇ ಇರುತ್ತದೆ. ಇದಕ್ಕೆ ಕಾರಣ ಎಂದರೆ ಮನೆಯಲ್ಲಿನ ವಾಸ್ತು ಸಮಸ್ಯೆ. ಹೌದು, ವಾಸ್ತು ಶಾಸ್ತ್ರದ ಪ್ರಕಾರ (Vastu Tips For Money) , ಹಣವನ್ನು ಸರಿಯಾದ ದಿಕ್ಕು ಹಾಗೂ ಸರಿಯಾದ ಜಾಗದಲ್ಲಿ ಇಡದೆ ಹೋದಲ್ಲಿ, ಅದು ಹಣದ ನಷ್ಟ ಮತ್ತು ಅನಗತ್ಯ ವೆಚ್ಚಗಳಿಗೆ ಕಾರಣವಾಗುತ್ತದೆ ಎನ್ನಲಾಗುತ್ತದೆ. ಸಾಮಾನ್ಯವಾಗಿ ವಾಸ್ತು ಶಾಸ್ತ್ರದಲ್ಲಿ, ಎಲ್ಲವನ್ನೂ ಒಂದು ನಿರ್ದಿಷ್ಟ ಜಾಗದಲ್ಲಿ ಇರಿಸಲು ಸಲಹೆ ನೀಡಲಾಗುತ್ತದೆ. ಆದ್ದರಿಂದ ವಾಸ್ತು ಪ್ರಕಾರ ಹಣದ ಬೀರು ಅಥವಾ ತಿಜೋರಿಯನ್ನು ಯಾವ ದಿಕ್ಕಿನಲ್ಲಿ ಇಡಬಾರದು ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.
ವಾಸ್ತು ಪ್ರಕಾರ, ಮರೆತೂ ಕೂಡ ಈ ದಿಕ್ಕಿನಲ್ಲಿ ತಿಜೋರಿ ಇಡಬೇಡಿ
ಮನೆಯಲ್ಲಿನ ಕೆಲ ಜಾಗಗಳಲ್ಲಿ ಎಂದಿಗೂ ಕೂಡ ತಿಜೋರಿಯನ್ನು ಇರಿಸಬಾರರು. ಅದುವೇ ಆಗ್ನೇಯ ದಿಕ್ಕು ಇದನ್ನು ಮನೆಯ ಅಗ್ನಿ ಕೋನ ಎಂದು ಕರೆಯಲಾಗುತ್ತದೆ. ಈ ಸ್ಥಳದಲ್ಲಿ ಹಣವನ್ನು ಇಡುವುದರಿಂದ ಅನಗತ್ಯ ಖರ್ಚು ಹೆಚ್ಚಾಗುತ್ತದೆ. ಜೀವನದಲ್ಲಿನ ಸಂತೋಷ ಹಾಳಾಗುತ್ತದೆ.
ಇನ್ನು ಮನೆಯ ಪಶ್ಚಿಮ ದಿಕ್ಕನ್ನು ಸಹ ಹಣದ ವಿಷಯದಲ್ಲಿ ಅಶುಭವೆಂದು ಪರಿಗಣಿಸಲಾಗುತ್ತದೆ. ಯಾರಾದರೂ ಮನೆಯ ಪಶ್ಚಿಮ ದಿಕ್ಕಿನಲ್ಲಿ ಹಣ ಅಥವಾ ಆಭರಣಗಳನ್ನು ಇಟ್ಟರೆ, ಅದು ಧನಹಾನಿಗೆ ಕಾರಣವಾಗುತ್ತದೆ ಎಂಬುದು ನಂಬಿಕೆ. ಅಲ್ಲದೆ, ಕುಟುಂಬ ಸದಸ್ಯರು ಕೂಡ ಹಣ ಸಂಪಾದಿಸಲು ಕಷ್ಟಪಡಬೇಕಾಗುತ್ತದೆ. ಅಲ್ಲದೆ, ವ್ಯಕ್ತಿಯ ಮೇಲಿನ ಸಾಲದ ಹೊರೆ ಹೆಚ್ಚಾಗುತ್ತದೆ
ಮುಖ್ಯವಾಗಿ ಈ ದಿಕ್ಕಿನಲ್ಲಿ ತಿಜೋರಿ ಇರಿಸಿ. ಹೌದು, ವಾಸ್ತು ಶಾಸ್ತ್ರದ ಪ್ರಕಾರ, ಮನೆಯ ಉತ್ತರ ದಿಕ್ಕನ್ನು ತಿಜೋರಿ, ಹಣ ಹಾಗೂ ಆಭರಣಗಳನ್ನು ಇಡಲು ಉತ್ತಮವೆಂದು ಪರಿಗಣಿಸಲಾಗುತ್ತದೆ. ಕುಬೇರ ದೇವ ಈ ದಿಕ್ಕಿನಲ್ಲಿ ನೆಲೆಸಿದ್ದಾರೆ. ಅಲ್ಲದೆ, ಈ ದಿಕ್ಕಿನಲ್ಲಿ ಹಣವನ್ನು ಇಡುವುದರಿಂದ ಅದು ಹೆಚ್ಚಾಗುತಲೇ ಇರುತ್ತದೆ. ಇದಲ್ಲದೆ ಮನೆಯಲ್ಲಿನ ಸಮೃದ್ಧಿಗೂ ಕೂಡ ಇದು ಕಾರಣವಾಗುತ್ತದೆ ಎನ್ನಲಾಗಿದೆ.
ಇದನ್ನೂ ಓದಿ: ರಾಜ್ಯದ ಎಲ್ಲಾ ಶಾಲಾ ಶಿಕ್ಷಕರಿಗೆ ಸಿಹಿ ಸುದ್ದಿ- ಶಿಕ್ಷಣ ಸಚಿವರಿಂದ ಹೊಸ ಘೋಷಣೆ !!