ಮುಖಪುಟಸುದ್ದಿರಾಜಕೀಯಅಂಕಣಮನರಂಜನೆಸಿನೆಮಾ-ಕ್ರೀಡೆಲೈಫ್ ಸ್ಟೈಲ್ಕ್ರೀಡೆ
Advertisement

Vastu Tips For Prosperity: ಮನೆಯಲ್ಲಿರೋ ಈ ವಸ್ತುಗಳನ್ನು ಈಗಲೇ ತೆಗೆದುಹಾಕಿ- ಇಲ್ಲವಾದರೆ ವಾಸ್ತು ದೋಷ ಎದುರಿಸಬೇಕಾದೀತು ಹುಷಾರ್!!

11:57 AM Dec 05, 2023 IST | ಅಶ್ವಿನಿ ಹೆಬ್ಬಾರ್
UpdateAt: 11:57 AM Dec 05, 2023 IST
Advertisement

Vastu Tips For Prosperity: ಹಗಲಿರುಳು ದುಡಿದರೂ ಕೈಯಲ್ಲಿ ದುಡ್ಡೇ ಉಳಿಯಲ್ಲ. ಇದರ ನಡುವೆ ತಲೆ ಚಿಟ್ಟು ಹಿಡಿಸುವಷ್ಟು ಕಷ್ಟ ಕಾರ್ಪಣ್ಯಗಳು, ಹಣಕಾಸಿನ ಸಮಸ್ಯೆಗಳು, ವೈವಾಹಿಕ ಜೀವನದಲ್ಲಿ ಮುನಿಸು ಹೀಗೆ ನಾನಾ ಸಮಸ್ಯೆಗಳು ಬೆನ್ನು ಬಿಡದ ಬೇತಾಳದಂತೆ ನಿಮ್ಮನ್ನು ಕೂಡ ಕಾಡುತ್ತಿದೆಯೇ ?ಹಾಗಿದ್ದರೆ ಮನೆಯಲ್ಲಿ ಕೆಲ ಸರಳ ವಾಸ್ತು ಶಾಸ್ತ್ರದ(Vastu Tips For Prosperity) ಸಲಹೆಗಳನ್ನು ಅನುಸರಿಸಿ ಪರಿಹಾರ ಕಂಡುಕೊಳ್ಳಬಹುದು.

Advertisement

ಮನೆಯಲ್ಲಿ ಎಲ್ಲಾ ಕೋಣೆಗಳು( Rooms)ವಾಸ್ತು ಶಾಸ್ತ್ರದ( Vastu ) ಪ್ರಕಾರವಾಗಿ ನಿರ್ಮಿಸಿದರೆ ಮನೆಯಲ್ಲಿ ಸಕಾರಾತ್ಮಕ ಶಕ್ತಿ (Positivity) ವೃದ್ಧಿಯಾಗಿ ಕುಟುಂಬದಲ್ಲಿ ಶಾಂತಿ ನೆಮ್ಮದಿ(Peace Of Mind) ನೆಲೆಸುತ್ತದೆ ಎಂಬ ನಂಬಿಕೆ ಹೆಚ್ಚಿನವರಿಗೆ ಇದೆ.ವಾಸ್ತುವಿಗೆ (Vastu Tips For Prosperity)ಸಂಬಂಧಿಸಿದ ಸಣ್ಣ ಸಣ್ಣ ತಪ್ಪುಗಳಿಂದ ಮನೆಯಲ್ಲಿ ಹಣದ ಹರಿವು ನಿಂತುಹೋಗಿ, ಮನೆಯ ಸುಖ-ನೆಮ್ಮದಿ ಇಲ್ಲದಂತಾಗುತ್ತದೆ.

* ಮನೆಯಲ್ಲಿರುವ ಜೇಡರ ಬಲೆಗಳು ಕ್ರಮೇಣ ವ್ಯಕ್ತಿಯನ್ನು ಬಡತನದತ್ತ ತಳ್ಳುತ್ತದೆ. ಹೀಗಾಗಿ, ಮನೆಯಲ್ಲಿ ಜೇಡರ ಬಲೆಗಳಿದ್ದರೆ ತೆಗೆಯುತ್ತಿರಬೇಕು.

Advertisement

* ಮನೆಯಲ್ಲಿ ಎಂದಿಗೂ ಮುಳ್ಳು ಗಿಡಗಳನ್ನು ನೆಡಬಾರದು. ಮನೆಯಲ್ಲಿ ಮುಳ್ಳು ಗಿಡಗಳನ್ನು ನೆಡುವುದರಿಂದ ಜಗಳಗಳು ಹೆಚ್ಚಾಗುತ್ತದೆ. ಇದರ ಜೊತೆಗೆ ಜೀವನದಲ್ಲಿ ಅನೇಕ ತೊಂದರೆಗಳು ಹಾಗೂ ಅಡೆತಡೆಗಳನ್ನು ಉಂಟುಮಾಡುತ್ತವೆ.

* ಪೊರಕೆಯನ್ನು ಸಾಮಾನ್ಯವಾಗಿ ಸಂಪತ್ತಿನ ಅಧಿದೇವತೆಯಾದ ಲಕ್ಷ್ಮಿಗೆ ಹೋಲಿಕೆ ಮಾಡಲಾಗುತ್ತದೆ. ಪೊರಕೆಯನ್ನು ಈಶಾನ್ಯದಿಕ್ಕಿನಲ್ಲಿ ಎಂದಿಗೂ ಇಡಬಾರದು. ಇದಲ್ಲದೆ, ಪೊರಕೆಯನ್ನು ಒದೆಯುವುದು ಇಲ್ಲವೇ ಅದನ್ನು ತಪ್ಪು ದಿಕ್ಕಿನಲ್ಲಿ ಇಡಬಾರದು. ತಪ್ಪು ದಾರಿಯಲ್ಲಿ ಇಡುವುದು ಮನೆಯಲ್ಲಿ ಮನೆಯಲ್ಲಿ ಬಡತನಕ್ಕೆ ತಳ್ಳುತ್ತದೆ.

* ಪಕ್ಷಿಗಳು ಮನೆಯಲ್ಲಿ ಗೂಡು ಕಟ್ಟುವುದು ಶುಭವೆಂದು ಪರಿಗಣಿಸಲಾಗುತ್ತದೆ. ಆದರೆ ಮನೆಯಲ್ಲಿ ಪಾರಿವಾಳದ ಗೂಡು ಇದ್ದರೆ ಶುಭವಲ್ಲ ಎಂದು ಪರಿಗಣಿಸಲಾಗುತ್ತದೆ.

* ಮನೆಯಲ್ಲಿ ಹಾಳಾದ ಅಥವಾ ಮುರುಕಲು ಪಾತ್ರೆಗಳನ್ನು ನಕಾರಾತ್ಮಕ ಶಕ್ತಿಯನ್ನು ವೃದ್ಧಿಸುತ್ತದೆ. ನಿರುಪಯುಕ್ತ ವಸ್ತುಗಳ ಹೆಚ್ಚಿರುವ ಮನೆಯಲ್ಲಿ ತಾಯಿ ಲಕ್ಷ್ಮಿ ಎಂದಿಗೂ ನೆಲೆಸುವುದಿಲ್ಲ. ಈ ರೀತಿಯ ಮನೆಯಲ್ಲಿ ಆದಾಯವಾಗಲಿ ಇಲ್ಲವೇ ಪ್ರಗತಿಯಾಗಲಿ ಕಂಡುಬರುವುದಿಲ್ಲ.

ಇದನ್ನೂ ಓದಿ: 'ಮಿಚುವಾಂಗ್' ಎಫೆಕ್ಟ್ - ಸಂಪೂರ್ಣ ಮುಳುಗಿದ ಚೆನ್ನೈ ! ರಾಜ್ಯದ ಈ ಭಾಗಗಳಲ್ಲೂ ಭಾರೀ ಮಳೆ

Related News

Advertisement
Advertisement