For the best experience, open
https://m.hosakannada.com
on your mobile browser.
Advertisement

Baba Vanga Prediction: 2024 ರ ಈ ದಿನದಂದು ರಷ್ಯಾ ಅಧ್ಯಕ್ಷ ಪುಟಿನ್ ಹತ್ಯೆ ನಡೆಯೋದು ಪಕ್ಕಾ!! ಸ್ಪೋಟಕ ಭವಿಷ್ಯ ನುಡಿದ ಬಾಬಾ ವಂಗಾ

05:20 PM Dec 10, 2023 IST | ಸುದರ್ಶನ್
UpdateAt: 05:20 PM Dec 10, 2023 IST
baba vanga prediction  2024 ರ ಈ ದಿನದಂದು ರಷ್ಯಾ ಅಧ್ಯಕ್ಷ ಪುಟಿನ್ ಹತ್ಯೆ ನಡೆಯೋದು ಪಕ್ಕಾ   ಸ್ಪೋಟಕ ಭವಿಷ್ಯ ನುಡಿದ ಬಾಬಾ ವಂಗಾ
Advertisement

Baba Vanga Prediction 2024: ಬಾಬಾ ವಾಂಗಾ ಅವರು ಹೊಸ ವರ್ಷದಲ್ಲಿ ನಡೆಯುವ ಕೆಲವು ಘಟನೆ ಬಗ್ಗೆ ಈಗಾಗಲೇ ಎಚ್ಚರಿಕೆ ನೀಡಿದ್ದಾರೆ. ಹೌದು, ಬಾಬಾ ವಾಂಗಾ ಅವರು ಹೇಳಿರುವ ಕೆಲ ಭವಿಷ್ಯವಾಣಿಗಳು (Baba Vanga Prediction) ನಿಜವಾಗಿವೆ. 9/11 ಉಗ್ರರ ದಾಳಿಯಾಗುತ್ತೆ ಎಂದು ಈಕೆ ಮೊದಲೇ ಹೇಳಿದ್ದರು. ಯುವರಾಣಿ ಡಯಾನಾ ಮರಣ, ಚೆರ್ನೊಬಿಲ್ ದುರಂತದ ಬಗ್ಗೆ ಮೊದಲೇ ಭವಿಷ್ಯ ನುಡಿದಿದ್ದರು. ಇವಿಷ್ಟೇ ಅಲ್ಲ ಬ್ರಿಕ್ಸಿಟ್ ಬಗ್ಗೆಯೂ ಈಕೆ ಮೊದಲೇ ಹೇಳಿದ್ದರೆಂದು ಕೆಲವರ ವಾದವಾಗಿದೆ.

Advertisement

ಆದರೆ ಇಷ್ಟೆಲ್ಲಾ ಭವಿಷ್ಯ ನುಡಿದಿರುವ ವಾಂಗಾ( Baba Vanga Prediction 2024)ಅವರು ಬದುಕಿಲ್ಲ. ಹೌದು, ಬಲ್ಗೇರಿಯಾದ ಬಾಬಾ ವಾಂಗ 1996ರಲ್ಲೇ ಮೃತಪಟ್ಟಿದ್ದಾರೆ. ಆಗ ಆಕೆ ಹೇಳಿರುವ ಕೆಲವೊಂದು ವಿಷಯಗಳನ್ನು ಜಗತ್ತಿನಾದ್ಯಂತ ಇರುವ ಜನರು ನಂಬುತ್ತಾರೆ. ಈಕೆಯ ಮಾತುಗಳು ನಿಜವಾಗುತ್ತಿವೆ. ಕಾಲಜ್ಞಾನಿಗಳನ್ನು ಹೇಗೆ ನಂಬಲಾಗುತ್ತೋ ಅದೇ ರೀತಿ ಬಾಬಾ ವಾಂಗಾ ಅವರು ಹೇಳಿರುವ ಭವಿಷ್ಯವನ್ನೂ ಜನರು ನಂಬುತ್ತಾರೆ.

ಈ ಎಲ್ಲಾ ಅಂಶಗಳನ್ನು ಗಮನದಲ್ಲಿ ಇಟ್ಟಾಗ, 2024ರಲ್ಲಿ ಏನು ನಡೆಯುತ್ತೆ ಎಂದು ಬಾಬಾ ವಾಂಗಾ ಅವರು ಹೇಳಿರುವುದನ್ನು ಸಾಕಷ್ಟು ಜನರು ನಂಬುತ್ತಾರೆ. ವಾಂಗಾ ಅವರ ಹೊಸ ವರ್ಷದ ಭವಿಷ್ಯವಾಣಿಯಲ್ಲಿ ಹೊಸ ವರ್ಷದಲ್ಲಿ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರ ಹತ್ಯೆಯಾಗಲಿದೆಯಂತೆ. ರಷ್ಯಾದ ವ್ಯಕ್ತಿಯೇ ಅಧ್ಯಕ್ಷ ಪುಟಿನ್ ಅವರನ್ನು ಹತ್ಯೆ ಮಾಡುತ್ತಾನೆ ಎಂದು ವಾಂಗಾ ಭವಿಷ್ಯ ನುಡಿದಿದ್ದಾರೆ.

Advertisement

ಜೊತೆಗೆ ಮುಂದಿನ ವರ್ಷದಲ್ಲಿ ತಜ್ಞರು ಕ್ಯಾನ್ಸರ್‌ ರೋಗವನ್ನು ಗುಣಪಡಿಸುವಂತ ಔಷಧಿಯನ್ನು ಕಂಡು ಹಿಡಿಯಲಿದ್ದಾರೆ. ಅಲ್ಜಿಮರ್ಸ್‌ ಕಾಯಿಲೆಗೂ ಔಷಧಿ ಸಿಗಲಿದೆ ಎಂದು ಹೇಳಿದ್ದಾರೆ. ಈ ಎರಡು ಭವಿಷ್ಯಗಳು ಖುಷಿಯ ವಿಚಾರ.

ಮುಖ್ಯವಾಗಿ ಬಲ್ಗೇರಿಯಾದ ನಾಸ್ಟ್ರಾಡಾಮಸ್ ಎಂದೇ ಖ್ಯಾತಿಯಾಗಿರುವ ವಾಂಗಾ ಅವರು 2024ರ ಭವಿಷ್ಯದಲ್ಲಿ ಸಿಹಿ ಸುದ್ದಿಗಿಂತ ಕೆಟ್ಟ ಭವಿಷ್ಯವನ್ನೇ ಹೆಚ್ಚು ಹೇಳಿದ್ದಾರೆ. ಮುಂದಿನ ವರ್ಷ ದೊಡ್ಡ ಮಟ್ಟದಲ್ಲಿ ಸೈಬರ್ ದಾಳಿ ಆಗಲಿದೆ. ಪವರ್ ಗ್ರೀಡ್, ವಾಟರ್ ಟ್ರೀಟ್‌ಮೆಂಟ್ ಪ್ಲಾಂಟ್ಸ್‌, ಆಸ್ಪತ್ರೆಗಳಂತಹ ಪ್ರಮುಖ ಘಟಕಗಳ ಮೇಲೆ ಸೈಬರ್ ದಾಳಿ ನಡೆದು, ಜನ ಸಾಮಾನ್ಯರ ಮೇಲೆ ಕೆಟ್ಟ ಪರಿಣಾಮ ಬೀರಲಿದೆ ಎಂದು ಹೇಳಿದ್ದಾರೆ.

ಅಲ್ಲದೇ 2024ರಲ್ಲಿ ಉಗ್ರ ಚಟುವಟಿಕೆಗಳು ಮತ್ತಷ್ಟು ವಿಸ್ತರಣೆಯಾಗಲಿವೆ. ದೊಡ್ಡ ದೇಶವೊಂದು ಜೈವಿಕ ಶಸ್ತ್ರಾಸ್ತ್ರಗಳನ್ನು ಪರೀಕ್ಷೆ ನಡೆಸುವ ಅಥವಾ ದಾಳಿ ಮಾಡುವ ಸಾಧ್ಯತೆ ಇದೆ. ಯುರೋಪ್‌ನಲ್ಲಿ ಉಗ್ರರು ಕೃತ್ಯಗಳು ದೊಡ್ಡ ಮಟ್ಟಕ್ಕೆ ಹೋಗಲಿವೆ. ಹೆಚ್ಚಾಗುತ್ತಿರುವ ಸಂಘರ್ಷ, ಅಧಿಕಾರ ಬದಲಾವಣೆ, ಯುದ್ಧಗಳಿಂದಾಗಿ ಜಗತ್ತಿನ ಹಲವು ದೇಶಗಳು ಆರ್ಥಿಕ ಬಿಕ್ಕಟ್ಟನ್ನು ಎದುರಿಸಲಿವೆ. ಇದರಿಂದಾಗಿ ದೊಡ್ಡ ದೊಡ್ಡ ನಗರಗಳಲ್ಲಿ ಹಿಂಸೆ, ಅಪರಾಧ ಕೃತ್ಯಗಳು ಹೆಚ್ಚಾಗಲಿವೆ ಎಂದು ವಾಂಗಾ ಅವರು ಭವಿಷ್ಯ ನುಡಿದಿದ್ದಾರೆ.

ಇನ್ನು 2024 ರಲ್ಲಿ ಹವಾಮಾನ ವೈಪರೀತ್ಯವು ಹೆಚ್ಚಾಗಲಿದೆ. ಮಳೆ, ಬರಗಾಲ, ಬೆಟ್ಟಗುಡ್ಡಗಳ ಕುಸಿತದಂತಹ ಪ್ರಕೃತಿ ವಿಕೋಪಗಳೊಂದಿಗೆ 2024 ರ ವರ್ಷ ಇತಿಹಾಸದಲ್ಲಿ ಎಂದೂ ಮರೆಯಲಾರದ ವರ್ಷವಾಗಲಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: 'ಯುವನಿಧಿ' ಜಾರಿ ದಿನಾಂಕ ಘೋಷಣೆ !!

Advertisement
Advertisement
Advertisement