ಮುಖಪುಟಸುದ್ದಿರಾಜಕೀಯಅಂಕಣಮನರಂಜನೆಸಿನೆಮಾ-ಕ್ರೀಡೆಲೈಫ್ ಸ್ಟೈಲ್ಕ್ರೀಡೆ
Advertisement

Money Tips : ಮನೆಯ ಆರ್ಥಿಕ ಸಮಸ್ಯೆಗೆ ನಿಮ್ಮಲ್ಲಿರುವ ಈ ಅಭ್ಯಾಸಗಳೇ ಕಾರಣ !

These really bad habits and traits will stop you from reaching your financial goals
07:47 PM Feb 19, 2023 IST | ಅಶ್ವಿನಿ ಹೆಬ್ಬಾರ್
UpdateAt: 08:10 PM Feb 19, 2023 IST
Advertisement

Astrology Money Tips : ಹಿಂದೂ ಧಾರ್ಮಿಕ ನಂಬಿಕೆಗಳ ಪ್ರಕಾರ, ನಮ್ಮ ಕೆಲವು ಅಭ್ಯಾಸಗಳು ನಮ್ಮನ್ನು ಆರ್ಥಿಕ ಮುಗ್ಗಟ್ಟಿನ ಸಮಸ್ಯೆ ತಲೆದೋರುವ ಮಾಡುತ್ತದೆ. ಹೆಚ್ಚಿನ ಮಂದಿ ನನ್ನ ಗ್ರಹಚಾರವೆ ಸರಿಯಿಲ್ಲ!! ಕೈಯಲ್ಲಿ ದುಡ್ಡೇ ಉಳಿಯುತ್ತಿಲ್ಲ ಎಂದು ಹೇಳೋದನ್ನು ನೀವು ಕೇಳಿರುತ್ತೀರಿ. ಎಷ್ಟೋ ಸಲ, ನಮ್ಮ ಕೆಟ್ಟ ಅಭ್ಯಾಸಗಳಿಂದ ಆರ್ಥಿಕವಾಗಿ ನಾವು ತುಂಬಾ ಸಮಸ್ಯೆ ಎದುರಿಸಬೇಕಾಗುತ್ತದೆ. ಹಾಗಾದ್ರೆ ಹಣ ಉಳಿತಾಯ ಮಾಡುವ ಸಲಹೆಗಳನ್ನು(Astrology Money Tips) ಬೆಳೆಸಿಕೊಳ್ಳುವುದು ಉತ್ತಮ.

Advertisement

 

ಆರ್ಥಿಕವಾಗಿ ನೀವು ಸೋಲಲು ಆರಂಭಿಸಿದ ಕೂಡಲೇ ಮಾನಸಿಕವಾಗಿ ಚಿಂತೆ ಎಂಬ ಚಿತೆಯಿಂದ ಕುಗ್ಗಿ ಹೋಗುವಂತೆ ಆಗೋದು ಕೂಡ ಇದೆ. ನಾವು ಕೈಗೊಳ್ಳುವ ತಪ್ಪು ಅಭ್ಯಾಸಗಳಿಂದಾಗಿ(Bad Habits) ಜಾತಕದಲ್ಲಿ ಗ್ರಹದೋಷಗಳು ಕಂಡುಬಂದು ಅಶುಭ ಫಲಗಳು ಗೋಚರಿಸುತ್ತದೆ. ಹಾಗಿದ್ರೆ, ನಿಮ್ಮನ್ನು ಬಡತನದ ಹಾದಿಯಲ್ಲಿ ಸಾಗುವಂತೆ ಮಾಡುವ ಅಭ್ಯಾಸಗಳು ಯಾವುದು ಎಂದು ನೀವು ತಿಳಿದುಕೊಂಡರೆ ಆ ತಪ್ಪು ಅಭ್ಯಾಸಗಳನ್ನು ಜೀವನದಲ್ಲಿ ರೂಡಿಸಿಕೊಳ್ಳದೆ ಆರ್ಥಿಕ ಮುಗ್ಗಟ್ಟಿನ ಸ್ಥಿತಿಯಿಂದ ಪಾರಾಗಬಹುದು. ಗ್ರಹಗತಿ ಹಾಗೂ ಜಾತಕದ ಅನುಸಾರ ಕೆಲವು ಹಣ ಉಳಿತಾಯ ಮಾಡುವ ಸಲಹೆಗಳನ್ನು (Astrology Money Tips)ಪಾಲಿಸಿದರೆ ಆರ್ಥಿಕ ಮುಗ್ಗಟ್ಟಿನ ಸಮಸ್ಯೆ ತಲೆದೋರದು.

Advertisement

 

ಪರಿಸರವನ್ನು ಹಾಳು ಮಾಡುವುದು:

ನಾವು ಇಂದು ಜೀವಿಸಲು ಅವಕಾಶ ಕಲ್ಪಿಸಿರುವ ಪ್ರಕೃತಿಯನ್ನು ನಮಗೆ ತಿಳಿವಳಿಕೆ ಇದ್ದರೂ ಕೂಡ ಹಾನಿಗೆಡವಿ ಅಭಿವೃದ್ದಿ ಹೆಸರಲ್ಲಿ ಪರಿಸರವನ್ನು ಸರ್ವನಾಶ ಮಾಡುವತ್ತ ಎಲ್ಲರೂ ಹೆಜ್ಜೆ ಇಡುತ್ತಿದ್ದೇವೆ. ಆದರೆ, ನೀವು ಪ್ರಗತಿ ಸಾಧಿಸಲು ಇಚ್ಛಿಸಿದರೆ, ಮೊದಲು ಪ್ರಕೃತಿಯನ್ನು ಉಳಿಸುವತ್ತ ಗಮನ ಹರಿಸಿ. ಗಿಡ - ಮರಗಳನ್ನು ಪೋಷಿಸಿ ಬೆಳೆಸಲು ಪ್ರಯತ್ನಿಸಿ. ಒಂದು ವೇಳೆ, ನೀವು ಮರಗಳು ಮತ್ತು ಸಸ್ಯಗಳಿಗೆ ಹಾನಿ ಮಾಡಿದ್ದಲ್ಲಿ ನೀವು ದೊಡ್ಡ ನಷ್ಟವನ್ನು ಬರ ಮಾಡಿಕೊಳ್ಳುವಂತೆ ಆದರೂ ಅಚ್ಚರಿಯಿಲ್ಲ. ನಿಮ್ಮ ಪ್ರಗತಿಯಲ್ಲಿ ವೃತ್ತಿಜೀವನದಲ್ಲಿ ಕಠಿಣ ಸಮಸ್ಯೆಗಳು ಎದುರಾಗಬಹುದು.

 

ರಾತ್ರಿ ತಡವಾಗಿ ಮಲಗುವುದು ಮತ್ತು ಬೆಳಿಗ್ಗೆ ತಡವಾಗಿ ಏಳುವುದು:

ಇಂದಿನ ಒತ್ತಡಯುತ ಜೀವನಶೈಲಿಯಲ್ಲಿ ರಾತ್ರಿ ತಡವಾಗಿ ಮೊಬೈಲ್ ಹಿಡಿದು ಮಲಗುವ ಜೊತೆಗೆ ಬೆಳಿಗ್ಗೆ ತಡವಾಗಿ ಏಳುವ ಅಭ್ಯಾಸ ರೂಡಿಯಾಗಿರುತ್ತೆ. ನಿಮಗೂ ಈ ಅಭ್ಯಾಸವಿದ್ದರೆ ಇಂದೇ ಬಿಟ್ಟುಬಿಡಿ. ಏಕೆಂದರೆ ಈ ಅಭ್ಯಾಸ ನಿಮ್ಮನ್ನು ಆಲಸಿಗಳಂತೆ ಮಾಡುವುದು ಮಾತ್ರವಲ್ಲದೆ ಧಾರ್ಮಿಕ ನಂಬಿಕೆಗಳ ಪ್ರಕಾರ, ರಾತ್ರಿ ತಡವಾಗಿ ಮಲಗುವುದು ಮತ್ತು ಬೆಳಿಗ್ಗೆ ತಡವಾಗಿ ಏಳುವ ಅಭ್ಯಾಸವೂ ನಕಾರಾತ್ಮಕ ಅಭ್ಯಾಸಗಳೆಂದು ಪರಿಗಣಿಸಲಾಗಿದೆ. ಅಷ್ಟೆ ಅಲ್ಲದೇ, ಈ ಅಭ್ಯಾಸ ಬೆಳೆಸಿಕೊಂಡರೆ ಜೀವನದಲ್ಲಿ ಜಡತ್ವ ಮೈಗೂಡಿ ಯಾವುದೇ ಸಾಧನೆ ಮಾಡಲು ಜಡ ಸ್ವಭಾವ ಅಡ್ಡಿಯಾಗುತ್ತದೆ.

 

ಉಗುರು ಕಚ್ಚುವುದು:

ಉಗುರು ಕಚ್ಚುವ ಅಭ್ಯಾಸ ಹೆಚ್ಚಿನವರಿಗೆ ಬಾಲ್ಯದಿಂದಲೇ ರೂಡಿಯಾಗಿರುತ್ತದೆ. ಮತ್ತೆ ಕೆಲವರಿಗೆ ಹೆಚ್ಚು ಭಯ, ಗಾಬರಿಯಾದಾಗ ಉಗುರು ಕಚ್ಚುವುದನ್ನು ಗಮನಿಸಿರಬಹುದು.ಈ ಅಭ್ಯಾಸದಿಂದ ಜೀವನದಲ್ಲಿ ಅಪಘಾತಕ್ಕೆ ಈಡಾಗುವ ಸಾಧ್ಯತೆಗಳಿವೆ ಎನ್ನಲಾಗಿದೆ. ಹೀಗಾಗಿ, ಈ ಅಭ್ಯಾಸ ನಿಮಗೂ ಇದ್ದರೆ ಇಂದೇ ಬಿಟ್ಟುಬಿಡಿ.

 

ಯಾರಿಗಾದರೂ ಹಾನಿ:

ಸಾಮಾನ್ಯವಾಗಿ ಮಾಡಿದುನ್ನೋ ಮಹರಾಯ ಎಂಬ ಮಾತು ನಿಜ ಜೀವನಕ್ಕೆ ಹೆಚ್ಚು ಹೊಂದಾಣಿಕೆಯಾಗುತ್ತದೆ. ನಾವು ಮಾಡುವ ಪ್ರತಿಯೊಂದು ಒಳ್ಳೆಯ ಕಾರ್ಯಕ್ಕೂ ಪ್ರತಿಫಲ ದೊರೆಯುತ್ತದೆ. ಅಷ್ಟೆ ಅಲ್ಲದೇ, ನಾವು ಮಾಡುವ ಕೆಟ್ಟ ಪಾಪದ ಕಾರ್ಯಕ್ಕೂ ದೊಡ್ಡ ಮಟ್ಟದ ಬೆಲೆ ತೆರಬೇಕಾಗುತ್ತದೆ. ಈಗ ಅಲ್ಲೇ ಡ್ರಾ ಅಲ್ಲೇ ಬಹುಮಾನ ಎಂಬಂತೆ ಒಳ್ಳೆ (Good) - ಕೆಟ್ಟ (Bad) ಕೆಲಸಕ್ಕೆ ಪ್ರತಿಫಲ ದೊರೆಯುತ್ತದೆ. ಹೀಗಾಗಿ,

ನೀವು ಬೇರೆ ಯವರಿಗೆ ಕೆಟ್ಟದ್ದು ಮಾಡುವ ಬಗ್ಗೆ ಆಲೋಚಿಸಿದರೆ, ನಿಮ್ಮ ದುರದೃಷ್ಟವನ್ನು ಬರಮಾಡಿ ಕೊಳ್ಳುತ್ತಿರೆಂದು ಅರ್ಥ. ಅಷ್ಟೇ ಅಲ್ಲದೆ, ಮತ್ತೊಬ್ಬರ ಏಳಿಗೆ ಕಂಡಾಗ ಅಸೂಯೆಪಡುವ ಜೊತೆಗೆ ಇತರರಿಗೆ ಹಾನಿ ಮಾಡುವವರ ಮೇಲೆ ತಾಯಿ ಲಕ್ಷ್ಮಿ ಸದಾ ಮುನಿಸಿಕೊಳ್ಳುತ್ತಾಳೆ. ಹೀಗಾಗಿ, ನಿಮಗೂ ಈ ರೀತಿಯ ಆಲೋಚನೆಗಳು ಇದ್ದರೆ ಒಳ್ಳೆಯ ವಿಚಾರಗಳತ್ತ ಗಮನ ಹರಿಸಲು ಪ್ರಯತ್ನಿಸಿ.

 

ಅಡುಗೆ ಮನೆ ಶುಚಿಯಾಗಿಡದಿರುವುದು:

ಎಲ್ಲರೂ ಊಟ, ತಿಂಡಿ ಎಂದು ಸೇರುವ ಜಾಗ ಅಡುಗೆ ಮನೆ. ಇಲ್ಲಿ ಶುಚಿತ್ವ ಕಾಯ್ದುಕೊಂಡರೆ ಅಡುಗೆ ಕೂಡ ಶುಚಿ ರುಚಿಯಾಗಿ ಎಲ್ಲ ಮೆಚ್ಚಿಕೊಂಡು ಸೇವಿಸುವಂತೆ ಆರೋಗ್ಯವನ್ನು ಕೂಡ ಕಾಪಾಡಿಕೊಳ್ಳಲು ನೆರವಾಗುತ್ತದೆ. ಅಡುಗೆ ಮನೆಯಲ್ಲಿ ಪಂಚಭೂತಗಳಿಗೆ ಮಹತ್ವವಾದ ಸ್ಥಾನವನ್ನು ನೀಡುವ ಹಿನ್ನೆಲೆ ವಾಸ್ತು ಪ್ರಕಾರದ ಅನುಸಾರ ಅಡುಗೆ ಕೋಣೆ (Kitchen Room) ಮನೆಯವರ ಆರೋಗ್ಯ(Health) ಶಾಂತಿ (Peace)ಕಾಪಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ನಿಮ್ಮ ಅಡುಗೆ ಮನೆ ಶುಚಿಯಾಗಿಲ್ಲದಿದ್ದರೆ ಅದು ಜೀವನದಲ್ಲಿ ಅನೇಕ ಸಮಸ್ಯೆಗಳನ್ನು ಉಂಟು ಮಾಡುತ್ತದೆ ಎನ್ನಲಾಗುತ್ತದೆ. ಅಷ್ಟೆ ಅಲ್ಲದೇ, ವೈವಾಹಿಕ ಜೀವನದ ಮೇಲೂ ಪರಿಣಾಮ ಬೀರುತ್ತದೆ.

Advertisement
Advertisement