For the best experience, open
https://m.hosakannada.com
on your mobile browser.
Advertisement

Bengaluru: ಶಿಕ್ಷಣ ಕೇತ್ರದಲ್ಲಿ‌ ಕ್ರಾಂತಿ ತಂದಿದ್ದು ಬಿಜೆಪಿ ಜೆಡಿಎಸ್ ಸಮ್ಮಿಶ್ರ ಸರ್ಕಾರ: ಅಶ್ವತ್ ನಾರಾಯಣ್

Bengaluru: ಶಿಕ್ಷಣ ಕ್ಷೇತ್ರದಲ್ಲಿ ದೊಡ್ಡ ಮಟ್ಟಿನ ಸುಧಾರಣೆ ತಂದಿದ್ದು ಸಮ್ಮಿಶ್ರ ಸರ್ಕಾರ ಎಂದು ಮಾಜಿ ಸಚಿವ ಅಶ್ವತ ನಾರಾಯಣ್ ಹೇಳಿದ್ದಾರೆ
12:58 PM May 30, 2024 IST | ಸುದರ್ಶನ್
UpdateAt: 12:59 PM May 30, 2024 IST
bengaluru  ಶಿಕ್ಷಣ ಕೇತ್ರದಲ್ಲಿ‌ ಕ್ರಾಂತಿ ತಂದಿದ್ದು ಬಿಜೆಪಿ ಜೆಡಿಎಸ್ ಸಮ್ಮಿಶ್ರ ಸರ್ಕಾರ  ಅಶ್ವತ್ ನಾರಾಯಣ್
Advertisement

Bengaluru: ಯಡಿಯೂರಪ್ಪನವರ ಕಾಲದಲ್ಲಿ ಹಲವಾರು ಐ.ಟಿ.ಐ ಕಾಲೇಜ್‌ ಗಳು, ಪಾಲಿಟೆಕ್ನಿಕ್ ಕಾಲೇಜ್ ಗಳು ಅಭಿವೃದ್ಧಿಯಾಗಿವೆ. ಶಿಕ್ಷಣ ಕ್ಷೇತ್ರದಲ್ಲಿ ದೊಡ್ಡ ಮಟ್ಟಿನ ಸುಧಾರಣೆ ತಂದಿದ್ದು ಸಮ್ಮಿಶ್ರ ಸರ್ಕಾರ ಎಂದು ಮಾಜಿ ಸಚಿವ ಅಶ್ವತ ನಾರಾಯಣ್ ಹೇಳಿದ್ದಾರೆ.

Advertisement

ಇದನ್ನೂ ಓದಿ: Vitla: ಮಾಣಿ ರಾಷ್ಟ್ರೀಯ ಹೆದ್ದಾರಿಯ ಕಬ್ಬಿಣದ ತಡೆಬೇಲಿಗೆ ಕಾರು ಡಿಕ್ಕಿ

ವಿಧಾನ ಪರಿಷತ್ ಚುನಾವಣ ಪ್ರಚಾರದಲ್ಲಿ ಮಾತನಾಡಿದ ಅಶ್ವತ್ ನಾರಾಯಣ್ ರಾಜ್ಯದಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಬಹಳಷ್ಟು ಸುದರಣೆ ತಂದಿದ್ದು ನಮ್ಮ ಯಡಿಯೂರಪ್ಪ ಸರ್ಕಾರ ಬಿ.ಎಸ್.ವೈ ಹಾಗು ಕುಮಾರಸ್ವಾಮಿ ಸಮ್ಮಿಶ್ರ ಸರ್ಕಾರದಲ್ಲಿ ಹಲವಾರು ಅಭಿವೃದ್ಧಿಗಳಾಗಿವೆ, ಕಾಂಗ್ರೆಸ್ ಸರ್ಕಾರದಲ್ಲಿ ಯಾವುದೆ ಒಳ್ಳೆಯ ಕೆಲಸಗಳು ನಡೆಯುತ್ತಿಲ್ಲ, ಕೇವಲ ಗ್ಯಾರೆಂಟಿ ಹೆಸರಿನಲ್ಲಿ ರಾಜ್ಯದಲ್ಲಿ ಅಧಿಕಾರಕ್ಕೆ ಬಂದಿದ್ದಾರೆ ಎಂದಿದ್ದಾರೆ.

Advertisement

ಇದನ್ನೂ ಓದಿ: Satta Bazar: ಸಟ್ಟಾ ಬಜಾರ್ ಅಂದ್ರೆ ಏನು? ಇದರ ಭವಿಷ್ಯವು ಬಿಜೆಪಿಯ ನಿದ್ದೆಗೆಡಿಸಿದ್ದೇಕೆ ?!

ಗ್ಯಾರೆಂಟಿ ವಿಚಾರ ಬಿಟ್ಟರೆ ಕಾಂಗ್ರೆಸ್ ಸರ್ಕಾರ ರಾಜ್ಯದ ಜನರಿಗೆ ಯಾವುದೇ ಉಪಯೋಗವಾಗುವ ಕೆಲಸ ಮಾಡಿಲ್ಲ. ಈಗಾಗಲೇ ಕಾನೂನು ಸುವ್ಯವಸ್ಥೆ ಹದಗೆಟ್ಟಿದ್ದು, ರೈತರ ವಿರೋಧಿಗಳಾಗಿ ಎಲ್ಲಾ ಕ್ಷೇತ್ರದಲ್ಲೂ ಕಾಂಗ್ರೆಸ್ ಸರ್ಕಾರ ವಿಫಲವಾಗಿದೆ. ಹಣ ಗಳಿಸುವ ನಿಟ್ಟಿನಲ್ಲಿ ಅಧಿಕಾರವನ್ನು ಬಳಸಿಕೊಂಡು ಈ ಸರ್ಕಾರ ಕೆಲಸ ಮಾಡುತ್ತಿದೆ. ಕಾಂಗ್ರೆಸ್‌ ನ ನಾಯಕರು ಮಾತುಗಾರರು ಅಷ್ಟೆ, ಬೇರೇನಲ್ಲ ಎಂದು ರಾಜ್ಯ ಸರ್ಕಾರದ ವಿರುದ್ದ ಅಶ್ವತ್ ನಾರಾಯಣ್ ಕಿಡಿ ಕಾರಿದರು.

Advertisement
Advertisement
Advertisement