ಮುಖಪುಟಸುದ್ದಿರಾಜಕೀಯಅಂಕಣಮನರಂಜನೆಸಿನೆಮಾ-ಕ್ರೀಡೆಲೈಫ್ ಸ್ಟೈಲ್ಕ್ರೀಡೆ
Advertisement

Ashada Month 2024: ಆಷಾಡ ಮಾಸದಲ್ಲಿ ಈ ನಿಯಮಗಳನ್ನು ತಪ್ಪದೇ ಪಾಲಿಸಿ!

Ashada Month 2024: ಆಷಾಡ ಮಾಸವು ಮುಂದಿನ ತಿಂಗಳು ಅಂದರೆ 21 ಜುಲೈ 2024 ರಂದು ಮುಗಿಯುತ್ತದೆ. ಇದಾದ ನಂತರ ಶ್ರಾವಣ ಮಾಸ ಆರಂಭವಾಗಲಿದೆ.
10:19 AM Jun 20, 2024 IST | ಕಾವ್ಯ ವಾಣಿ
UpdateAt: 10:20 AM Jun 20, 2024 IST
Advertisement

Ashada Month 2024: ಆಷಾಢ ಮಾಸವನ್ನು ಆಧ್ಯಾತ್ಮಿಕ ಮತ್ತು ಜ್ಯೋತಿಷ್ಯ ದೃಷ್ಟಿಕೋನದಿಂದ ಬಹಳ ಮುಖ್ಯವೆಂದು ಪರಿಗಣಿಸಲಾಗಿದ್ದು, ಸದ್ಯ ಆಷಾಢ ಮಾಸ ಕೆಲವೇ ದಿನಗಳಲ್ಲಿ  ಆರಂಭವಾಗಲಿದ್ದು, ಅಂದರೆ ಜೂನ್ 23ರ ಭಾನುವಾರದಂದು (Ashada Month 2024) ಆಷಾಢ ಮಾಸ ಆರಂಭವಾಗಲಿದೆ. ಈ ಆಷಾಡ ಮಾಸವು ಮುಂದಿನ ತಿಂಗಳು ಅಂದರೆ 21 ಜುಲೈ 2024 ರಂದು ಮುಗಿಯುತ್ತದೆ. ಇದಾದ ನಂತರ ಶ್ರಾವಣ ಮಾಸ ಆರಂಭವಾಗಲಿದೆ.

Advertisement

Veerappan: ಅಣ್ಣಾವ್ರನ್ನು ಬಿಡುಗಡೆ ಮಾಡುವಾಗ ವೀರಪ್ಪನ್ ಕೊಟ್ಟ ಉಡುಗೊರೆಯೇನು?

ಮುಖ್ಯವಾಗಿ ಈ ಆಷಾಡ ಮಾಸ ಆರಂಭವಾಗುತ್ತಿದಂತೆ ಮಳೆಗಾಲ ಶುರುವಾಗುತ್ತೆ. ಅದರಲ್ಲೂ ಹಿಂದೂ ಸಂಪ್ರದಾಯದಲ್ಲಿ ಪ್ರತಿಯೊಂದು ಮಾಸಕ್ಕೆ (Masa) ಬಹಳ ಪ್ರಾಮುಖ್ಯತೆ ಇದೆ. ಇನ್ನು ಆಷಾಢ  ಮಾಸಕ್ಕೆ ಸಂಬಂಧಿಸಿದಂತೆ ಅನೇಕ ನಿಯಮಗಳಿದೆ (Rules). ಈ ಮಾಸದಲ್ಲಿ ಮಾಡಬಾರದ ಹಾಗೂ ಮಾಡಬೇಕಾದ ಕೆಲಸಗಳು ಏನು ಎಂಬುದು ಇಲ್ಲಿದೆ.

Advertisement

ಜೂನ್ 23ರ ಭಾನುವಾರದಂದು ಆಷಾಢ ಮಾಸ ಆರಂಭವಾಗಲಿದ್ದು, ಈ ದಿನದಂದು ಸರ್ವಾರ್ಥ ಸಿದ್ಧಿ ಯೋಗ ಮತ್ತು ತ್ರಿಪುಷ್ಕರ ಯೋಗ ರೂಪುಗೊಳ್ಳುತ್ತದೆ ಎನ್ನುತ್ತಾರೆ ಪಂಡಿತರು. ಆಷಾಢ ಮಾಸವು ಇಷ್ಟಾರ್ಥಗಳನ್ನು ಈಡೇರಿಸುವ ತಿಂಗಳು ಎಂದು ಹೇಳಲಾಗುತ್ತದೆ, ಈ ಮಾಸದಲ್ಲಿ ನಾವು ಮಾಡುವ ಕೆಲಸಗಳ ಬಗ್ಗೆ ಬಹಳ ಗಮನ ಇರಬೇಕು. ಆಷಾಢ ಮಾಸದ ದೇವಶಯನಿ ಏಕಾದಶಿಯಂದು, ಭಗವಾನ್ ವಿಷ್ಣುವು ಯೋಗ ನಿದ್ರಾಗೆ ಹೋಗುತ್ತಾನೆ ಎನ್ನುವ ನಂಬಿಕೆ ಇದೆ. ಹಾಗಾಗಿ ಈ ಮಾಸದಲ್ಲಿ ವಿಷ್ಣುವಿನ ಆರಾಧನೆ ಮಾಡಬೇಕು ಎನ್ನಲಾಗುತ್ತದೆ.

ಆಷಾಡ ತಿಂಗಳಲ್ಲಿ ಮಾಡಬಾರದ ಕೆಲಸಗಳು:

ಆಷಾಡಮಾಸದಲ್ಲಿ ಯಾವುದೇ ಹೊಸ ಕೆಲಸಗಳನ್ನ ಆರಂಭ ಮಾಡಬಾರದು ಎನ್ನಲಾಗುತ್ತದೆ

ಇನ್ನು ಶುಭ ಕಾರ್ಯ ಮಾಡಬಾರದು. ಜೊತೆಗೆ ಯಾವುದೇ ಕಾರಣಕ್ಕೂ ಈ ಸಮಯದಲ್ಲಿ ಬಂಗಾರ ಖರೀದಿ ಮಾಡಬಾರದು

ಮತ್ತೊಂದು ಮುಖ್ಯವಾದ ನಿಯಮ ಎಂದರೆ ಗಂಡ-ಹೆಂಡತಿ ಒಟ್ಟಿಗೆ ಇರಬಾರದು.

ಆಷಾಡ ಮಾಸದಲ್ಲಿ ಮಾಡಬೇಕಾದ ಕೆಲಸಗಳು:

ಪ್ರತಿದಿನ ಬೆಳಿಗ್ಗೆ ಪೂಜೆ ಮಾಡಬೇಕು

ಓಂ ನಮಃ ಶಿವಾಯ, ಓಂ ನಮೋ ಭಗವತೇ ವಾಸುದೇವಾಯ, ಓಂ ರಾಮದೂತಾಯ ನಮಃ, ಕ್ರಿಂ ಕೃಷ್ಣಾಯ ನಮಃ, ಓಂ ರಾ ರಾಮಾಯ ನಮಃ ಎಂಬ ಮಂತ್ರಗಳನ್ನು ಪಠಿಸಬೇಕು.

ತಪ್ಪದೇ ಸೂರ್ಯನಿಗೆ ಅರ್ಘ್ಯವನ್ನು ಅರ್ಪಿಸಬೇಕು. ಇನ್ನು ಹಣ, ಧಾನ್ಯಗಳ ಜೊತೆಗೆ ಬಟ್ಟೆ, ಛತ್ರಿಗಳನ್ನು ದಾನ ಮಾಡಬೇಕು. ಆಷಾಢ ಮಾಸದಲ್ಲಿ ನೀವು ಮಾಡುವ ಒಳ್ಳೆಯ ಕೆಲಸಗಳು 7 ಜನ್ಮಗಳ ಪುಣ್ಯವನ್ನ ನೀಡುತ್ತದೆ ಅನ್ನುವ ನಂಬಿಕೆ ಇದೆ.

ಆಷಾಢ ಮಾಸದಲ್ಲಿ ಬರುವ ವಿಶೇಷ ದಿನಗಳು:

25 ಜೂನ್ 2024 - ಅಂಗಾರಕ ಸಂಕಷ್ಟ ಚತುರ್ಥಿ,

2 ಜುಲೈ 2024 (ಮಂಗಳವಾರ) - ಯೋಗಿನಿ ಏಕಾದಶಿ

5 ಜುಲೈ 2024 (ಶುಕ್ರವಾರ) - ಆಷಾಢ ಅಮವಾಸ್ಯೆ

7 ಜುಲೈ 2024 (ಭಾನುವಾರ) - ಜಗನ್ನಾಥ ರಥ ಯಾತ್ರೆ

17 ಜುಲೈ 2024 (ಬುಧವಾರ) - ದೇವಶಯನಿ ಏಕಾದಶಿ

21 ಜುಲೈ 2024 (ಭಾನುವಾರ) - ಗುರು ಪೂರ್ಣಿಮಾ, ವ್ಯಾಸ ಪೂರ್ಣಿಮಾ.

ರೇಣುಕಾ ಸ್ವಾಮಿ ಹತ್ಯೆ ಪ್ರಕರಣ; ಮೌನ ಮುರಿದ ದರ್ಶನ್ ಪತ್ನಿ ವಿಜಯಲಕ್ಷ್ಮೀ ಹೇಳಿದ್ದಿಷ್ಟು !!

 

Advertisement
Advertisement