ಮುಖಪುಟಸುದ್ದಿರಾಜಕೀಯಅಂಕಣಮನರಂಜನೆಸಿನೆಮಾ-ಕ್ರೀಡೆಲೈಫ್ ಸ್ಟೈಲ್ಕ್ರೀಡೆ
Advertisement

Arvind kejriwal: ಅರೆಸ್ಟ್ ಆಗುವುದರಲ್ಲಿ ಕೂಡಾ ದಾಖಲೆ ಬರೆದ ಅರವಿಂದ್ ಕೇಜ್ರಿವಾಲ್, ಮುಖ್ಯಮಂತ್ರಿಯಾಗಿರುವಾಗಲೇ ಅರೆಸ್ಟ್ ಆದ ಮೊದಲ ಸಿಎಂ !!

11:20 PM Mar 21, 2024 IST | ಹೊಸ ಕನ್ನಡ
UpdateAt: 11:20 PM Mar 21, 2024 IST
Advertisement

ಗುರುವಾರ ಜಾರಿ ನಿರ್ದೇಶನಾಲಯವು ಅರವಿಂದ್ ಕೇಜ್ರಿವಾಲ್ ರನ್ನು ಗುರುವಾರ ಅವರನ್ನು ಕಸ್ಟಡಿಗೆ ತೆಗೆದುಕೊಂಡಿದ್ದು, ಬಂಧನಕ್ಕೊಳಗಾಗುವ ಮೂಲಕ ಅವರು ದಾಖಲೆಯೊಂದನ್ನು ಸ್ಥಾಪಿಸಿದ್ದಾರೆ. ಮುಖ್ಯಮಂತ್ರಿ ಆಗಿರುವಾಗ ಬಂಧನಕ್ಕೆ ಒಳಗಾದ ಮೊದಲ ಮುಖ್ಯಮಂತ್ರಿ ಎಂಬ ಕುಖ್ಯಾತಿಗೆ ಅರವಿಂದ್ ಕೇಜ್ರೀವಾಲ್ (Aravind kejriwal) ಪಾತ್ರರಾಗಿದ್ದಾರೆ.

Advertisement

ಆಮ್ ಆದ್ಮಿ ಪಕ್ಷದ (AAP) ಸಂಚಾಲಕರು ಆಗಿರುವ ದೆಹಲಿಯ ಮುಖ್ಯಮಂತ್ರಿ, ಅರವಿಂದ ಕೇಜ್ರಿವಾಲ್ ದೆಹಲಿ ಮದ್ಯ ನೀತಿ ಹಗರಣಕ್ಕೆ ಸಂಬಂಧಿಸಿದಂತೆ ಬಂಧನಕ್ಕೊಳಗಾದ ಪಕ್ಷದ ಮೂರನೇ ಹಿರಿಯ ನಾಯಕರಾಗಿದ್ದಾರೆ. ಇದೀಗ ಈ ಮೂಲಕ ಅವರ ಪಕ್ಷದ ಭವಿಷ್ಯದ ಬಗ್ಗೆ ಪ್ರಶ್ನಾರ್ಥಕ ಚಿಹ್ನೆಗಳು ಮೂಡಿವೆ. ಆದರೂ ಅವರು ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ನೀಡಲು ನಿರಾಕರಿದ್ದಾರೆ. ಕಂಬಿಗಳ ಹಿಂದೆ ಕೂತೇ ಜೈಲಿನಿಂದಲೇ ಸರ್ಕಾರವನ್ನು ಮುಂದುವರಿಸುವುದಾಗಿ ಅವರು ಹೇಳಿದ್ದಾರೆ.

ಗುರುವಾರ ಮದ್ಯ ನೀತಿ ಪ್ರಕರಣದಲ್ಲಿ ಬಂಧನದಿಂದ ರಕ್ಷಣೆ ನೀಡಲು ದೆಹಲಿ ಹೈಕೋರ್ಟ್ ನಿರಾಕರಿಸಿದ ಕೆಲವೇ ಗಂಟೆಗಳ ನಂತರ ಕೇಜ್ರಿವಾಲ್ ಅವರನ್ನು ಕಸ್ಟಡಿಗೆ ತೆಗೆದುಕೊಳ್ಳಲಾಯಿತು. ಜಾರಿ ನಿರ್ದೇಶನಾಲಯ ಹೊರಡಿಸಿದ 9 ಸಮನ್ಸ್‌ಗಳನ್ನು ಅವರು ನಿರ್ಲಕ್ಷಿಸಿದ್ದರು. ಅದರಲ್ಲಿ ಕೊನೆಯದಾಗಿ ಗುರುವಾರ ವಿಚಾರಣೆಗೆ ಹಾಜರಾಗಬೇಕಿತ್ತು. ಆಗ ಕೂಡಾ ಹಾಜರಾಗದೆ ಅಸಡ್ಡೆ ತೋರಿದ್ದರು ಕೇಜ್ರಿವಾಲ್.

Advertisement

 

ಇತ್ತೀಚೆಗೆ ಜನವರಿ 31ರಂದು, ₹ 600 ಕೋಟಿ ರೂಪಾಯಿ ಭೂ ಹಗರಣಕ್ಕೆ ಸಂಬಂಧಿಸಿದ ಮನಿ ಲಾಂಡರಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಜೆಎಂಎಂ ನಾಯಕ ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೆನ್ ರನ್ನು ಇದೇ ಇಡಿ ಸಂಸ್ಥೆ ಬಂಧಿಸಿದಾಗ ಅವರು ರಾಜ್ಯಪಾಲರಿಗೆ ರಾಜೀನಾಮೆ ನೀಡುವವರೆಗೂ ಬಂಧನದ ಮೆಮೊಗೆ ಸಹಿ ಹಾಕಲು ನಿರಾಕರಿಸಿದ್ದರು. ಅಂದು ರಾಂಚಿಯ ಅವರ ನಿವಾಸದಲ್ಲಿ 6 ಗಂಟೆಗಳ ಕಾಲ ವಿಚಾರಣೆ ನಡೆಸಿದ ನಂತರ ಅವರನ್ನು ಕರೆದೊಯ್ಯುವಾಗ, ಸೊರೆನ್ ರಾಜಭವನದಲ್ಲಿ ಕಾರು ನಿಲ್ಲಿಸಲು ಒತ್ತಾಯಿಸಿದರು. ಅಲ್ಲಿ ಅವರು ರಾಜ್ಯಪಾಲ ಸಿಪಿ ರಾಧಾಕೃಷ್ಣನ್ ರಿಗೆ ರಾಜೀನಾಮೆ ನೀಡಿದ್ದರು. ಹಾಗೆ ಅಂದು ಕೂದಲೆಳೆಯ ಅಂತರದಿಂದ ಮುಖ್ಯಮಂತ್ರಿಯೊಬ್ಬರು ಅರೆಸ್ಟ್ ಆಗುವ ಅಪವಾದದಿಂದ ತಪ್ಪಿಸಿಕೊಂಡಿದ್ದರು.

ಇದನ್ನೂ ಓದಿ: Arvind Kejriwal: ಅಬಕಾರಿ ನೀತಿ ಹಗರಣ : ಜಾರಿ ನಿರ್ದೇಶನಾಲಯದಿಂದ ಅರವಿಂದ್ ಕೇಜ್ರಿವಾಲ್ ಬಂಧನ

ಅದಕ್ಕೂ ಹಿಂದೆ ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್, ಎಐಎಡಿಎಂಕೆಯ ದಿವಂಗತ ಜೆ ಜಯಲಲಿತಾ, ಟಿಡಿಪಿಯ ಚಂದ್ರಬಾಬು ನಾಯ್ಡು ಮತ್ತು ಭಾರತೀಯ ರಾಷ್ಟ್ರೀಯ ಲೋಕದಳದ ಓಂ ಪ್ರಕಾಶ್ ಚೌತಾಲ ಸೇರಿದಂತೆ ದೇಶದ ಇತರ ಕೆಲವು ಮಾಜಿ ಮುಖ್ಯಮಂತ್ರಿಗಳು ಕಂಬಿಗಳ ಹಿಂದೆ ಕಾಲ ಕಳೆದಿದ್ದಾರೆ. ಆದರೆ ಮುಖ್ಯಮಂತ್ರಿ ಆಗಿದ್ದು ಕೊಂಡೇ ಅರೆಸ್ಟ್ ಆದವರಲ್ಲಿ ಅರವಿಂದ ಕೇಜ್ರಿವಾಲ್ ರೇ ಪ್ರಥಮರು !

ಇದನ್ನೂ ಓದಿ: Terrible Accident: ಸೌದಿ ಅರೇಬಿಯಾದಲ್ಲಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಮಂಗಳೂರು ಮೂಲದ ಮೂರು ಜನ ದಾರುಣ ಸಾವು

Related News

Advertisement
Advertisement