ಮುಖಪುಟಸುದ್ದಿರಾಜಕೀಯಅಂಕಣಮನರಂಜನೆಸಿನೆಮಾ-ಕ್ರೀಡೆಲೈಫ್ ಸ್ಟೈಲ್ಕ್ರೀಡೆ
Advertisement

Bhavani Revanna: ಭವಾನಿ ರೇವಣ್ಣ ಸಿಕ್ಕ ತಕ್ಷಣ ಅರೆಸ್ಟ್‌: ಜಿ. ಪರಮೇಶ್ವರ್ ಸ್ಪಷ್ಟನೆ

Bhavani Revanna: ಭವಾನಿ ರೇವಣ್ಣ ಸಿಕ್ಕ ತಕ್ಷಣ ಅರೆಸ್ಟ್‌ ಮಾಡಲಾಗುತ್ತದೆ ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್‌ ಅವರು ಸ್ಪಷ್ಟವಾಗಿ ತಿಳಿಸಿದ್ದಾರೆ.
04:25 PM Jun 02, 2024 IST | ಸುದರ್ಶನ್
UpdateAt: 04:25 PM Jun 02, 2024 IST
Advertisement

Bhavani Revanna: ಈಗಾಗಲೇ ಭವಾನಿ ರೇವಣ್ಣ (Bhavani Revanna)ಅವರು ಮಹಿಳೆ ಅಪಹರಣ ಪ್ರಕರಣ ಸಂಬಂಧ 15 ದಿನಗಳ ಹಿಂದೆಯೇ ಕಣ್ಣು ತಪ್ಪಿಸಿ ಓಡಾಡುತ್ತಿದ್ದಾರೆ. ಇದೀಗ ಅವರನ್ನು ಸಿಕ್ಕ ತಕ್ಷಣ ಅರೆಸ್ಟ್‌ ಮಾಡಲಾಗುತ್ತದೆ ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್‌ ಅವರು ಸ್ಪಷ್ಟವಾಗಿ ತಿಳಿಸಿದ್ದಾರೆ.

Advertisement

ಸುದ್ದಿಗಾರರೊಂದಿಗೆ ಮಾತನಾಡಿದ ಡಾ. ಜಿ. ಪರಮೇಶ್ವರ್‌ ಅವರು, ಈಗಾಗಲೇ ಎಸ್‌ ಐಟಿ ಅಧಿಕಾರಿಗಳು ಭವಾನಿ ರೇವಣ್ಣ ಅವರಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಅವರು ಸಿಕ್ಕ ಕೂಡಲೇ ಬಂಧಿಸಲಾಗುವುದು, ನಂತರ ಕಾನೂನು ಪ್ರಕಾರ ಏನು ಕ್ರಮ ಆಗಲಿದೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ಸುಮಲತಾಗೆ ಕೈ ಕೊಟ್ಟು ಸಿ ಟಿ ರವಿ ಕೈ ಹಿಡಿದ ಬಿಜೆಪಿ !!

Advertisement

ಕಿಡ್ನ್ಯಾಪ್ ಪ್ರಕರಣದಲ್ಲಿ ಜಾಮೀನು ಸಿಗದೆ ಜೆಡಿಎಸ್ ಶಾಸಕ ಹೆಚ್​ಡಿ ರೇವಣ್ಣ ಪತ್ನಿ ಭವಾನಿ ರೇವಣ್ಣ ತಲೆಮರೆಸಿಕೊಂಡಿದ್ದಾರೆ. ಎಸ್​ಐಟಿ ಅಧಿಕಾರಿಗಳು ವಿಚಾರಣೆಗೆಂದು ಹೊಳೆನರಸೀಪುರದಲ್ಲಿರುವ ನಿವಾಸಕ್ಕೆ ತೆರಳಿದ ವೇಳೆ ಭವಾನಿ ರೇವಣ್ಣ ಅಲ್ಲಿರಲಿಲ್ಲ. 15 ದಿನಗಳ ಹಿಂದೆಯೇ ಕಣ್ಣು ತಪ್ಪಿಸಿ ಓಡಾಡುತ್ತಿದ್ದಾರೆ. ಈ ನಡುವೆ ಜಾಮೀನು ಅರ್ಜಿಗಾಗಿ ನಾಳೆ ಭವಾನಿ ರೇವಣ್ಣ ಅವರು ಹೈಕೋರ್ಟ್‌ ಗೆ ಅರ್ಜಿ ಸಲ್ಲಿಸಲಿದ್ದಾರೆ ಎನ್ನಲಾಗಿದೆ. ಬಂಧನದ ಭೀತಿಯಲ್ಲಿರುವ ಅವರು ನಾಳೆ ಜಾಮೀನು ಅರ್ಜಿ ಕೋರಿ ಹೈಕೋರ್ಟ್‌ ಗೆ ಅರ್ಜಿ ಸಲ್ಲಿಸಲಿದ್ದು, ಬಳಿಕ ಎಸ್‌ ಐಟಿ ಮುಂದೆ ವಿಚಾರಣೆಗೆ ಹಾಜರಾಗುವ ಸಾಧ್ಯತೆ ಎನ್ನಲಾಗಿದೆ.

ಇದನ್ನೂ ಓದಿ: ಒಕ್ಕಲಿಗರ ದೊಡ್ಡ ಮಟ್ಟದ ನಾಯಕನಾಗಲು ಡಿಸಿಎಂ ಹಲ್ಕಾ ಕೆಲಸ ಮಾಡಿದ್ದಾರೆ -ಬಸನಗೌಡ ಪಾಟೀಲ್ ಯತ್ನಾಳ್ 

Related News

Advertisement
Advertisement