For the best experience, open
https://m.hosakannada.com
on your mobile browser.
Advertisement

Arecanut : ಅಡಿಕೆಯನ್ನೇ ಅವಲಂಬಿಸಿರುವ ರೈತರಿಗೆ ಕಹಿ ಸುದ್ದಿ !!

Arecanut: ಅಡಕೆಗೆ ಎಲೆ ಚುಕ್ಕಿ ರೋಗ (Leaf Spot Disease) ಅನ್ನೋದು ಹೆಚ್ಚಾಗಿ ಕಾಡುತ್ತಿದೆ. ಹೀಗಾಗಿ ಹಲವಾರು ಕೃಷಿಕರು ಈ ರೋಗದಿಂದ ನಷ್ಟ ಅನುಭವಿಸಿದ್ದಾರೆ.
02:27 PM May 12, 2024 IST | ಸುದರ್ಶನ್
UpdateAt: 02:29 PM May 12, 2024 IST
arecanut   ಅಡಿಕೆಯನ್ನೇ ಅವಲಂಬಿಸಿರುವ ರೈತರಿಗೆ ಕಹಿ ಸುದ್ದಿ
Advertisement

Arecanut : ಅಡಿಕೆ ಕರಾವಳಿ ಹಾಗೂ ಮಲೆನಾಡಿನ ಸಾಂಪ್ರದಾಯಿಕ ಬೆಳೆ. ಆರಂಭದಲ್ಲಿ ಕೊಂಚ ಶ್ರಮ ಹಾಕಿದರೆ, ಚೆನ್ನಾಗಿ ಆರೈಕೆ ಮಾಡಿದರೆ ಜೀವನ ಪರ್ಯಂತ ಕೂತು ತಿನ್ನುವಂತಹ ಆದಾಯ ತರುವ ಬೆಳೆ ಇದು. ಇದರ ದುಪ್ಪಟ್ಟು ಲಾಭ ಕಂಡು ಇಂದು ಬಯಲು ಕರ್ನಾಟಕ(Karnataka) ದಲ್ಲೂ ಅಡಿಕೆ ಬೆಳೆ ಬೆಳೆಯುತ್ತಿದ್ದಾರೆ. ಅಲ್ಲದೆ ಎಷ್ಟೋ ಕುಟುಂಬಗಳು ಅಡಿಕೆಯನ್ನೇ ನಂಬಿ ಬದುಕುತ್ತಿವೆ. ಇದನ್ನೇ ಅವಲಂಬಿಸಿವೆ. ಆದರೀಗ ಇಂತವರಿಗೆ ಕಹಿ ಸುದ್ದಿ ಎದುರಾಗಿದೆ.

Advertisement

ಅಡಿಕೆ(Arecanut)ಯಿಂದ ಎಷ್ಟು ಲಾಭ ಪಡೆಯುತ್ತೇವೆಯೋ ಅದಕ್ಕೆ ಅಷ್ಟೇ ಶ್ರಮ ಹಾಕಬೇಕು. ಸ್ವಲ್ಪ ಉದಾಸೀನ ಮಾಡಿದರೂ ಕೈಗೆ ಬಂದ ತುತ್ತು ಬಾಯಿಗೆ ಬರದಂತೆ ಆಗುತ್ತದೆ. ಈಗಂತೂ ಹೊಸ ಹೊಸ ರೋಗಗಳು ಅಡಿಕೆಯನ್ನು ಎಡೆಬಿಡದೆ ಕಾಡುತ್ತಿವೆ. ಈ ರೋಗಗಳ ತಾಪತ್ರಯದಿಂದ ರೈತರು ಕಂಗಾಲಾಗಿ ಹೋಗಿದ್ದಾರೆ. ಅದರಲ್ಲೂ ಈ ಎಲೆ ಚುಕ್ಕೆ ರೋಗ ಅಡಿಕೆ ಬೆಳೆಗಾರರ ನಿದ್ದೆಗೆಡಿಸಿದೆ.

ಹೌದು, ಇಂದು ಬದಲಾದ ಹವಮಾನದಿಂದಾಗೆ ಅಡಕೆಗೆ ಎಲೆ ಚುಕ್ಕಿ ರೋಗ (Leaf Spot Disease) ಅನ್ನೋದು ಹೆಚ್ಚಾಗಿ ಕಾಡುತ್ತಿದೆ. ಹೀಗಾಗಿ ಹಲವಾರು ಕೃಷಿಕರು ಈ ರೋಗದಿಂದ ನಷ್ಟ ಅನುಭವಿಸಿದ್ದಾರೆ. ಅಡಿಕೆಯ ಇಳುವರಿ ಇದರಿಂದ ಕುಸಿದಿದ್ದು ಹಿಂಗಾರ ಉದರುವಿಕೆ ಹೆಚ್ಚಾಗಿದೆ. ಈ ಸಮಸ್ಯೆ ಕರಾವಳಿ ಭಾಗದಲ್ಲಿ ಹೆಚ್ಚಾಗಿ ಕಂಡು ಬರಲಿದೆ. ಹಾಗಾಗಿ ಕರಾವಳಿ ಭಾಗದ ರೈತರಿಗೆ ಈ ರೋಗದ ಸಮಸ್ಯೆ ಮಳೆಗಾಲದಲ್ಲಿ ಹೆಚ್ಚಾಗಿ ಕಾಡುತ್ತಿರುತ್ತದೆ.

Advertisement

ಇದನ್ನೂ ಓದಿ: ಭಾರತದ ವಾಹನ ನಂಬರ್‌ ಪ್ಲೇಟ್‌ಗಳಲ್ಲಿ ಹಲವು ಸೀಕ್ರೆಟ್ ಗಳಿವೆಯಂತೆ! ನಿಮಗದು ಗೊತ್ತಾ? 

ಏನಿದು ಅಡಕೆ ಎಲೆ ಚುಕ್ಕಿ ರೋಗ?
ಅಡಿಕೆ ಎಲೆ ಚುಕ್ಕೆ ರೋಗಕ್ಕೆ ತುತ್ತಾದ ಮರಗಳ ಸೋಗೆಗಳ ಮೇಲ್ಭಾಗದಲ್ಲಿ ಹಳದಿ ಮತ್ತು ಕಪ್ಪು ಚುಕ್ಕೆ ಹುಟ್ಟಿಕೊಳ್ಳುತ್ತವೆ. ಈ ಚಿಕ್ಕ ಚಿಕ್ಕ ಚುಕ್ಕೆಗಳು ಒಂದಕ್ಕೊಂದು ಕೂಡಿಕೊಳ್ಳುತ್ತಾ ಇಡೀ ಅಡಕೆ ಮರದ ಸೋಗೆಗಳಿಗೆ ವ್ಯಾಪಿಸುತ್ತವೆ. ಇದೇ ಅಡಕೆ ಮರದ ಅವನತಿಗೆ ಕಾರಣವಾಗುತ್ತದೆ. ಅಡಿಕೆ ಸೋಗೆಗಳು ಸೊರಗಿ, ಒಣಗಿ ಅಡಕೆ ಮರ ಬಲಹೀನಗೊಳ್ಳುತ್ತಾ ಹೋಗುತ್ತದೆ. ಅಡಕೆ ಇಳುವರಿ ಕಡಿಮೆಯಾಗುತ್ತದೆ

ನಿವಾರಣೆ ಹೇಗೆ?
* ಮುಂಗಾರು ಮಳೆ ಆರಂಭವಾಗುವ ಮೊದಲು ರೈತರು ಬೋರ್ಡೋ ಸಿಂಪಡಣೆ ಮಾಡಿದರೆ ಉತ್ತಮ.
* ರೈತರು ರಸಾಯನಿಕ ಗೊಬ್ಬರದ ಮೊದಲು ಸಾವಯವ ಗೊಬ್ಬರ ಬಳಸಬೇಕು.
* ಈ ರೋಗ ಆರಂಭವಾದ ಲಕ್ಷಣ ಕಂಡು ಬಂದರೆ ಶಿಲೀಂದ್ರ ನಾಶಕ ಸಿಂಪಡಣೆ ಮಾಡಬೇಕು.

ತೋಟಗಾರಿಕೆ ಇಲಾಖೆಯಿಂದಲೂ ಸಹಾಯ:
ಈ ಕುರಿತು ವಿಶೇಷವಾಗಿ ತೋಟಗಾರಿಕಾ ಇಲಾಖೆಯು ಮುತುವರ್ಜಿ ವಹಿಸಿದ್ದು ಓರ್ವ ರೈತನಿಗೆ ಒಂದು ಹೆಕ್ಟೇರ್​ಗೆ ಉಪಯೋಗವಾಗುವಷ್ಟು ಔಷಧಿಯನ್ನು ಒದಗಿಸುತ್ತಿದೆ.
ಮೊದಲನೇ ಕಂತಿನಲ್ಲಿ 20 ಲಕ್ಷ ಯುನಿಟ್​ನಷ್ಟು ವಿತರಣೆಗೆ ಮುಂದಾಗಿದ್ದು, ಈಗಾಗಲೇ 90 ಪ್ರತಿಶತ ರೈತರಿಗೆ ಔಷಧಿಯು ತಲುಪಿದೆ. ಉತ್ತರ ಕನ್ನಡಕ್ಕೆ 63 ಲಕ್ಷ ಯುನಿಟ್​ನಷ್ಟು ಔಷಧಿಯನ್ನು ನೀಡಲು ಸೂಚಿಸಲಾಗಿದೆ.

ಇದನ್ನೂ ಓದಿ: Rohit Sharma: ರೋಹಿತ್ ಶರ್ಮಾಗೆ ಇದು ಕೊನೆಯ IPL ಸೀಸನ್ ! : ಕೆಕೆಆರ್ ಕೋಚ್ ಜೊತೆ ರೋಹಿತ್ ಶರ್ಮಾ ಹೇಳಿದ್ದಾದರೂ ಏನು? : ಇಲ್ಲಿ ನೋಡಿ

Advertisement
Advertisement
Advertisement