ಮುಖಪುಟಸುದ್ದಿರಾಜಕೀಯಅಂಕಣಮನರಂಜನೆಸಿನೆಮಾ-ಕ್ರೀಡೆಲೈಫ್ ಸ್ಟೈಲ್ಕ್ರೀಡೆ
Advertisement

Bank Job: ಬ್ಯಾಂಕ್ ನಲ್ಲಿ ಉದ್ಯೋಗವಕಾಶ; 'IBPS' ನಿಂದ ಆರು ಸಾವಿರಕ್ಕೂ ಹೆಚ್ಚು ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ!

Bank Job: ಬ್ಯಾಂಕಿಂಗ್ ಪರ್ಸನಲ್ ಸೆಲೆಕ್ಷನ್ (IBPS) 2025-2026ರ ಸಾಮಾನ್ಯ ನೇಮಕಾತಿ ಪ್ರಕ್ರಿಯೆ (CRP)-XIV ಅಧಿಸೂಚನೆಯನ್ನ ಬಿಡುಗಡೆ ಮಾಡಿದ್ದು, IBPS ಕ್ಲರ್ಕ್ ಅಧಿಸೂಚನೆಯ ಮೂಲಕ ಒಟ್ಟು 6128 ಹುದ್ದೆಗಳನ್ನ ಭರ್ತಿ ಮಾಡಲಾಗುತ್ತದೆ.
02:44 PM Jul 04, 2024 IST | ಕಾವ್ಯ ವಾಣಿ
UpdateAt: 02:44 PM Jul 04, 2024 IST
Advertisement

Bank Job: ಬ್ಯಾಂಕ್ ನಲ್ಲಿ ಉದ್ಯೋಗ (Bank Job)  ಪಡೆಯಲು ಇಲ್ಲಿದೆ ಒಂದು ಸುವರ್ಣ ಅವಕಾಶ. ಹೌದು, ಇನ್‌ಸ್ಟಿಟ್ಯೂಟ್ ಆಫ್ ಬ್ಯಾಂಕಿಂಗ್ ಪರ್ಸನಲ್ ಸೆಲೆಕ್ಷನ್ (IBPS) 2025-2026ರ ಸಾಮಾನ್ಯ ನೇಮಕಾತಿ ಪ್ರಕ್ರಿಯೆ (CRP)-XIV ಅಧಿಸೂಚನೆಯನ್ನ ಬಿಡುಗಡೆ ಮಾಡಿದ್ದು, IBPS ಕ್ಲರ್ಕ್ ಅಧಿಸೂಚನೆಯ ಮೂಲಕ ಒಟ್ಟು 6128 ಹುದ್ದೆಗಳನ್ನ ಭರ್ತಿ ಮಾಡಲಾಗುತ್ತದೆ.

Advertisement

School Rules: ರಾಜ್ಯದ ಶಾಲಾ ಕಾಲೇಜುಗಳಲ್ಲಿ ವಿದ್ಯಾರ್ಥಿಗಳು, ಶಿಕ್ಷಕರು ಸೇರಿದಂತೆ ಮೊಬೈಲ್ ಬಳಕೆ ಸಂಪೂರ್ಣ ನಿಷೇಧ: ರಾಜ್ಯ ಸರ್ಕಾರ ಆದೇಶ!

Advertisement

ಹೌದು, ದೇಶಾದ್ಯಂತ ಸಾರ್ವಜನಿಕ ವಲಯದ ಬ್ಯಾಂಕ್‌ಗಳಲ್ಲಿ ಕ್ಲರ್ಕ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕಂಪ್ಯೂಟರ್ ಜ್ಞಾನದೊಂದಿಗೆ ಯಾವುದೇ ಪದವಿಯಲ್ಲಿ ಉತ್ತೀರ್ಣರಾಗಿದ್ದು, ಜುಲೈ 1, 2024 ರಂತೆ ಅಭ್ಯರ್ಥಿಗಳ ವಯಸ್ಸು 20 ರಿಂದ 28 ವರ್ಷಗಳ ನಡುವೆ ಇರಬೇಕು. ಅಂದರೆ ಅರ್ಜಿದಾರರು ಜುಲೈ 2, 1996 ಮತ್ತು ಜುಲೈ 1, 2004ರ ನಡುವೆ ಜನಿಸಿದವರಾಗಿರಬೇಕು.

ಅರ್ಜಿ ಶುಲ್ಕ:

ಸಾಮಾನ್ಯ ಅಭ್ಯರ್ಥಿಗಳಿಗೆ ರೂ. 850/-

SC, ST, PWD, EMM, DESM ಅಭ್ಯರ್ಥಿಗಳಿಗೆ ರೂ.175/-

ಪರೀಕ್ಷೆಯ ವಿಧಾನ:

IBPS ಕ್ಲರ್ಕ್ ಪ್ರಿಲಿಮ್ಸ್ ಪರೀಕ್ಷೆಯು 100 ಅಂಕಗಳ 100 ಬಹು ಆಯ್ಕೆ ಪ್ರಶ್ನೆಗಳನ್ನ ಒಳಗೊಂಡಿದೆ. ಇಂಗ್ಲಿಷ್ ಭಾಷೆ, ಸಂಖ್ಯಾ ಸಾಮರ್ಥ್ಯ ಮತ್ತು ರೀಸನಿಂಗ್ ಎಬಿಲಿಟಿ ವಿಭಾಗಗಳಿಂದ ಪ್ರಶ್ನೆಗಳು ಬರುತ್ತವೆ. ಮುಖ್ಯ ಪರೀಕ್ಷೆಯು ಒಟ್ಟು 200 ಅಂಕಗಳಿಗೆ ಎರಡು ಗಂಟೆಗಳ ಅವಧಿಯಾಗಿರುತ್ತದೆ.

ಪ್ರಮುಖ ದಿನಾಂಕಗಳು:

ಆನ್‌ಲೈನ್ ಅಪ್ಲಿಕೇಶನ್‌ಗಳಿಗೆ ಪ್ರಾರಂಭ ದಿನಾಂಕ : ಜುಲೈ 01,2024

ಆನ್‌ಲೈನ್ ಅಪ್ಲಿಕೇಶನ್‌ಗಳಿಗೆ ಕೊನೆಯ ದಿನಾಂಕ : ಜುಲೈ 21, 2024

ಪೂರ್ವ ಪರೀಕ್ಷೆಯ ತರಬೇತಿಯ ದಿನಾಂಕಗಳು : ಆಗಸ್ಟ್ 12 ರಿಂದ 17 ರವರೆಗೆ

ಆನ್‌ಲೈನ್ ಪೂರ್ವಭಾವಿ ಪರೀಕ್ಷೆಗಳು : ಆಗಸ್ಟ್ 24, 25, 31 ರಂದು

ಪೂರ್ವಭಾವಿ ಪರೀಕ್ಷೆಯ ಫಲಿತಾಂಶ ಬಿಡುಗಡೆ ದಿನಾಂಕ : ಸೆಪ್ಟೆಂಬರ್ ತಿಂಗಳಲ್ಲಿ

ಆನ್‌ಲೈನ್ ಮುಖ್ಯ ಪರೀಕ್ಷೆಗಳು : ಅಕ್ಟೋಬರ್ 13, 2024.

ಅಭ್ಯರ್ಥಿಯ ಅಂತಿಮ ಆಯ್ಕೆಯು ಪ್ರಾಥಮಿಕ ಮತ್ತು ಮುಖ್ಯ ಪರೀಕ್ಷೆಯ ಆಧಾರದ ಮೇಲೆ ಆಗಿರುತ್ತದೆ .

Hyderabad: ಹೋಮ್‌ವರ್ಕ್‌ ಮಾಡ್ತಿದ್ದ 5 ವರ್ಷದ ಯುಕೆಜಿ ಮಗುವಿನ ಪ್ರಾಣ ತೆಗೆದ ಪೆನ್‌

Advertisement
Advertisement