ಮುಖಪುಟಸುದ್ದಿರಾಜಕೀಯಅಂಕಣಮನರಂಜನೆಸಿನೆಮಾ-ಕ್ರೀಡೆಲೈಫ್ ಸ್ಟೈಲ್ಕ್ರೀಡೆ
Advertisement

Kota Shrinivas Poojary: ಕಂಬಳದ ನಿರೂಪಣೆಯಲ್ಲಿ ಅಂದು ಜಾಣತನ ಮೆರೆದಿದ್ದ ಅಪರ್ಣಾ- ಇಂದು ನೆನಪಿನ ಬುತ್ತಿ ಬಿಚ್ಚಿಟ್ಟ ಕೋಟ !!

Kota Shrinivas Poojary: ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಸಂಸದರಾದ ಕೋಟ ಶ್ರೀನಿವಾಸ್ ಪೂಜಾರಿ ಅವರು ಕಂಬಳ ಕಾರ್ಯಕ್ರಮದ ನಿರೂಪಣೆಯಲ್ಲಿ ಅಪರ್ಣಾ ಮೆರೆದ ಜಾಣ್ಮೆಯನ್ನು ನೆನೆದಿದ್ದಾರೆ.
07:36 AM Jul 13, 2024 IST | ಸುದರ್ಶನ್
UpdateAt: 07:36 AM Jul 13, 2024 IST
Advertisement

Kota Shrinivas Poojary: ಅಪರ್ಣಾ(Aparna) ಸಾವು ಇಡೀ ಕನ್ನಡಿಗರ ಮನ ಕಲುಕಿದೆ. ಮುಗ್ಧವಾದ, ಸುಂದರವಾದ ಆ ಮೊಗವನ್ನು, ಅದ್ಭುತವಾದ ಆ ಧ್ವನಿಯನ್ನು ಕನ್ನಡಿಗರು ಎಂದೂ ಮರೆಯರು. ಈ ಸಾವು ಇಡೀ ಕನ್ನಡಿಗರ ಮನವನ್ನು ನೇರವಾಗಿ ಹಿಸುಕಿಬಿಟ್ಟಿದೆ. ಬಹುಶಃ ಪುನೀತ್ ರಾಜ್ ಕುಮಾರ್ ಸಾವಿನ ಬಳಿಕ ಇಡೀ ನಾಡಿನ ಜನ ಮತ್ತೆ ಕಂಬನಿಕರೆದದ್ದೇ ಈ ಸಾವಿಗೆ.

Advertisement

ನಿರೂಪಣೆಗೆ ಹೊಸ ಭಾಷ್ಯ ಬರೆದವರೇ ಅಪರ್ಣಾ ಎಂಬುದು ಎಲ್ಲರ ಮಾತು, ಅದು ನಿಜ ಕೂಡ. ಅನುಶ್ರೀ ಹೇಳಿದಂತೆ ಅಪರ್ಣಾ ಇಲ್ಲದೆ ನಿರೂಪಣೆ ಅಪೂರ್ಣವೇ. ಏನೇ ಇರಲಿ ಜೊತೆಗಿರದ ಆ ಜೀವ ಎಂದೆಂದಿಗೂ ಜೀವಂತ ಬಿಡಿ. ಇದೀಗ ಅಪರ್ಣಾ ಅವರ ನಿರೂಪಣೆಯ ಕೆಲವು ವಿಶೇಷ ಸಂದರ್ಭಗಳು ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗುತ್ತಿವೆ. ಕೆಲವರು ತಾವು ನೋಡಿ ನಿರೂಪಣೆ ಬಗ್ಗೆ ಹೇಳಿ ಅಪರ್ಣಾರನ್ನು ನೆನೆಯುತ್ತಿದ್ದಾರೆ. ಅಂತೆಯೇ ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಸಂಸದರಾದ ಕೋಟ ಶ್ರೀನಿವಾಸ್ ಪೂಜಾರಿ(Kota Shrinivas Poojary) ಅವರು ಕಂಬಳ(Kambala) ಕಾರ್ಯಕ್ರಮದ ನಿರೂಪಣೆಯಲ್ಲಿ ಅಪರ್ಣಾ ಮೆರೆದ ಜಾಣ್ಮೆಯನ್ನು ನೆನೆದಿದ್ದಾರೆ.

ಹೌದು, ಅಪರ್ಣಾ ಅವರು ಕಂಬಳ ಕಾರ್ಯಕ್ರಮದ ನಿರೂಪಣೆ ವೇಳೆ ಮೆರೆದ ಜಾಣ್ಮೆಯನ್ನು ಕೋಟರು ನೆನೆದಿದ್ದಾರೆ. ಈ ಬಗ್ಗೆ ತಮ್ಮ ನೆನಪಿನ ಬುತ್ತಿ ಬಿಚ್ಚಿಟ್ಟ ಅವರು 'ನಮ್ಮ ಸರ್ಕಾರ ಇದ್ದಾಗ ಮುಖ್ಯಮಂತ್ರಿಗಳು ಭಾಗವಹಿಸುವ ಎಲ್ಲಾ ಕಾರ್ಯಕ್ರಮಗಳ ನಿರೂಪಣೆಗೆ ಅವರೇ ಬರುತ್ತಿದ್ದರು. ಹೀಗೆ ಕಂಬಳ ಕಾರ್ಯಕ್ರಮಕ್ಕೆ ಸಿಎಂ ಬಂದಾಗ ಆಗ ಅಪರ್ಣಾ ಅವರದ್ದೇ ನಿರೂಪಣೆ. ನಿರೂಪಣೆ ಮಾಡುವಾಗ ಅವರು ಕಂಬಳದ ಗುರಿಕಾರ ಪ್ರಶಸ್ತಿ ಸ್ವೀಕರಿಸಲು ಬರಬೇಕು ಎಂದು ಹೇಳಿದ್ದರು. ಇದು ಎಲ್ಲರಿಗೂ ಅಚ್ಚರಿ ಉಂಟುಮಾಡಿತು. ಯಾಕೆಂದರೆ ಕಂಬಳದ ಬಗ್ಗೆ ಅಪರ್ಣಾಗೆ ಕಲ್ಪನೆ ಇರಲಿಲ್ಲ. ಆದರೆ ವಿಚಾರವನ್ನು ತಿಳಿದುಕೊಂಡು ನಿರೂಪಣೆ ಮಾಡುತ್ತಿದ್ದರು'

Advertisement

ಅಲ್ಲದೆ ಕನ್ನಡದ ಕಾರ್ಯಕ್ರಮಕ್ಕೆ ಬಂದು ಯಜಮಾನರು ಕಂಬಳ ಕೋಣ ಓಡಿಸುವವರು ಸ್ಥಳದಲ್ಲಿದ್ದ ಎಲ್ಲರನ್ನು ಮಾತನಾಡಿಸಿ, ವಿಚಾರಗಳನ್ನು ಸಂಗ್ರಹಿಸಿ, ವೇದಿಕೆಯಲ್ಲಿ ನಿಂತು ಆಳ ಅಧ್ಯಯನ ಮಾಡಿ ಅರಿತವರಂತೆ ಮಾತನಾಡುವ ಚಾಕಚಕ್ಯತೆ ಅಪರ್ಣಾಗೆ ಇತ್ತು ಎಂದು ಕೋಟ ಶ್ರೀನಿವಾಸ ಪೂಜಾರಿ ಅವರು ಅಪರ್ಣಾ ಅವರನ್ನು ನೆನೆದರು.

Delhi: ಬಾಲಕನಿಗೆ ಶ್ವಾಸಕೋಶ ಸಮಸ್ಯೆ ತಂದಿಟ್ಟ ಪಾರಿವಾಳ ಸವಾಸ – ಜನರೇ ಹುಷಾರ್ ಎನ್ನುತ್ತಿದ್ದಾರೆ ವೈದ್ಯರು !!

Related News

Advertisement
Advertisement