ಮುಖಪುಟಸುದ್ದಿರಾಜಕೀಯಅಂಕಣಮನರಂಜನೆಸಿನೆಮಾ-ಕ್ರೀಡೆಲೈಫ್ ಸ್ಟೈಲ್ಕ್ರೀಡೆ
Advertisement

Anshuman Singh: ಸ್ಮೃತಿ ವಿರುದ್ಧ ಅಂಶುಮಾನ್‌ ಸಿಂಗ್‌ ಪೋಷಕರ ಅಸಮಾಧಾನ; ಇಲ್ಲಿದೆ ಕಾರಣ

Anshuman Singh: ಕೀರ್ತಿ ಚಕ್ರವನ್ನು ತಮ್ಮ ಸೊಸೆ ಸ್ಮೃತಿ  ಶೌರ್ಯ ಪದಕ ಮತ್ತು ಇತರ ನೆನಪುಗಳನ್ನು ತನ್ನ ತವರುಮನೆಗೆ ತೆಗೆದುಕೊಂಡು ಹೋಗಿದ್ದಾಳೆ ಎಂದು ಅಂಶುಮಾನ್ ಸಿಂಗ್ ಪೋಷಕರು ಆರೋಪಿಸಿದ್ದಾರೆ.
07:44 AM Jul 13, 2024 IST | ಕಾವ್ಯ ವಾಣಿ
UpdateAt: 07:44 AM Jul 13, 2024 IST
Advertisement

Anshuman Singh: ಸಿಯಾಚಿನ್‌ನಲ್ಲಿ ಕಳೆದ ವರ್ಷ ಜುಲೈನಲ್ಲಿ ಸಂಭವಿಸಿದ ದೊಡ್ಡ ಬೆಂಕಿಯಿಂದ ಜನರನ್ನು ರಕ್ಷಿಸುವ ವೇಳೆ ಸೇನಾ ವೈದ್ಯಕೀಯ ದಳದ ಕ್ಯಾಪ್ಟನ್ ಅಂಶುಮಾನ್ ಸಿಂಗ್ (Anshuman Singh) ಸಾವನ್ನಪ್ಪಿದ್ದರು. ಈ ಹಿನ್ನೆಲೆ ಜುಲೈ 5ರಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಂದ ಭಾರತದ ಎರಡನೇ ಅತ್ಯುನ್ನತ ಶಾಂತಿಕಾಲದ ಶೌರ್ಯ ಪ್ರಶಸ್ತಿಯನ್ನು ಅಂಶುಮಾನ್ ಸಿಂಗ್ ಪತ್ನಿ ಸ್ಮೃತಿ ಸ್ವೀಕರಿಸಿದ್ದರು.

Advertisement

Power TV: ಹೈಕೋರ್ಟ್ ನೀಡಿದ್ದ ಪವರ್ ಟಿ ವಿ ನಿರ್ಭಂಧಕ್ಕೆ ಸುಪ್ರೀಂ ಕೋರ್ಟ್ ತಡೆ – ಇದು ರಾಜಕೀಯ ದ್ವೇಷ ಎಂದ ನ್ಯಾಯಮೂರ್ತಿ

Advertisement

ಆದರೆ ರಾಷ್ಟ್ರಪತಿ ದ್ರೌಪದಿ ಮುರ್ಮು ಕ್ಯಾಪ್ಟನ್ ಅಂಶುಮಾನ್ ಸಿಂಗ್ ಅವರಿಗೆ ಮರಣೋತ್ತರವಾಗಿ ನೀಡಿದ ಕೀರ್ತಿ ಚಕ್ರವನ್ನು ತಮ್ಮ ಸೊಸೆ ಸ್ಮೃತಿ  ಶೌರ್ಯ ಪದಕ ಮತ್ತು ಇತರ ನೆನಪುಗಳನ್ನು ತನ್ನ ತವರುಮನೆಗೆ ತೆಗೆದುಕೊಂಡು ಹೋಗಿದ್ದಾಳೆ ಎಂದು ಅಂಶುಮಾನ್ ಸಿಂಗ್ ಪೋಷಕರು ಆರೋಪಿಸಿದ್ದಾರೆ.

ಮರಣೋತ್ತರವಾಗಿ ಕೀರ್ತಿ ಚಕ್ರ ಪಡೆದ ಕ್ಯಾಪ್ಟನ್ ಅಂಶುಮಾನ್ ಸಿಂಗ್ ಅವರ ಪೋಷಕರು, ನಮ್ಮ ಸೊಸೆ ಸ್ಮೃತಿ ಈಗ ತವರುಮನೆಯಲ್ಲಿದ್ದಾಳೆ. ನಮ್ಮ ಮಗ ಸಾವನ್ನಪ್ಪಿದ ನಂತರ ಆಕೆ ತನ್ನ ಬಟ್ಟೆಯ ಜೊತೆಗೆ ನಮ್ಮ ಮಗನ ಬಟ್ಟೆ, ಆತನ ವಸ್ತುಗಳನ್ನೆಲ್ಲ ತೆಗೆದುಕೊಂಡು ತವರುಮನೆಯಲ್ಲಿ ವಾಸವಾಗಿದ್ದಾಳೆ. ಈಗ ಸರ್ಕಾರ ಕೊಟ್ಟಿರುವ ಕೀರ್ತಿ ಚಕ್ರ ಪ್ರಶಸ್ತಿಯನ್ನು ಕೂಡ ಆಕೆಯೇ ತೆಗೆದುಕೊಂಡು ಹೋಗಿದ್ದಾಳೆ. ನಾವು ಆ ಪ್ರಶಸ್ತಿಯನ್ನು ಮುಟ್ಟಿಯೂ ನೋಡಿಲ್ಲ ಎಂದು ಬೇಸರ ಹೊರಹಾಕಿದ್ದಾರೆ.

ಈ ಬಗ್ಗೆ ಮಾಹಿತಿ ನೀಡಿರುವ ಕ್ಯಾಪ್ಟನ್ ಅಂಶುಮಾನ್ ಸಿಂಗ್ ಅವರ ತಂದೆ ರವಿ ಪ್ರತಾಪ್ ಸಿಂಗ್,.“ಹುತಾತ್ಮರ ಪತ್ನಿಯೊಂದಿಗೆ ಪೋಷಕರು ಕೂಡ ಈ ಸೌಲಭ್ಯಗಳಿಗೆ ಅರ್ಹರಾಗಲು ಸಹಾಯದ ಮೊತ್ತ ಮತ್ತು ಸರ್ಕಾರವು ಒದಗಿಸುವ ಇತರ ಸೌಲಭ್ಯಗಳಿಗೆ ಸಂಬಂಧಿಸಿದಂತೆ ನಿಯಮಗಳನ್ನು ತಿದ್ದುಪಡಿ ಮಾಡಬೇಕು” ಎಂದು ಪ್ರತಾಪ್ ಸಿಂಗ್ ಇಂಡಿಯಾ ಟುಡೇಗೆ ನೀಡಿರುವ ಸಂದರ್ಶನದಲ್ಲಿ ತಿಳಿಸಿದ್ದಾರೆ. ತಮ್ಮ ಮಗನ ನೆನಪುಗಳನ್ನು ಮೆಲುಕು ಹಾಕಲು ಸರ್ಕಾರವು ಪತ್ನಿಯ ಜೊತೆಗೆ ಪೋಷಕರಿಗೆ ಕೀರ್ತಿ ಚಕ್ರದಂತಹ ಮಿಲಿಟರಿ ಗೌರವದ ಇನ್ನೊಂದು ಪ್ರತಿಯನ್ನು ನೀಡಬೇಕು ಎಂದು ಅವರು ಒತ್ತಾಯಿಸಿದ್ದಾರೆ.

“ನಮ್ಮ ಮಗ ಅಂಶುಮಾನ್‌ಗೆ ಕೀರ್ತಿ ಚಕ್ರ ನೀಡಿದಾಗ ಸ್ಮೃತಿ ಜೊತೆಗೆ ನನ್ನ ಹೆಂಡತಿ ಕೂಡ ಗೌರವ ಸ್ವೀಕರಿಸಲು ತೆರಳಿದ್ದರು. ರಾಷ್ಟ್ರಪತಿಗಳು ನನ್ನ ಮಗನ ತ್ಯಾಗಕ್ಕೆ ಕೀರ್ತಿ ಚಕ್ರವನ್ನು ನೀಡಿ ಗೌರವಿಸಿದರು. ಆದರೆ ನಾನು ಅದನ್ನು ಒಮ್ಮೆ ಕೂಡ ಆ ಪ್ರಶಸ್ತಿಯನ್ನು ಮುಟ್ಟಲು ಸಾಧ್ಯವಾಗಲಿಲ್ಲ” ಎಂದು ರವಿ ಪ್ರತಾಪ್ ಸಿಂಗ್ ಹೇಳಿದ್ದಾರೆ.

ಪ್ರಶಸ್ತಿ ಪ್ರದಾನ ಸಮಾರಂಭವನ್ನು ನೆನಪಿಸಿಕೊಂಡ ಕ್ಯಾಪ್ಟನ್ ಅಂಶುಮಾನ್ ಸಿಂಗ್ ಅವರ ತಾಯಿ ಮಂಜು ಸಿಂಗ್, ಜುಲೈ 5ರಂದು ರಾಷ್ಟ್ರಪತಿ ಭವನದಲ್ಲಿ ಸ್ಮೃತಿ ಜೊತೆಗೆ ನಾನು ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾಗವಹಿಸಿದ್ದೆ. ನಾವು ಕಾರ್ಯಕ್ರಮದಿಂದ ಹೊರಡುವಾಗ ಸೇನಾಧಿಕಾರಿಗಳ ಒತ್ತಾಯದ ಮೇರೆಗೆ ನಾನು ಫೋಟೋಗಾಗಿ ನಾನು ಕೀರ್ತಿ ಚಕ್ರವನ್ನು ಹಿಡಿದಿದ್ದೆ. ಆದರೆ, ಅದರ ನಂತರ ಸ್ಮೃತಿ ನನ್ನ ಕೈಯಿಂದ ಕೀರ್ತಿ ಚಕ್ರವನ್ನು ತೆಗೆದುಕೊಂಡು ಹೋದಳು ಎಂದಿದ್ದಾರೆ.

Kota Shrinivas Poojary: ಕಂಬಳದ ನಿರೂಪಣೆಯಲ್ಲಿ ಅಂದು ಜಾಣತನ ಮೆರೆದಿದ್ದ ಅಪರ್ಣಾ- ಇಂದು ನೆನಪಿನ ಬುತ್ತಿ ಬಿಚ್ಚಿಟ್ಟ ಕೋಟ !!

Related News

Advertisement
Advertisement