ಮುಖಪುಟಸುದ್ದಿರಾಜಕೀಯಅಂಕಣಮನರಂಜನೆಸಿನೆಮಾ-ಕ್ರೀಡೆಲೈಫ್ ಸ್ಟೈಲ್ಕ್ರೀಡೆ
Advertisement

Hubballi: ಹುಬ್ಬಳ್ಳಿಯಲ್ಲಿ ನೇಹಾ ಹತ್ಯೆ ಮಾದರಿಯಲ್ಲೇ ಮತ್ತೊಂದು ಹತ್ಯೆ !!

Hubballi: ಹುಬ್ಬಳ್ಳಿಯಲ್ಲಿ ನೇಹಾ ಹತ್ಯೆಯ ರೀತಿಯಲ್ಲೇ ಮತ್ತೊಂದು ಭೀಕರ ಹತ್ಯೆ ನಡೆದಿದೆ. ಇದು ಹುಬ್ಬಳ್ಳಿ ಜನತೆಯನ್ನೇ ಬೆಚ್ಚಿಬೀಳಿಸಿದೆ.
12:10 PM May 15, 2024 IST | ಸುದರ್ಶನ್
UpdateAt: 12:12 PM May 15, 2024 IST
Advertisement

Hubballi: ದೇಶವನ್ನೇ ಬೆಚ್ಚಿಬೀಳಿಸಿದ್ದ ಹುಬ್ಬಳ್ಳಿಯ ನೇಹಾ ಹಿರೇಮಠ್ ಹತ್ಯೆ ಪ್ರಕರಣ ಮಾಸುವ ಮುನ್ನವೇ ಇದೀಗ ಅದೇ ಹುಬ್ಬಳ್ಳಿಯಲ್ಲಿ ನೇಹಾ ಹತ್ಯೆಯ ರೀತಿಯಲ್ಲೇ ಮತ್ತೊಂದು ಭೀಕರ ಹತ್ಯೆ ನಡೆದಿದೆ. ಇದು ಹುಬ್ಬಳ್ಳಿ ಜನತೆಯನ್ನೇ ಬೆಚ್ಚಿಬೀಳಿಸಿದೆ.

Advertisement

ಇದನ್ನೂ ಓದಿ: Astrology Tips: ಕಣ್ಣಿನ ಆಕಾರದ ಮೂಲಕ ತಿಳಿಯಬಹುದು ವ್ಯಕ್ತಿತ್ವವನ್ನು! ಇಲ್ಲಿದೆ ನೋಡಿ ಆಸ್ಟ್ರೋ ಟಿಪ್ಸ್

ಹೌದು, ಕಾಂಗ್ರೆಸ್‌ ಸದಸ್ಯನ ಪುತ್ರಿ ನೇಹಾ ಹಿರೇಮಠ(Neha Hiremut) ಕೊಲೆ ಪ್ರಕರಣ ಮಾಸುವ ಮುನ್ನವೇ ಅದೇ ರೀತಿಯ ಮತ್ತೊಂದು ಘಟನೆ ಹುಬ್ಬಳ್ಳಿಯ ಬೆಂಡಿಗೇರಿ(Bendigeri) ಪೊಲೀಸ್ ಠಾಣಾ ವ್ಯಾಪ್ತಿಯ ವೀರಾಪುರ ಓಣಿಯಲ್ಲಿ ಬುಧವಾರ (ಮೇ 15) ನಡೆದಿದೆ. ಕೊಲೆಯಾದ ಯುವತಿಯನ್ನು ಅಂಜಲಿ ಅಂಬಿಗೇರ(Anjali Ambigera) (20) ಎಂದು ಗುರುತಿಸಲಾಗಿದ್ದು, ಯುವತಿಯನ್ನು ಬರ್ಬರವಾಗಿ ಹತ್ಯೆ ಮಾಡಿದ ಆರೋಪಿ ಸದ್ಯ ತಲೆಮಾರಿಸಿಕೊಂಡಿದ್ದಾನೆ. ಪೊಲೀಸರು ಆರೋಪಿಗಾಗಿ ಶೋಧ ನಡೆಸುತ್ತಿದ್ದಾರೆ.

Advertisement

ಇದನ್ನೂ ಓದಿ: Janhvi Kapoor: ಸೀಕ್ರೆಟ್ ಒಂದನ್ನು ರಿವೀಲ್ ಮಾಡೇ ಬಿಟ್ರು ಬಾಲಿವುಡ್ ಬ್ಯೂಟಿ!

ಕೊಲೆ ಆರೋಪಿ, ಪ್ರಿಯಕರನ ಹೆಸರು ವಿಶ್ವ ಅಲಿಯಾಸ್ ಗಿರೀಶ್ ಎಂದು ಹೇಳಲಾಗುತ್ತಿದೆ.

ಏನಿದು ಘಟನೆ?

ಕೊಲೆಯಾದ ಅಂಜಲಿಗೆ ಪ್ರಿಯತಮ ಗಿರೀಶ್ ಮೈಸೂರಿಗೆ ಬಾ ಎಂದು ಧಮ್ಕಿ ಹಾಕಿದ್ದಾನೆ. ಒಂದು ವೇಳೆ ಮೈಸೂರಿಗೆ ಬರದೆ ಹೋದರೆ ನೇಹಾ ಕೊಂದಂತೆ ನಿನ್ನನ್ನು ಕೊಳ್ಳುತ್ತೇನೆ ಎಂದು ಬೆದರಿಕೆ ಒಡ್ಡಿದ್ದಾನೆ. ಈ ವಿಷಯವನ್ನು ಅಂಜಲಿ ಅಜ್ಜಿ ಗಂಗಮ್ಮನಿಗೆ ಹೇಳಿದ್ದಾಳೆ. ಬಳಿಕ ಇಬ್ಬರೂ ಪೊಲೀಸರಿಗೆ ದೂರು ನೀಡಲು ಹೋದಾಗ ಇದು ಮೂಢನಂಬಿಕೆ ಎಂದು ಪೊಲೀಸರು ಕೂಡ ಅದನ್ನ ನಿರ್ಲಕ್ಷಿಸಿದ್ದಾರೆ. ಆದರೆ ಇದೀಗ ನಸುಕಿನ ಜಾವ ಅಂಜಲಿ ಮನೆಗೆ ಬಂದು ಮನೆಯಲ್ಲಿ ಸುಮಾರು ನಾಲ್ಕು ಜನ ಇದ್ದರೂ ಕೂಡ, ಅವರ ಎದುರಲ್ಲಿಯೇ ವಿಶ್ವ ಅಂಜಲಿಗೆ ಹಲವಾರು ಬಾರಿ ಚುಚ್ಚಿ ಭೀಕರವಾಗಿ ಕೊಲೆ ಮಾಡಿದ್ದಾನೆ.

ಈ ಕುರಿತು ಪ್ರತಿಕ್ರಿಯಿಸಿರುವ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು, ಆರೋಪಿ ಹಲವು ದಿನಗಳಿಂದ ತನ್ನನ್ನು ಪ್ರೀತಿಸುವಂತೆ ಯುವತಿಯನ್ನು ಪೀಡಿಸುತ್ತಿದ್ದ ಎಂದು ತಿಳಿದು ಬಂದಿದೆ. ಆದರೆ, ಯುವತಿ ಈತನ ಪ್ರೀತಿಯನ್ನು ನಿರಾಕರಿಸಿದ್ದಳು ಎನ್ನಲಾಗಿದೆ. ಈತನ ವಿರುದ್ಧ ಹಲವು ಕಳ್ಳತನ ಪ್ರಕರಣಗಳಲ್ಲಿ ಶಾಮೀಲಾದ ಆರೋಪವೂ ಇದೆ. ಜತೆಗೆ, ಬೈಕ್‌ ಕಳ್ಳತನದಲ್ಲಿಯೂ ಆರೋಪಿಯಾಗಿದ್ದಾನೆ.

Advertisement
Advertisement