ಮುಖಪುಟಸುದ್ದಿರಾಜಕೀಯಅಂಕಣಮನರಂಜನೆಸಿನೆಮಾ-ಕ್ರೀಡೆಲೈಫ್ ಸ್ಟೈಲ್ಕ್ರೀಡೆ
Advertisement

Annubhai sompura: ಅಂತೂ ರಾಮ ಮಂದಿರದ ಉದ್ಘಾಟನೆಗೆ ಬರ್ತಿದ್ದಾರೆ ಈ ವಿಶೇಷ ಅತಿಥಿ- ಪ್ರಧಾನಿ ಮೋದಿಗಿಂತಲೂ ಇವರೇ ಸ್ಪೆಷಲ್ !!

06:02 PM Dec 25, 2023 IST | ಹೊಸ ಕನ್ನಡ
UpdateAt: 06:02 PM Dec 25, 2023 IST
Advertisement

Annubhai sompura: ಜನವರಿ 22ರಂದು ಇಡೀ ದೇಶದೆಲ್ಲಡೆ ಸಂಭ್ರಮ ಮನೆಮಾಡಲಿದೆ. ಏಕೆಂದರೆ 500 ವರ್ಷಗಳ, ಕೋಟ್ಯಾಂತರ ಹಿಂದೂ ಭಕ್ತಾದಿಗಳ ಕನಸಾದ ಅಯೋಧ್ಯಾ ರಾಮಮಂದಿರದ ಉದ್ಘಾಟನೆ ಹಾಗೂ ರಾಮನ ಪ್ರಾಣ ಪ್ರತಿಷ್ಠೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಆ ದಿನದಂದು ಅಯೋಧ್ಯೆಗೇ ಪ್ರಧಾನಿ ಮೋದಿ ಸೇರಿದಂತೆ ಗಣ್ಯಾತಿ ಗಣ್ಯರು ಆಗಮಿಸಲಿದ್ದಾರೆ. ಈಗಿದಂಲೇ ಸಾಕಷ್ಟು ತಯಾರಿಗಳು ನಡೆದಿದ್ದು, ಈಗಾಗಲೇ ಅನೇಕ ಅನೇಕರಿಗೆ ಆಹ್ವಾನ ನೀಡಲಾಗಿದೆ.

Advertisement

ಈಗಾಗಲೇ ಹೇಳಿದಂತೆ ಬರೋಬ್ಬರಿ 500 ವರ್ಷಗಳ ಕಾಯುವಿಕೆಯ ನಂತರ, ರಾಮಲಲ್ಲಾ ತನ್ನ ಭವ್ಯವಾದ ದೇಗುಲಕ್ಕೆ ಮರಳಲಿದ್ದು, ರಾಮನ ಪ್ರಾಣ ಪ್ರತಿಷ್ಠೆ ಕಾರ್ಯಕ್ರಮಕ್ಕೆ ನೂರಾರು ಗಣ್ಯಮಾನರು ಆಗಮಿಸುತ್ತಿದ್ದಾರೆ. ಆದರೆ ಇವರ ನಡುವೆ ಇಲ್ಲೊಬ್ಬರು ವಿಶೇಷ ಅತಿಥಿಗೂ ಆಹ್ವಾನ ಹೋಗಿದ್ದು, ಅವರು ಕೂಡ ಕಾರ್ಯಕ್ರಮಕ್ಕೆ ಬರುವುದು ಫಿಕ್ಸ್ ಆಗಿದೆ. ಅವರೆ ಕುಶಲಕರ್ಮಿ ಅನ್ನೂಭಾಯಿ ಸೋಂಪುರ(Annubhai Sompura) ಅವರು ಇವರು ವಿಶೇಷ ಅತಿಥಿ ಮಾತ್ರವಲ್ಲ, ಪ್ರಧಾನಿ ಮೋದಿ(PM Modi)ಗಿಂತಲೂ ಸ್ಪೆಷಲ್ ಆಗಿದ್ದಾರೆ.

ಯಾರು ಈ ಅನ್ನೂಬಾಯಿ ಸೋಂಪುರ?
ಅನ್ನೂಬಾಯಿ ಸೋಂಪರ ಅವರು ರಾಮಮಂದಿರದ ಮೊದಲ ಶಿಲೆಯನ್ನು ಕೆತ್ತಿದ ಮುಖ್ಯ ಕುಶಲಕರ್ಮಿ. ರಾಮಮಂದಿರದ ಮುಖ್ಯ ವಾಸ್ತುಶಿಲ್ಪಿ ಚಂದ್ರಕಾಂತ್ ಸೋಂಪುರ(Chandrakanth Sompura) ಅವರ ಆಜ್ಞೆಯ ಮೇರೆಗೆ ಅವರು 1990 ರಲ್ಲಿ ತಮ್ಮ 45 ನೇ ವಯಸ್ಸಿನಲ್ಲಿ ಅಹಮದಾಬಾದ್‌ನಿಂದ ಅಯೋಧ್ಯೆಗೆ ಬಂದರು. ಅಂದಿನಿಂದ ಅನುಭಾಯಿ ಅಯೋಧ್ಯೆಯ ನಿವಾಸಿಯಾಗಿಯೇ ಉಳಿದರು. ಇಲ್ಲಿಗೆ ಬಂದ ನಂತರ ಅವರು ತಮ್ಮ ಸಹೋದರ ಮತ್ತು ಮಗನೊಂದಿಗೆ ಉದ್ದೇಶಿತ ರಾಮಮಂದಿರಕ್ಕೆ ಕಲ್ಲುಗಳನ್ನು ಕೆತ್ತುವ ಕೆಲಸವನ್ನು ಪ್ರಾರಂಭಿಸಿದರು. ಮಂದಿರ ನಿರ್ಮಾಣದ ಕನಸು ನನಸಾಗುತ್ತಿದ್ದಂತೆ 78ನೇ ವರ್ಷಕ್ಕೆ ಕಾಲಿಟ್ಟಿರುವ ಅನುಭಾಯಿ ಅವರ ಸಂತಸಕ್ಕೆ ಮಿತಿಯೇ ಇಲ್ಲದಂತಾಗಿದೆ. ಅನ್ನೂಭಾಯಿ ಸೋಂಪುರ ಅವರ ವಿಶೇಷ ಕೊಡುಗೆಯನ್ನು ಪರಿಗಣಿಸಿ ರಾಮಮಂದಿರ ಟ್ರಸ್ಟ್ ಅವರನ್ನು ಆಹ್ವಾನಿಸಿದೆ. ಇದೀಗ ದೇಶದ ಆಯ್ದ ಗಣ್ಯರ ಸಾಲಿಗೆ ಅವರೂ ಸೇರಿಕೊಂಡಿದ್ದಾರೆ. ರಾಮಲಾಲಾ ಅವರ ವಿಶೇಷ ಅತಿಥಿಯಾಗಿರುತ್ತಾರೆ.

Advertisement

Advertisement
Advertisement