For the best experience, open
https://m.hosakannada.com
on your mobile browser.
Advertisement

Jio Fiber: ಜಿಯೋಫೈಬರ್, ಏರ್ ಫೈಬರ್ ಗ್ರಾಹಕರಿಗೆ ಬಂಪರ್ ಆಫರ್ - 15 ಒಟಿಟಿಗಳ ಜೊತೆ ₹888ರ ಪೋಸ್ಟ್ ಪೇಯ್ಡ್ ಪ್ಲಾನ್ ಘೋಷಣೆ !!

Jio Fiber: ಹಾಗೆ ಈ ಪ್ಲಾನ್ ಗೆ ತಿಂಗಳಿಗೆ 888 ರೂಪಾಯಿ ಆಗಲಿದ್ದು, ಜಿಯೋಫೈಬರ್ ಹಾಗೂ ಜಿಯೋ ಏರ್ ಫೈಬರ್ ಗ್ರಾಹರಿಗಾಗಿ ಲಭ್ಯವಿದೆ.
09:05 AM May 15, 2024 IST | ಸುದರ್ಶನ್
UpdateAt: 09:06 AM May 15, 2024 IST
jio fiber  ಜಿಯೋಫೈಬರ್  ಏರ್ ಫೈಬರ್ ಗ್ರಾಹಕರಿಗೆ ಬಂಪರ್ ಆಫರ್    15 ಒಟಿಟಿಗಳ ಜೊತೆ ₹888ರ ಪೋಸ್ಟ್ ಪೇಯ್ಡ್ ಪ್ಲಾನ್ ಘೋಷಣೆ
Advertisement

Jio Fiber: ಜಿಯೋಫೈಬರ್ ಹಾಗೂ ಜಿಯೋ ಏರ್ ಫೈಬರ್(Jio Fibe) ಗ್ರಾಹರಿಗಾಗಿ ರಿಲಯನ್ಸ್ ಜಿಯೋದಿಂದ ಹೊಸ ಪೋಸ್ಟ್ ಪೇಯ್ಡ್ ಯೋಜನೆಯನ್ನು ಪರಿಚಯಿಸಲಾಗಿದೆ. ಯಾರು ಒಟಿಟಿ ಪ್ಲಾಟ್ ಫಾರ್ಮ್ ಗಳನ್ನು ಅತಿಹೆಚ್ಚು ಬಳಕೆ ಮಾಡುತ್ತೀರಿ, ಇಷ್ಟ ಪಡುತ್ತೀರಿ ಅಂಥವರಿಗೆ ಹೇಳಿಮಾಡಿಸಿದಂಥ ಯೋಜನೆ ಇದಾಗಿದ್ದು, ಪೋಸ್ಟ್ ಪೇಯ್ಡ್ ಒಟಿಟಿ ಜತೆಗೂಡಿ ಬರುತ್ತದೆ. ಇದರ ಅಡಿಯಲ್ಲಿ ಗ್ರಾಹಕರು ಹದಿನೈದು ಪ್ರೀಮಿಯಂ ಒಟಿಟಿ(OTT) ಅಪ್ಲಿಕೇಷನ್ ಗಳನ್ನು ಪಡೆಯುತ್ತಾರೆ. ಇದರ ಜತೆಗೆ ಅನಿಯಮಿತ (ಅನ್ ಲಿಮಿಟೆಡ್) ಡೇಟಾ ಸಹ ದೊರೆಯುತ್ತಿದೆ. ಇದರಿಂದಾಗಿ ಗ್ರಾಹಕರು ತಮ್ಮ ಅಚ್ಚುಮೆಚ್ಚಿನ ಅಪ್ಲಿಕೇಷನ್ ಗಳಲ್ಲಿ ಯಾವಾಗ ಮತ್ತು ಎಲ್ಲಿ ಬೇಕಾದರೂ ಕಾರ್ಯಕ್ರಮಗಳ ವೀಕ್ಷಣೆ ಮಾಡಬಹುದು. ಅಂದ ಹಾಗೆ ಈ ಪ್ಲಾನ್ ಗೆ ತಿಂಗಳಿಗೆ 888 ರೂಪಾಯಿ ಆಗಲಿದ್ದು, ಜಿಯೋಫೈಬರ್ ಹಾಗೂ ಜಿಯೋ ಏರ್ ಫೈಬರ್ ಗ್ರಾಹರಿಗಾಗಿ ಲಭ್ಯವಿದೆ.

Advertisement

ಇದನ್ನೂ ಓದಿ: Bad Dreams: ದಿಂಬಿನ ಕೆಳಗೆ ಇವುಗಳನ್ನು ಇಟ್ಟು ಮಲಗಿದರೆ ಸಾಕು, ಕೆಟ್ಟ ಕನಸುಗಳು ಮಾಯವಾಗುತ್ತೆ!

ಈ ಹೊಸ ಯೋಜನೆಯ ಅಡಿಯಲ್ಲಿ ಗ್ರಾಹಕರು 30 ಎಂಬಿಪಿಎಸ್ (Mbps) ವೇಗವನ್ನು ಪಡೆಯುತ್ತಾರೆ. ಇದರ ಜತೆಗೆ ನೆಟ್‌ಫ್ಲಿಕ್ಸ್‌ನ ಬೇಸಿಕ್ ಪ್ಲಾನ್, ಅಮೆಜಾನ್ ಪ್ರೈಮ್, ಜಿಯೋಸಿನಿಮಾ ಪ್ರೀಮಿಯಂ ರೀತಿಯ ಹದಿನೈದಕ್ಕೂ ಹೆಚ್ಚು ಪ್ರಮುಖ ಒಟಿಟಿ ಅಪ್ಲಿಕೇಷನ್ ಗಳು ದೊರೆಯುತ್ತವೆ. ಈ ಅಪ್ಲಿಕೇಷನ್ ನ ಸಬ್ ಸ್ಕ್ರಿಪ್ಷನ್ ದೊರೆಯುವುದು ಯೋಜನೆಯ ಜತೆಗೆ ಮಾತ್ರ. ಈ ಯೋಜನೆಯಮ್ಮು ಹೊಸ ಚಂದಾದಾರಷ್ಟೇ ಅಲ್ಲ, 10 ಅಥವಾ 30 ಎಂಬಿಪಿಎಸ್ ಯೋಜನೆಯನ್ನು ಈಗಾಗಲೇ ಬಳಸುತ್ತಿರುವ ಜಿಯೋದ ಈಗಿನ ಬಳಕೆದಾರರು ಸಹ ಪಡೆಯಬಹುದು.

Advertisement

ಇದನ್ನೂ ಓದಿ: Crime: ಎಣ್ಣೆ ಸಾಲ ಕೊಡಲ್ಲ ಅಂದ ಬಾರ್ ಮಾಲೀಕ, ಮನಸೋ ಇಚ್ಚೆ ಹಲ್ಲೆ, ಕುಡುಕ ಆರೋಪಿ ಅರೆಸ್ಟ್ 

ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಹೇಳಬೇಕೆಂದರೆ, 888 ರೂಪಾಯಿಯ ಪೋಸ್ಟ್‌ಪೇಯ್ಡ್ ಯೋಜನೆ ಪ್ರತಿಯೊಬ್ಬರಿಗೂ ಎಲ್ಲರಿಗೂ ದೊರೆಯುತ್ತದೆ. ಇನ್ನು ಸದ್ಯಕ್ಕೆ ಪ್ರಿಪೇಯ್ಡ್ ಯೋಜನೆ ಹೊಂದಿರುವ ಗ್ರಾಹಕರು ಈ ಹೊಸ ಪೋಸ್ಟ್ ಪೇಯ್ಡ್ ಯೋಜನೆಗೆ ಅಪ್ ಗ್ರೇಡ್ ಮಾಡಬಹುದು.

ಇನ್ನೂ ಒಂದು ವಿಚಾರ ನಿಮಗೆ ಗೊತ್ತಿರಲಿ. ಇತ್ತೀಚೆಗೆ ಘೋಷಣೆಯಾದ ಜಿಯೋ ಐಪಿಎಲ್ ಧನ್ ಧನಾ ಧನ್ ಆಫರ್ ಕೂಡ ಈ ಯೋಜನೆಗೆ ಅನ್ವಯಿಸುತ್ತದೆ. ಜಿಯೋಫೈಬರ್ ಅಥವಾ ಏರ್ ಫೈಬರ್ ನ ಅರ್ಹ ಗ್ರಾಹಕರು ತಮ್ಮ ಜಿಯೋ ಹೋಮ್ ಬ್ರಾಡ್ ಬ್ಯಾಂಡ್ ಸಂಪರ್ಕದಲ್ಲಿ ಐವತ್ತು ದಿನ ರಿಯಾಯಿತಿ ಕ್ರೆಡಿಟ್ ವೋಚರ್ ಸಹ ಪಡೆಯಬಹುದು. ಈ ಪ್ಲಾನ್ ಮೇ 31, 2024ರ ವರೆಗೆ ಲಭ್ಯವಿರುತ್ತದೆ, ಜಿಯೋ ಡಿಡಿಡಿ (Jio Dhan Dhana Dhan) ಕೊಡುಗೆಯನ್ನು ವಿಶೇಷವಾಗಿ ಟಿ20 ಋತುವಿಗಾಗಿ ವಿನ್ಯಾಸಗೊಳಿಸಲಾಗಿದೆ.

Advertisement
Advertisement
Advertisement