For the best experience, open
https://m.hosakannada.com
on your mobile browser.
Advertisement

Andrapradesh: CM ಆಗುತ್ತಿದ್ದಂತೆ YSRCP ಪಕ್ಷದ ಕಛೇರಿಯನ್ನು ಧ್ವಂಸ ಮಾಡಿದ ಚಂದ್ರಬಾಬು ನಾಯ್ಡು !!

Andrapradesh ಅಲ್ಲಿ ಭರ್ಜರಿ ಗೆಲುವು ಸಾಧಿಸಿರುವ ಚಂದ್ರಬಾಬು ನಾಯ್ಡು ಅವರು ತಾವು ಸಿಎಂ ಆಗಿ ಅಧಿಕಾರ ಸ್ವೀಕರಿಸುತ್ತಿದ್ದಂತೆ YSRCP ಪಕ್ಷದ ಕಛೇರಿಯನ್ನು ಧ್ವಂಸ ಮಾಡಿದ್ದಾರೆ.
02:10 PM Jun 22, 2024 IST | ಸುದರ್ಶನ್
UpdateAt: 02:12 PM Jun 22, 2024 IST
andrapradesh  cm ಆಗುತ್ತಿದ್ದಂತೆ ysrcp ಪಕ್ಷದ ಕಛೇರಿಯನ್ನು  ಧ್ವಂಸ ಮಾಡಿದ ಚಂದ್ರಬಾಬು ನಾಯ್ಡು

Andrapradesh ಅಲ್ಲಿ ಭರ್ಜರಿ ಗೆಲುವು ಸಾಧಿಸಿರುವ ಚಂದ್ರಬಾಬು ನಾಯ್ಡು ಅವರು ತಾವು ಸಿಎಂ ಆಗಿ ಅಧಿಕಾರ ಸ್ವೀಕರಿಸುತ್ತಿದ್ದಂತೆ YSRCP ಪಕ್ಷದ ಕಛೇರಿಯನ್ನು ಧ್ವಂಸ ಮಾಡಿದ್ದಾರೆ.

Advertisement

KSRTC New Rules: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದಿಂದ ಹೊಸ ಆದೇಶ ಜಾರಿ! ಪಿಂಕ್ ಟಿಕೆಟ್ ಮೇಲೆ ದಂಡ!

ಚಂದ್ರಬಾಬು ನಾಯ್ಡು(Chandrababu Naidu) ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದ ಬೆನ್ನಲ್ಲೇ ವೈ.ಎಸ್.ಜಗನ್ಮೋಹನ್ ರೆಡ್ಡಿ ನೇತೃತ್ವದ ವೈಎಸ್ಆರ್ ಕಾಂಗ್ರೆಸ್(YSRCP) ನ ಗುಂಟೂರು ಕಛೇರಿಯು ಅನಧಿಕೃತ ಎಂದು ಬುಲ್ಡೋಜರ್ ಹರಿಸಿ ಧ್ವಂಸ ಮಾಡಲಾಗಿದೆ. ಎಪಿಸಿಆರ್‌ಡಿಎ ( Andhra Pradesh Capital Region Development Authority ) ಮತ್ತು ಎಂಟಿಎಂಸಿ (Mangalagiri Tadepalli Municipal Corporation) ಜಂಟಿಯಾಗಿ ನಡೆಸಿದ ಕಾರ್ಯಚರಣೆಯಲ್ಲಿ, ನಿರ್ಮಾಣ ಹಂತದ ವೈಎಸ್ಆರ್ ಕಾಂಗ್ರೆಸ್ ಪಕ್ಷದ ಕಚೇರಿಯನ್ನು ನೆಲಸಮಗೊಳಿಸಿದೆ. ಶನಿವಾರ (ಜೂನ್ 22) ಬೆಳಗ್ಗಿನ ಜಾವ ಈ ಕಾರ್ಯಾಚರಣೆ ನಡೆದೆ.

Advertisement

ಗುಂಟೂರು ವಿಭಾಗವನ್ನು ಕೇಂದ್ರೀಕರಿಸಿ, ಈ ಕಟ್ಟಡವನ್ನು ಪಕ್ಷದ ಸೆಂಟ್ರಲ್ ಕಚೇರಿಯಾಗಿ ಕಾರ್ಯನಿರ್ವಹಿಸುವ ಯೋಜನೆಯನ್ನು ವೈ.ಎಸ್.ಜಗನ್ ಹಾಕಿಕೊಂಡಿದ್ದರು ಎಂದು ಹೇಳಲಾಗುತ್ತಿದೆ. ಆದರೆ ಆರಂಭದಲ್ಲೇ ಜಗನ್ ಯೋಜನೆ ಚದುರಿ ಹೋಗಿದೆ.

ಈ ಬಗ್ಗೆ YSRCP ಪಕ್ಷದ ಮುಖಂಡರು ಪ್ರತಿಕ್ರಿಯಿಸಿ " ತೆಲುಗುದೇಶಂ ಪಕ್ಷವು ಪ್ರತೀಕಾರದ ರಾಜಕೀಯವನ್ನು ಆರಂಭಿಸಿದೆ. ಕಟ್ಟಡ ನೆಲಸಮಗೊಳಿಸುವ ವಿಚಾರದಲ್ಲಿ ಶುಕ್ರವಾರವಷ್ಟೇ ನಾವು ಹೈಕೋರ್ಟ್ ಮೊರೆ ಹೋಗಿದ್ದೆವು. ಕಟ್ಟಡ ಧ್ವಂಸಗೊಳಿಸುವುದನ್ನು ಸದ್ಯಕ್ಕೆ ತಡೆ ಹಿಡಿಯಲು ಕೋರ್ಟ್ ಸೂಚಿಸಿತ್ತು " ಎಂದು ಹೇಳಿದ್ದಾರೆ.

AI Revolution: ಊಹೆಗೂ ನಿಲುಕದ ಹೊಸ ಪರಿಚಯ! ಇನ್ಮೇಲೆ ರೋಮ್ಯಾನ್ಸ್ ಮಾಡೋಕೆ, ಫೀಲಿಂಗ್ ಶೇರ್ ಮಾಡೋಕೆ, ದೈಹಿಕ ಸುಖ ಕೊಡೋಕೆ ಇಲ್ಲಿದೆ ರತಿ ಗೊಂಬೆ!

Advertisement
Advertisement
Advertisement