ಮುಖಪುಟಸುದ್ದಿರಾಜಕೀಯಅಂಕಣಮನರಂಜನೆಸಿನೆಮಾ-ಕ್ರೀಡೆಲೈಫ್ ಸ್ಟೈಲ್ಕ್ರೀಡೆ
Advertisement

Andra Pradesh: ಪ್ರಚಾರದ ವೇಳೆ ಕಲ್ಲು ತೂರಾಟ, ಆಂದ್ರ ಸಿಎಂ ಜಗನ್ ಮೋಹನ್ ರೆಡ್ಡಿಗೆ ತೀವ್ರ ಗಾಯ !! ವಿಡಿಯೋ ವೈರಲ್

Andra Pradesh: ಸಿಎಂ ಜಗನ್ ಮೋಹನ್ ರೆಡ್ಡಿ ಚುನಾವಣಾ ಪ್ರಚಾರ ನಡೆಸಿ ರ್ಯಾಲಿ ಮಾಡುವ ವೇಳೆ ಕಿಡಿಗೇಡಿಗಳು ಕಲ್ಲು ತೂರಿದ್ದಾರೆ.
09:15 AM Apr 14, 2024 IST | ಸುದರ್ಶನ್
UpdateAt: 09:51 AM Apr 14, 2024 IST
Advertisement

Andra Pradesh: ಸಿಎಂ ಜಗನ್ ಮೋಹನ್ ರೆಡ್ಡಿ ಚುನಾವಣಾ ಪ್ರಚಾರ ನಡೆಸಿ ರ್ಯಾಲಿ ಮಾಡುವ ವೇಳೆ ಕಿಡಿಗೇಡಿಗಳು ಕಲ್ಲು ತೂರಿದ್ದಾರೆ. ತೆರೆದ ವಾಹನದಲ್ಲಿದ್ದ ಜಗನ್ ಹಣೆಗೆ ಗಾಯವಾಗಿದೆ, ತಕ್ಷಣವೇ ಜಗನ್‌ಗೆ ಪ್ರಥಮ ಚಿಕಿತ್ಸೆ ನೀಡಲಾಗಿದೆ.

Advertisement

ಇದನ್ನೂ ಓದಿ: Mangaluru: ಮೋದಿ ರೋಡ್ ಶೋ ಎಫೆಕ್ಟ್ - ಮಂಗಳೂರಿನ ಈ ರಸ್ತೆಗಳಲ್ಲಿ ವಾಹನ ಸಂಚಾರ, ಪಾರ್ಕಿಂಗ್ ಬಂದ್ !! ಇಲ್ಲಿದೆ ಮಾರ್ಗ ಬದಲಾವಣೆ

ಆಂಧ್ರಪ್ರದೇಶದಲ್ಲಿ ಲೋಕಸಭಾ ಚುನಾವಣೆ ಜೊತೆಗೆ ವಿಧಾನಸಭೆ ಚುನಾವಣೆಯೂ (Andhra Assembly Election) ಹತ್ತಿರವಾಗಿದೆ. ಈ ಹಿನ್ನೆಲೆಯಲ್ಲಿ ಆಡಳಿತ ಪಕ್ಷ ವೈಎಸ್ಆರ್ಸಿಪಿ (YSRCP) ನಡೆಸುತ್ತಿರುವ “ಮೇಮಂತ ಸಿದ್ದಂ” ಬಸ್ ಯಾತ್ರೆ (Bus Yatra) ನಡೆಸಿದೆ. ಈ ವೇಳೆ ಸಿಎಂ ವೈಎಸ್ ಜಗನ್ ಮೋಹನ್ ರೆಡ್ಡಿ (Jagan Mohan Reddy) ಮೇಲೆ ಅಪರಿಚಿತ ವ್ಯಕ್ತಿಯೊಬ್ಬ ಕಲ್ಲಿನಿಂದ ಹಲ್ಲೆ ನಡೆಸಿದ್ದಾನೆ. ವೇಗವಾಗಿದ ಬಂದ ಕಲ್ಲು ಸಿಎಂ ಜಗನ್ ಹಣೆಗೆ ಬಡಿದು ರಕ್ತ ಚಿಮ್ಮಿದೆ. ಕ್ಯಾಟ್ ಬಾಲ್ ನಿಂದ ದಾಳಿ ಮಾಡಿರುವ ಶಂಕೆ ವ್ಯಕ್ತವಾಗಿದೆ. ಕಲ್ಲೇಟಿನಿಂದ ಸಿಎಂ ಜಗನ್ ಎಡ ಕಣ್ಣಿನ ಹುಬ್ಬಿಗೆ ತೀವ್ರ ಪೆಟ್ಟಾಗಿದೆ. ರಕ್ತ ಸೋರುತ್ತಿದ್ದ ತಕ್ಷಣವೇ ಜಗನ್‌ಗೆ ಪ್ರಥಮ ಚಿಕಿತ್ಸೆ ನೀಡಲಾಗಿದೆ.

Advertisement

ಇದನ್ನೂ ಓದಿ: Bengaluru: ಇಬ್ಬರು ಮಕ್ಕಳನ್ನು ಕೊಂದ ತಾಯಿ ಪರಪ್ಪನ ಅಗ್ರಹಾರದಲ್ಲಿ ಆತ್ಮಹತ್ಯೆ !!

ಅಂದಹಾಗೆ ಜಗನ್ ಹಣೆ, ತಲೆ, ಎಡಗಣ್ಣು ಹಾಗೂ ದೇಹಕ್ಕೆ ಕಲ್ಲು ಬಡಿದಿದೆ. ಇದರ ಪರಿಣಾಮ ರಕ್ತ ಜಿನುಗಿದೆ. ಜಗನ್ ಮೋಹನ್ ರೆಡ್ಡಿ ಅವರ ಎಡ ಹುಬ್ಬಿನ ಮೇಲೆ ಕಲ್ಲು ತಗುಲಿದ್ದು ಸ್ವಲ್ಪದರಲ್ಲೇ ಅವರ ಕಣ್ಣಿಗೆ ಬೀಳುವುದರಿಂದ ತಪ್ಪಿಸಿಕೊಂಡಿದ್ದಾರೆ. ಅವರ ಗಾಯಕ್ಕೆ ಎರಡು ಹೊಲಿಗೆಗಳು ಬೇಕಾಗುತ್ತವೆ ಎಂದು ವೈದ್ಯರು ತಿಳಿಸಿದ್ದಾರೆ.

https://x.com/PTI_News/status/1779175794884886983?t=ULUth5B7JBkaKS_OCdBIbw&s=08

ಜಗನ್ ಪಕ್ಕದಲ್ಲಿದ್ದ ನಾಯಕರಿಗೂ ಕಲ್ಲೇಟು ಬಿದ್ದಿದೆ. ಒರ್ವ ನಾಯಕ ಗಂಭೀರವಾಗಿ ಗಾಯಗೊಂಡಿದ್ದಾರೆ. ಜಗನ್ ಜೊತೆಗಿದ್ದ ಶಾಸಕ ವೇಲಂಪಲ್ಲಿ ಶ್ರೀನಿವಾಸ್ ಕೂಡ ಗಾಯಗೊಂಡಿದ್ದಾರೆ. ತಕ್ಷಣವೇ ಜಗನ್ ಅವರಿಗೆ ಭದ್ರತಾ ಪಡೆಗಳು ರಕ್ಷಣೆ ನೀಡಿದೆ. ಓರ್ವ ನಾಯಕ ಗಂಭೀರವಾಗಿ ಗಾಯಗೊಂಡಿದ್ದಾನೆ. ದಾಳಿಯ ಬಗ್ಗೆ ವೈಎಸ್‌ಆರ್‌ಸಿಪಿ ಸದಸ್ಯರೊಬ್ಬರು ಪ್ರತಿಕ್ರಿಯೆ ನೀಡಿದ್ದು, ಇದು ಟಿಡಿಪಿ ಮೈತ್ರಿಕೂಟ ಮಾಡಿರುವ ಸಂಚು ಎಂದು ಆರೋಪಿಸಿದ್ದಾರೆ. ಚಂದ್ರಬಾಬು ನಾಯ್ಡು ಅವರು ಸೋಲುವ ಭಯದಿಂದ ಆತಂಕಗೊಂಡಿದ್ದಾರೆ ಎಂದು ಹೇಳಿದ್ದಾರೆ.

ಇನ್ನು ಆಂಧ್ರಪ್ರದೇಶದಲ್ಲಿ ಲೋಕಸಭಾ ಮತ್ತು ವಿಧಾನಸಭಾ ಚುನಾವಣೆ ಒಟ್ಟಿಗೆ ನಡೆಯಲಿದೆ. 175 ಸದಸ್ಯ ಬಲದ ವಿಧಾನಸಭೆ ಮತ್ತು 25 ಲೋಕಸಭಾ ಸ್ಥಾನಗಳಿಗೆ ಮೇ 13ರಂದು ಚುನಾವಣೆ ನಡೆಯಲಿದೆ.

Advertisement
Advertisement