Aparna: ನಿರೂಪಕಿ ಅಪರ್ಣಾ ನಿಧನ - ಭಾವನಾತ್ಮಕ ನುಡಿಗಳಿಂದ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ಸಂತಾಪ !!
Aparna: ಕನ್ನಡಿಗರಿಗೆ ಇದ್ದಕ್ಕಿದ್ದಂತೆ ದೊಡ್ಡ ಅಘಾತ ಎದುರಾಗಿದೆ. ಇಡೀ ನಾಡು ಮೆಚ್ಚಿ ಕೊಂಡಾಡಿದ್ದ, ಮನೆ ಮಗಳೆಂದು ಸ್ವೀಕರಿಸಿ ಪ್ರ್ರೀತಿ, ಗೌರವಗಳನ್ನು ನೀಡಿದ್ದ ಕನ್ನಡದ ಮಗಳು ನಿರೂಪಕಿ ಅಪರ್ಣಾ (Aparna) ನಿಧನರಾಗಿದ್ದಾರೆ. ಇಡೀ ನಾಡು ಮನೆ ಮಗಳ ಸಾವಿಗೆ ಕಂಬನಿ ಮಿಡಿದಿದೆ. ಮನೆಯಲ್ಲೇ ಸಾವಾಗಿದೆಯೆಂಬಂತೆ ಮರುಗಿದೆ. ಈ ಅನ್ಯಾಯದ ಸಾವಿಗೆ ಇದೀಗ ನಾಡಿನ ಹಿರಿಯರು, ರಾಜಕೀಯ ನಾಯಕರು ಸಂತಾಪ ಸೂಚಿಸಿದ್ದಾರೆ.
BJP Highcomand : ಕರ್ನಾಟಕ ಬಿಜೆಪಿ ವಿರುದ್ದ ಸಿಡಿದೆದ್ದ ಬಿಜೆಪಿ ಹೈಕಮಾಂಡ್ – ಗಡ ಗಡ ನಡುಗಿದ ರಾಜ್ಯ ನಾಯಕರು !!
ಅಂತೆಯೇ ಸಿಎಂ ಸಿದ್ದರಾಮಯ್ಯನವರು(CM Siddaramaiah) ಹಾಗೂ ಡಿಸಿಎಂ ಡಿ ಕೆ ಶಿವಕುಮಾರ್ (D K Shivkumar) ಅವರು ಅಪರ್ಣಾ ಸಾವಿಗೆ ತಮ್ಮದೇ ಭಾವನಾತ್ಮಕ ನುಡಿಗಳಿಂದ ಸಂತಾಪ ಸೂಚಿಸಿದ್ದಾರೆ. ಈ ಇಬ್ಬರು ನಾಯಕರು ನಮ್ಮನ್ನಗಲಿದ ಮಹಾನ್ ಪ್ರತಿಭೆ ಬಗ್ಗೆ ಏನು ಹೇಳಿದ್ದಾರೆ ಎಂದು ನೋಡೋಣ ಬನ್ನಿ.
ಸಿಎಂ ಸಿದ್ದರಾಮಯ್ಯ :
ತಮ್ಮ ಎಕ್ಸ್ ಖಾತೆಯಲ್ಲಿ ಭಾರವಾದ ಹೃದಯದಿಂದ ನುಡಿನಮನ ಸಲ್ಲಿಸಿರೋ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 'ನಟಿ, ಖ್ಯಾತ ನಿರೂಪಕಿ ಅಪರ್ಣಾ ಅವರ ನಿಧನದ ಸುದ್ದಿ ತಿಳಿದು ನೋವಾಯಿತು. ಸರ್ಕಾರಿ ಸಮಾರಂಭಗಳು ಸೇರಿದಂತೆ ಕನ್ನಡದ ಪ್ರಮುಖ ವಾಹಿನಿಗಳ ಕಾರ್ಯಕ್ರಮಗಳಲ್ಲಿ ಕನ್ನಡ ಭಾಷೆಯಲ್ಲಿ ಅತ್ಯಂತ ಸೊಗಸಾಗಿ ನಿರೂಪಣೆ ಮಾಡುತ್ತಾ ನಾಡಿನ ಮನೆಮಾತಾಗಿದ್ದ ಬಹುಮುಖ ಪ್ರತಿಭೆಯೊಂದು ಬಹುಬೇಗ ನಮ್ಮನ್ನು ಅಗಲಿರುವುದು ದುಃಖದ ಸಂಗತಿ. ಮೃತ ಅಪರ್ಣಾಳ ಆತ್ಮಕ್ಕೆ ಶಾಂತಿ ಸಿಗಲಿ, ಅವರ ಕುಟುಂಬಸ್ಥರಿಗೆ ದುಃಖ ಭರಿಸುವ ಶಕ್ತಿ ಸಿಗಲೆಂದು ಪ್ರಾರ್ಥಿಸುತ್ತೇನೆ' ಎಂದು ಬರೆದುಕೊಂಡಿದ್ದಾರೆ.
ಡಿಕೆ ಶಿವಕುಮಾರ್:
ಸ್ಪಷ್ಟ ಕನ್ನಡದ ಮೂಲಕ ನಿರೂಪಣೆ ಮಾಡಿ ಕನ್ನಡಿಗರ ಮನ ಗೆದ್ದ, ಖ್ಯಾತ ನಿರೂಪಕಿ, ನಟಿ ಶ್ರೀಮತಿ ಅಪರ್ಣ ಅವರ ಸಾವಿನಿಂದ ಮನಸ್ಸಿಗೆ ಅಪಾರ ನೋವುಂಟಾಗಿದೆ. ಅವರ ನಿಧನವು ಕಲಾ ಲೋಕಕ್ಕೆ ತುಂಬಲಾರದ ನಷ್ಟ. ನಿರೂಪಕಿಯಾಗಿ, ನಟಿಯಾಗಿ ದಶಕಗಳಿಂದ ದುಡಿದ ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸುತ್ತೇನೆ. ಅವರ ಕುಟುಂಬ ಹಾಗೂ ಸ್ನೇಹಿತರಿಗೆ ನನ್ನ ಸಾಂತ್ವನಗಳು' ಎಂದು ಹೇಳಿದ್ದಾರೆ.
Aparna died: ಕನ್ನಡದ ಖ್ಯಾತ ನಿರೂಪಕಿ, ಮಜಾ ಟಾಕೀಸ್ ಖ್ಯಾತಿಯ ನಟಿ ಅಪರ್ಣ ವಸ್ತಾರೆ ವಿಧಿವಶ !