ಮುಖಪುಟಸುದ್ದಿರಾಜಕೀಯಅಂಕಣಮನರಂಜನೆಸಿನೆಮಾ-ಕ್ರೀಡೆಲೈಫ್ ಸ್ಟೈಲ್ಕ್ರೀಡೆ
Advertisement

Ananth Kumar Hegde: ಅನಂತ್ ಕುಮಾರ್ ಹೆಗಡೆಗೆ ರಾಜ್ಯದ ಮುಖ್ಯಮಂತ್ರಿ ಪಟ್ಟ !!

Ananth Kumar Hegde: ಬಿಜೆಪಿ ವರಿಷ್ಠರು ಅನಂತಕುಮಾರ್ ಹೆಗಡೆಯವರನ್ನು ರಾಜ್ಯ ರಾಜಕಾರಣಕ್ಕೆ ತಂದು ಮುಖ್ಯಮಂತ್ರಿ ಮಾಡಬೇಕು ಎಂದು ತೀರ್ಮಾನ ಮಾಡಿದ್ದಾರೆ
01:21 PM Mar 27, 2024 IST | ಸುದರ್ಶನ್
UpdateAt: 01:23 PM Mar 27, 2024 IST
Advertisement

Ananth Kumar Hegde: ರಾಜ್ಯದ ಹೈವೋಲ್ಟೇಜ್ ಕ್ಷೇತ್ರಗಳಲ್ಲಿ ಒಂದಾದ ಉತ್ತರ ಕನ್ನಡ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಲು ನಿರ್ಧರಿಸಿದ್ದ ಅಲ್ಲಿನ ಹಾಲಿ ಸಂಸದ ಅನಂತ ಕುಮಾರ್ ಹೆಗಡೆ(Ananth Kumar Hegde)ಯವರಿಗೆ ಈ ಬಾರಿ ಬಿಜೆಪಿ(BJP) ಟಿಕೆಟ್ ಮಿಸ್ ಮಾಡಿದೆ. ಆದರೆ ಈ ಬೆನ್ನಲ್ಲೇ ಅನಂತ್ ಕುಮಾರ್ ಹೆಗಡೆ ಗೆ ಭರ್ಜರಿ ಗುಡ್ ನ್ಯೂಸ್ ಸಿಗಲಿದೆ ಎಂದು ಮೂಲಗಳು ಹೇಳುತ್ತಿವೆ.

Advertisement

ಇದನ್ನೂ ಓದಿ: Bengaluru: ಬೆಳ್ಳಂಬೆಳಗ್ಗೆ ಅಧಿಕಾರಿಗಳಿಗೆ ಶಾಕ್ ನೀಡಿದ ಲೋಕಾಯುಕ್ತ :‌ 13 ಸರ್ಕಾರಿ ಅಧಿಕಾರಿಗಳ 60 ಸ್ಥಳಗಳ ಮೇಲೆ ದಾಳಿ

ಹೌದು, ತಮ್ಮ ವಾವಾದದ ಹೇಳಿಕೆಗಳ ಮೂಲಕ ಸುದ್ದಿಯಾಗುವ, ಐದಾರು ಬಾರಿ ಸಂಸದರಾಗಿರುವ ಕಟ್ಟಾ ಹಿಂದುತ್ವವಾದಿ ಅನಂತ್ ಕುಮಾರ್ ಹೆಗಡೆ ಪಾಲಿನ ಟಿಕೆಟ್ ಈ ಸಲ ವಿಶ್ವೇಶ್ವರ ಹೆಗಡೆ ಕಾಗೇರಿ ಪಾಲಾಗಿದೆ. ಟಿಕೆಟ್ ಮಿಸ್ ಆದ ಬೆನ್ನಲ್ಲೇ ಹೆಗಡೆ ತಮ್ಮ ಕ್ಷೇತ್ರದ ಜನಕ್ಕೆ ಭಾವುಕ ಪತ್ರವನ್ನೂ ಬರೆದಿದ್ದರು. ಇದೆಲ್ಲದರ ನಡುವೆ ಅನಂತ್ ಕುಮಾರ್ ಹೆಗಡೆಯವರನ್ನು ರಾಜ್ಯ ರಾಜಕಾರಣಕ್ಕೆ ತಂದು ಮುಖ್ಯಮಂತ್ರಿ ಮಾಡುವ ಉದ್ದೇಶ ಹೈಕಮಾಂಡ್ ಮುಂದಿದೆ ಎನ್ನುವ ವಿಚಾರ ಭಾರೀ ಚರ್ಚೆಯಾಗುತ್ತಿದೆ.

Advertisement

ಇದನ್ನೂ ಓದಿ: Nepal Mayor Daughter: ಗೋವಾದಲ್ಲಿ ನಾಪತ್ತೆಯಾಗಿದ್ದ ನೇಪಾಳ ಮೇಯರ್ ಪುತ್ರಿ 2 ದಿನಗಳ ಬಳಿಕ ಪತ್ತೆ

ಅನಂತಣ್ಣ ಮನಸ್ಸುಮಾಡಿದರೆ ಏನು ಬೇಕಾದರೂ ಮಾಡಿಯಾರು..! ಎಂಬುದು ಉತ್ತರ ಕನ್ನಡದ ಎಲ್ಲೆಡೆ ಕೇಳುವ ಮಾತು. ಈಗಾಗಲೇ ಅವರು 5 ಬಾರಿ ಸಂಸದರಾಗಿರುವದೇ ಇದಕ್ಕೆ ಸಾಕ್ಷಿ. ಯಾವ ಜನರು ಒಬ್ಬ ನಾಯಕನನ್ನು ಇಷ್ಟು ವರ್ಷಗಳ ಕಾಲ ಗೆಲ್ಲಿಸುವದಿಲ್ಲ. ಅಲ್ಲದೆ ಹೆಗಡೆಯವರ ಪರಿಶ್ರಮದಿಂದ ಉ.ಕ(Uttara Kannada) ದಲ್ಲಿ ಮೂರು ಶಾಸಕರು ಆಯ್ಕೆಯಾಗಿದ್ದರು. ಇದನ್ನೆಲ್ಲಾ ಗಮಿಸಿರುವ ಹೈಕಮಾಂಡ್ ಹೆಗಡೆಯವರನ್ನು ರಾಜ್ಯ ರಾಜಕಾರಣಕ್ಕೆ ತರುವತ್ತ ಚಿತ್ತ ಹರಿಸಿದೆ.

ಅಂದಹಾಗೆ ಈ ಹಿಂದೆಯೇ ಬಿಜೆಪಿ ವರಿಷ್ಠರು ಅನಂತಕುಮಾರ್ ಹೆಗಡೆಯವರನ್ನು ರಾಜ್ಯ ರಾಜಕಾರಣಕ್ಕೆ ತಂದು ಮುಖ್ಯಮಂತ್ರಿ ಮಾಡಬೇಕು ಎಂದು ತೀರ್ಮಾನ ಮಾಡಿದ್ದಾರೆ ಎನ್ನುವ ಸುದ್ದಿ ಭಾರೀ ವೈರಲ್ ಆಗಿತ್ತು. ಇದೀಗ ಆ ಸಮಯ ಬಂದಿದೆ ಎಂಬ ಮಾತೂ ಕೇಳಿಬರುತ್ತಿದೆ. ಆದರೆ ಹೈಕಮಾಂಡ್ ತೀರ್ಮಾನ ಏನು ಎಂದು ಇನ್ನು ಮುಂದೆ ಕಾದು ನೋಡಬೇಕಿದೆ.

Related News

Advertisement
Advertisement