For the best experience, open
https://m.hosakannada.com
on your mobile browser.
Advertisement

Amith Shah: ಪ್ರಜ್ವಲ್ ರೇವಣ್ಣ ಪ್ರಕರಣ- 'ಹೆದರಬೇಡಿ, ನಿಮ್ಮೊಂದಿಗೆ ನಾವಿದ್ದೇವೆ' ಎಂದು ಧಳಪತಿಗಳಿಗೆ ಧೈರ್ಯ ಹೇಳಿದ ಅಮಿತ್ ಶಾ !!

Amith shah: ಅಮಿತ್ ಶಾ(Amith Sha) ಅವರು ದಳಪತಿಗಳಿಗೆ ಧೈರ್ಯ ತುಂಬಿದ್ದು ನಿಮ್ಮಜೊತೆ ನಾವಿದ್ದೇವೆ, ಹೆದರಬೇಡಿ ಎಂದು ಹೇಳಿದ್ದಾರೆ.
12:44 PM May 06, 2024 IST | ಸುದರ್ಶನ್
UpdateAt: 12:44 PM May 06, 2024 IST
amith shah  ಪ್ರಜ್ವಲ್ ರೇವಣ್ಣ ಪ್ರಕರಣ   ಹೆದರಬೇಡಿ  ನಿಮ್ಮೊಂದಿಗೆ ನಾವಿದ್ದೇವೆ  ಎಂದು ಧಳಪತಿಗಳಿಗೆ ಧೈರ್ಯ ಹೇಳಿದ ಅಮಿತ್ ಶಾ

Amith Shah: ಜೆಡಿಎಸ್(JDS) ಸಂಸದ ಪ್ರಜ್ವಲ್ ರೇವಣ್ಣ ಪೆನ್ ಡ್ರೈವ್ ಪ್ರಕರಣ ಧಳಪತಿಗಳ ಜಂಗಾ ಬಲವನ್ನೇ ನಡುಗಿಸಿದೆ. ಅವರ ಅಡಿಪಾಯವನ್ನೇ ಅಲುಗಿಸಿದೆ. ಆದರೀಗ ಬಿಜೆಪಿ ಚಾಣಕ್ಯ ಅಮಿತ್ ಶಾ(Amith Sha) ಅವರು ದಳಪತಿಗಳಿಗೆ ಧೈರ್ಯ ತುಂಬಿದ್ದು ನಿಮ್ಮಜೊತೆ ನಾವಿದ್ದೇವೆ, ಹೆದರಬೇಡಿ ಎಂದು ಹೇಳಿದ್ದಾರೆ.

Advertisement

ಇದನ್ನೂ ಓದಿ: Weather Report: 5 ದಿನಗಳ ಕಾಲ ಭಾರೀ ಮಳೆ! ಈ ಜನರಿಗೆ ಖುಷಿಯೋ ಖುಷಿ

ಹೌದು, ರೇವಣ್ಣ(H D Revanna) ಮತ್ತು ಹೆಚ್'ಡಿ.ರೇವಣ್ಣ ಪ್ರಕರಣ ರಾಜಕೀಯ ಕೆಸರೆರಚಾಟಕ್ಕೆ ಕಾರಣವಾಗಿದ್ದು, ಪ್ರಕರಣ ಜೆಡಿಎಸ್ ನಾಯಕರಿಗೆ ದೊಡ್ಡ ಶಾಕ್ ನೀಡಿದೆ. ಪ್ರಕರಣದಿಂದ ದೇವೇಗೌಡ, ಕುಮಾರಸ್ವಾಮಿ(H D Kumaraswamy) ಸೇರಿದಂತೆ ಜೆಡಿಎಸ್ ನಾಯಕರು ಮುಜುಗರಕ್ಕೊಳಗಾಗಿದ್ದಾರೆ. ಈ ಹಿನ್ನಲೆಯಲ್ಲಿ ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ಹೆಚ್'ಡಿ.ಕುಮಾರಸ್ವಾಮಿಯವರನ್ನು ಭೇಟಿ ಮಾಡಿರುವ ಅಮಿತ್ ಶಾ, ಪೆನ್ ಡ್ರೈವ್ ಪ್ರಕರಣ ಬಗ್ಗೆ ಚರ್ಚೆ ಮಾಡಿ, ಧೈರ್ಯ ಹೇಳಿದ್ದಾರೆಂದು ತಿಳಿದುಬಂದಿದೆ.

Advertisement

ಇದನ್ನೂ ಓದಿ: Job Alert: ಉದ್ಯೋಗ ಹುಡುಕುತ್ತಾ ಇದ್ದೀರಾ? ಈ ವಾರವೇ ಇಲ್ಲಿಗೆ ಅಪ್ಲೈ ಮಾಡಿ

ಅಮಿತ್ ಶಾ ಹೇಳಿದ್ದೇನು?

ಈ ಪ್ರಕರಣದಿಂದ ಮೈತ್ರಿಗೆ ಮುಜುಗರವಾಗಿರುವುದು ನಿಜ. ಈ ಪ್ರಕರಣದಿಂದಾಗಿ ಮೈತ್ರಿಗೆ ಯಾವುದೇ ರೀತಿಯ ಧಕ್ಕೆ ಉಂಟಾಗುವುದಿಲ್ಲ. ಇಂತಹ ಪ್ರಕರಣಗಳು ನಡೆದಾಗ ಯಾವುದೇ ರಾಜಕೀಯ ಪಕ್ಷಗಳಿಗೆ ಮುಜುಗರವಾಗುತ್ತದೆ. ಆದರೆ ನೀವು ಈಗಾಗಲೇ ದೃಢವಾದ ನಿರ್ಧಾರವನ್ನು ತೆಗೆದುಕೊಂಡು ಪ್ರಕರಣದ ಆರೋಪಿ ಸ್ಥಾನದಲ್ಲಿರುವ ಪ್ರಜ್ವಲ್ ರೇವಣ್ಣ ಅವರನ್ನು ಪಕ್ಷದಿಂದ ಅಮಾನತು ಮಾಡಿದ್ದೀರಿ. ಮಹಿಳೆಯನ್ನು ಅಪಹರಿಸಿದ ಪ್ರಕರಣದಲ್ಲಿ ಎಸ್‌ಐಟಿ ಬಂಧನದಲ್ಲಿರುವ ರೇವಣ್ಣ ಅವರನ್ನೂ ಸಹ ನೀವು ಸಮರ್ಥಿಸಿಕೊಂಡಿಲ್ಲ. ಈ ಪ್ರಕರಣ ಹೊರಬಂದ ನಂತರ ನಾನು ನಿಮ್ಮ ಎಲ್ಲ ಹೇಳಿಕೆಗಳನ್ನು ಗಮನಿಸಿದ್ದೇನೆ.

ಪಕ್ಷ ಉಳಿಸುವ ನಿಟ್ಟಿನಲ್ಲಿ ನೀವು ತೆಗೆದುಕೊಳ್ಳುತ್ತಿರುವ ನಿರ್ಧಾರಗಳು ಸ್ವಾಗತಾರ್ಹ. ಕಾನೂನು ಹೋರಾಟದಲ್ಲಿ ನಾವು ನಿಮ್ಮ ಜತೆಗಿರುತ್ತೇವೆ. ನೀವು ಧೈರ್ಯ ಕಳೆದುಕೊಳ್ಳಬೇಡಿ. ನಾವು ನಿಮಗೆ ಸಂಪೂರ್ಣವಾಗಿ ಕಾನೂನಿನ ಹೋರಾಟಕ್ಕೆ ಬೆಂಬಲ ನೀಡಲಿದ್ದೇವೆ, ಕಾನೂನಿಗೆ ತಲೆ ಬಾಗುವುದಾಗಿ ನೀವು ತೆಗೆದುಕೊಂಡಿರುವ ನಿರ್ಧಾರ ಸ್ವಾಗತಾರ್ಹ. ತಪ್ಪು ಮಾಡಿಲ್ಲ ಎಂದರೆ ಖಂಡಿತವಾಗಿಯೂ ಕಾನೂನು ಹೋರಾಟದಲ್ಲಿ ಜಯ ಸಿಕ್ಕೇ ಸಿಗುತ್ತದೆ. ಆತ್ಮವಿಶ್ವಾಸ ಕಳೆದುಕೊಳ್ಳಬೇಡಿ ಎಂದು ವಿಶ್ವಾಸ ತುಂಬುವ ಮಾತುಗಳನ್ನಾಡಿದ್ದಾರೆ ಎಂದು ಹೇಳಲಾಗಿದೆ.

ಹಿಂದೆ ಏನು ಹೇಳಿದ್ದರು ?

ಅಸ್ಸಾಂನ ಗುವಾಹಟಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅಮಿತ್ ಶಾ ಅವರು ಪ್ರಜ್ವಲ್ ರೇವಣ್ಣ ಪ್ರಕರಣದಲ್ಲಿ ಬಿಜೆಪಿಯ ನಿಲುವು ಸ್ಪಷ್ಟವಾಗಿದೆ. ನಾವು ಯಾವತ್ತಿಗೂ ಈ ದೇಶದ ಮಹಿಳಾ ಶಕ್ತಿಯ ಜೊತೆ ನಿಲ್ಲಲಿದ್ದೇವೆ. ಮಹಿಳೆಯರಿಗೆ ಆಗುವ ಅವಮಾನವನ್ನು ಸಹಿಸಲ್ಲ ಎಂದು ಹೇಳಿದ್ದಾರೆ. ಅದಲ್ಲದೇ ಕರ್ನಾಟಕದಲ್ಲಿ ಕಾಂಗ್ರೆಸ್‌ ಸರ್ಕಾರವಿದ್ದು, ಅದು ಕ್ರಮವನ್ನು ತೆಗೆದುಕೊಳ್ಳಬೇಕು, ಪ್ರಜ್ವಲ್‌ ರೇವಣ್ಣ ಪ್ರಕರಣ ರಾಜ್ಯಕ್ಕೆ ಸಂಬಂಧಿಸಿದ್ದು ಎಂದು ಹೇಳಿದ್ದರು.

Advertisement
Advertisement